spot_img
spot_img

ಗಾಂಜಾ ದಂಧೆಕೋರರಿಂದ ಕಲಬುರಗಿ ಪೊಲೀಸರ ಮೇಲೆ ದಾಳಿ

Must Read

ಕಮಲಾಪುರ ಠಾಣೆ ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಮಾರಣಾಂತಿಕ ಹಲ್ಲೆ

ಕಲಬುರ್ಗಿ – ಗಾಂಜಾ ದಂಧೆಕೋರರನ್ನು ಸೆರೆ ಹಿಡಿಯಲು ಹೋದ ಕಲಬುರ್ಗಿ ಪೊಲೀಸರ ಮೇಲೆ ದಾಳಿ ಮಾಡಿದ ದಂಧೆಕೋರರು ಸಿಪಿಐ ಶ್ರೀಮಂತ ಇಲ್ಲಾಳ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆ ದಾಖಲು ಮಾಡು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನ ತರೂರಿ ಗ್ರಾಮದಲ್ಲಿ ಘಟನೆ ಈ ಘಟನೆ ನಡೆದಿದ್ದು ಇಲ್ಲಾಳ ಅವರ ತಲೆ, ಮುಖ, ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಸದ್ಯಕ್ಕೆ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಗಾಂಜಾ ದಂಧೆ ಕೇಸ್‌ನಲ್ಲಿ ಕಾರ್ಯಾಚರಣೆಗೆ ಹೋಗಿದ್ದ ಸಿಪಿಐ ಇಲ್ಲಾಳ್ ನೇತೃತ್ವದ ಸುಮಾರು ಹತ್ತು ಜನರ ಪೊಲೀಸ್ ತಂಡ, ಕಳೆದ ಎರಡ್ಮೂರು ದಿನಗಳ ಹಿಂದೆ ಗಾಂಜಾ ದಂಧೆಕೋರನನ್ನ ಬಂಧಿಸಿದ್ದರು. ಗಾಂಜಾ ದಂಧೆ ಆರೋಪಿ ಸಂತೋಷ್ ಎಂಬಾತನನ್ನ ಬಂಧಿಸಿದ್ದ ಪೊಲೀಸರು ಗಾಂಜಾ ದಂಧೆ ಮೂಲ ಭೇದಿಸಲು ನಿನ್ನೆ ಮಧ್ಯಾಹ್ನ ಮಹಾರಾಷ್ಟ್ರಕ್ಕೆ ಹೋಗಿದ್ದರು. ಗಾಂಜಾ ಬೆಳೆಯುವ ಹೊಲಗಳಿಗೆ ಹೋಗಿದ್ದ ಸಮಯದಲ್ಲಿ ಕಟ್ಟಿಗೆಗಳಿಂದ ಸುಮಾರು 30-40 ಜನ ಗಾಂಜಾ ದಂಧೆಕೋರರು ದಾಳಿ ಮಾಡಿದರು.

ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ್ ಇಲ್ಲಾಳ್ ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎನ್ನಲಾಗಿದೆ ಆದರೂ  ಪೊಲೀಸರನ್ನೆ ಅಟ್ಟಾಡಿಸಿದ್ದರಿಂದ ಪ್ರಾಣ ಉಳಿಸಿಕೊಳ್ಳಲು ಪೊಲೀಸರು ಪಲಾಯನ ಮಾಡಬೇಕಾಯಿತು. ಅಷ್ಟರಲ್ಲಿಯೇ ಗಾಂಜಾ ದಂಧೆಕೋರರು ಸಿಪಿಐ ಇಲ್ಲಾಳ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಆದರೂ ಅವರನ್ನು ಕರೆತರುವಲ್ಲಿ ಯಶಸ್ವಿಯಾದ ಪೊಲೀಸರು ರಾತ್ರಿ 2.30 ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದರೆನ್ನಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!