ಸಿಂದಗಿ:- ವಿಜಯಪುರ ನಗರದ ಹೊರ ವಲಯದಲ್ಲಿ ಇತ್ತೀಚೆಗೆ ನಡೆದ ಕೂಲಿ ಕಾರ್ಮಿಕರ ಮೇಲಿನ ಹಲ್ಲೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಇಟ್ಟಂಗಿ ಭಟ್ಟಿಯ ಮಾಲೀಕ ಖೇಮು ರಾಠೋಡ ಹಾಗೂ ಅವನ ಸಂಗಡಿಗರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕೇವಲ ನಾಮಕಾವಾಸ್ಥೆ ಬಂಧಿಸಿದರೆ ಸಾಲದು ಹಲ್ಲೆ ಮಾಡಿದವರ ಇಟ್ಟಿಗೆ ಭಟ್ಟಿಯನ್ನು ಸರಕಾರ ಮುಟ್ಟುಗೊಲು ಹಾಕಿಕೊಂಡು ಹಲ್ಲೆಗೊಳಗಾದ ಕುಟುಂಬದ ಕಾರ್ಮಿಕರಾದ ಸದಾಶಿವ ಮಾದರ, ಉಮೇಶ ಮಾದರ, ಸದಾಶಿವ ಮಾದರ ಅವರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ಆದಿಜಾಂಭವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಹೇಳಿದ್ದಾರೆ.
ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು. ಮೂವರು ಕಾರ್ಮಿಕರಿಗೆ ಸೂಕ್ತ ಭದ್ರತೆ ಹಾಗೂ ಸಂಪೂರ್ಣ ಚಿಕಿತ್ಸೆಯ ವೆಚ್ಚ ಹೆಚ್ಚಿನ ಚಿಕಿತ್ಸೆಯ ಜವಾಬ್ದಾರಿ ಹೊರಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಆಡಳಿತ ವ್ಯವಸ್ಥೆ ಹಾಳಾಗಿದೆ. ದಲಿತ ಜನಾಂಗದ ಮೇಲೆ ಪದೆ ಪದೆ ಹಲ್ಲೆಗಳು ಆಗುತ್ತಿದ್ದು ಸರಕಾರ ಎಚ್ಛೆತ್ತುಕೊಂಡು ನ್ಯಾಯ ಕೊಡಿಸುವ ಕೆಲಸ ಮಾಡಬೇಕಾಗಿದೆ. ಈಗಾಗಲೇ ಅಪರಾಧಿಗಳನ್ನು ಬಂದಿಸಿದ್ದು ಸ್ವಾಗತ. ಅದು ನಾಮಕಾವಸ್ಥೆ ಆಗದೆ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಿ ಅವರ ಮೇಲೆ ರೌಡಿ ಶಿಟರ್ ಕೇಸ್ ದಾಖಲು ಮಾಡಿ ಇಟ್ಟಿಗೆ ಭಟ್ಟಿಯ ಪರವಾನಗಿ ರದ್ದು ಪಡಿಸಬೇಕು ಎಂದರು.
ವಿಜಯಪುರ ಜಿಲ್ಲೆಯ ಜಿಲ್ಲಾ ಆಡಳಿತ ಅಧಿಕಾರಿಗಳ ನಡೆಯನ್ನು ಗಮನಿಸಿ, ಒಂದು ವೇಳೆ ಇಟ್ಟಿಗೆ ಭಟ್ಟಿಯ ಮಾಲೀಕರ ಮತ್ತು ಹಿಂಬಾಲಕರ ರಕ್ಷಣೆಯ ಉದ್ದೇಶದಿಂದ ಕಾನೂನು ಸಡಿಲಿಕೆ ಕಂಡು ಬಂದರೆ ಮುಂದಿನ ಹೋರಾಟದ ರೂಪುರೇಷೆ ರೂಪಿಸಬೇಕಾಗುತ್ತದೆ. ಎಂದು ಸಾಯಬಣ್ಣ ದೇವರಮನಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ