ಜಗಳ ಬಿಡಿಸಿದ ಯುವಕನ ಮೇಲೆ ಹಲ್ಲೆ

Must Read

ಬೀದರ – ಇಬ್ಬರ ಜಗಳವನ್ನು ಬಿಡಿಸಿದ ಅಮೇಝಾನ್ ಡೆಲಿವರಿ ಬಾಯ್ ಮೇಲೆ ದಯಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ದುಷ್ಕರ್ಮಿಗಳ ತಂಡವೊಂದು ಅಮೇಝಾನ್ ಅಂಗಡಿಗೆ ನುಗ್ಗಿ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿ ಅಲ್ಲಿನ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಗ್ರಾಹಕರಿಗೆ ತಲುಪಬೇಕಾದ ಡೆಲಿವರಿ ವಿಚಾರದಲ್ಲಿ ಗಲಾಟೆ ನಡೆದು, ನಂತರ ಏಳೆಂಟು ಯುವಕರ ತಂಡ ನ್ಯೂ ಆದರ್ಶ ಕಾಲನಿಯಲ್ಲಿರುವ ಅಮೇಝಾನ್ ಆಫೀಸಿಗೆ ನುಗ್ಗಿ ಡೆಲಿವರಿ ಬಾಯ್ ವಿಜಯ್ ಮೇಲೆ ಹಲ್ಲೆ ನಡೆಸಿದ್ದಾರೆ.
ಇದೀಗ ಅಮೇಝಾನ್ ಪೊಲೀಸರಿಗೆ ದೂರು ನೀಡಿದ್ದು ಗಾಂಧಿಗಂಜ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...

More Articles Like This

error: Content is protected !!
Join WhatsApp Group