spot_img
spot_img

ಕ್ರೀಡಾಪಟುಗಳಿಗೆ ಸೌಲಭ್ಯ ಒದಗಿಸಿಕೊಡಬೇಕು – ಡಾ. ಸಿಂದಗಿ

Must Read

- Advertisement -

ಸಿಂದಗಿ: ಇಂದು ಜಗತ್ತು ವೈಜ್ಞಾನಿಕವಾಗಿ ಬೆಳೆಯುತ್ತಿದೆ. ವಿಜ್ಞಾನ ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಿದೆ. ಆದರೆ ಭಾರತೀಯ ಕ್ರೀಡೆಗಳು, ಗ್ರಾಮೀಣ ಕ್ರೀಡೆಗಳು ಮರೆಮಾಚುತ್ತಿವೆ. ಎಂದು ಸಿ.ಎಂ.ಮನಗೂಳಿ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಾಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಬಿ.ಸಿಂದಗಿ ಹೇಳಿದರು.

ಪಟ್ಟಣದ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಕ್ರೀಡಾ ವಿಭಾಗದಿಂದ ಹಮ್ಮಿಕೊಂಡಿರುವ ಭಾರತದ ಹಾಕಿ ಮಾಂತ್ರಿಕ ಧ್ಯಾನ ಚಂದ ಅವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಕ್ರೀಡಾ ದಿನಾಚರಣೆಯನ್ನು ಆಚರಿಸಿ ಮಾತನಾಡಿದರು.

ಕ್ರೀಡೆ ವ್ಯಕ್ತಿತ್ವ ವಿಕಾಸ ಮಾಡುವುದರ ಜೊತೆಗೆ ಅವನ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಇಂತಹ ಮನಷ್ಯನ ಬಹುತೇಕ ವ್ಯಕ್ತಿತ್ವವನ್ನು ರೂಪಿಸುವ ಕ್ರೀಡಾಕ್ಷೇತ್ರಕ್ಕೆ ಸರ್ಕಾರಗಳು ಇನ್ನು ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದಷ್ಟೇ ಮುಖ್ಯವಾದ ಕ್ರೀಡೆ ಪ್ರತಿ ವಿದ್ಯಾರ್ಥಿಯ ಕಲಿಕೆಯ ಜೀವನದ ಭಾಗವಾಗಬೇಕು. ಭಾರತ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಕ್ರೀಡೆಯಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಬೇಕಿದೆ. ಕ್ರೀಡಾಪಟುಗಳಿಗೆ ಸರ್ಕಾರಗಳು, ವಿಶ್ವವಿದ್ಯಾಲಯಗಳು ಉದ್ಯೋಗದಲ್ಲಿ ಮೀಸಲಾತಿಯಂತಹ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಮುಂದಾಗಬೇಕು ಎಂದರು.

- Advertisement -

ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕ ಡಾ.ಅಂಬರೀಶ ಬಿರಾದಾರ, ಪ್ರೊ.ಎಸ್.ಎ.ಜಾಗೀರದಾರ, ಉಪನ್ಯಾಸಕ ಎಫ್.ಎ.ಹಾಲಪ್ಪನವರ, ಸಿಬ್ಬಂದಿಗಳಾದ ಬಿ.ಜಿ.ಚಳ್ಳಗಿ, ಶ್ರೀಶೈಲ ಬೀರಗೊಂಡ, ಸಿದ್ರಾಮ ಕಲಾಲ, ಎಸ್.ಎಸ್.ಕಕ್ಕಸಗೇರಿ, ಎಸ್.ವಾಯ್.ನಾಯ್ಕೋಡಿ, ಮಲ್ಲು ಕಲಾಲ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group