- Advertisement -
ಬೀದರ್ ಹೃದಯ ಭಾಗದಲ್ಲಿ ಇರುವ ಗುಂಪಾ ನಗರ ಗಾಂಧಿಗಂಜ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಅನ್ನು ಗ್ಯಾಸ್ ಕಟರ್ ಬಳಕೆ ಮಾಡಿ ಕಳ್ಳತನ ಮಾಡಿದ ಘಟನೆ ನಡೆದಿದೆ.
ಗಾಂಧಿ ಗಂಜ್ ಪೋಲಿಸ್ ಠಾಣೆಯನ್ನು ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆ ಮೇಲ್ದರ್ಜೆಗೆ ಏರಿಸಲಾಗಿತ್ತು. ಒಬ್ಬರು ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಇದ್ದರೂ ಕೂಡ ಕಳ್ಳತನ ನಡೆದಿದೆ. ಬೀದರನಲ್ಲಿ ಇಂಥ ಘಟನೆ ನಡೆದಿದ್ದು ಇದೇ ಮೊದಲು ಎನ್ನಲಾಗಿದೆ.
- Advertisement -
ಎಷ್ಟು ಹಣ ಎಟಿಎಂ ನಲ್ಲಿ ಇತ್ತು ಎಂಬುದು ಮಾಹಿತಿ ಇನ್ನೂ ನಿಖರವಾಗಿ ಪತ್ತೆ ಆಗಿಲ್ಲ.
ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಪ್ರಕರಣ ದಾಖಲು ಮಾಡಿದ ಮೇಲೆ ಎಷ್ಟು ಹಣವನ್ನು ಖದಿಮರು ತೆಗೆದುಕೊಂಡು ಹೊಗಿದಾರೆ ಎಂಬುದು ಮಾಹಿತಿ ಬರಬಹುದು. ವೀಕೆಂಡ್ ಲಾಕ್ ಡೌನ್ ಹಾಗೂ ರಜಾ ದಿನ ಇರುವ ಕಾರಣ ಬ್ಯಾಂಕಿನವರು ಯಾರೂ ಇನ್ನೂ ಪ್ರಕರಣ ದಾಖಲಿಸಲು ಬಂದಿಲ್ಲ.