ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ; ವಾಹನ ಜಖಂ

Must Read

ಬೀದರ – ಅಕ್ರಮ ಸಾರಾಯಿ ಮಾರಾಟ ಅಡ್ಡೆ ಮೇಲೆ ದಾಳಿ ಮಾಡಿದ ವೇಳೆ ಕುಡುಕರು ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ನಡೆಸಿದ ಪ್ರಕರಣ ವರದಿಯಾಗಿದೆ.

ಬೀದರ್ ನಗರದ ಪ್ರತಾಪ್ ನಗರದಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲು ಹೋಗಿದ್ದ ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ಖದೀಮರು ಹಲ್ಲೆ ಮಾಡಿದರು. ಅವರ ಬೊಲೆರೋ ವಾಹನದ ಮೇಲೆ ದಾಳಿ ಮಾಡಿ ಗಾಜು ಒಡೆದು ಹಾಕಿದ್ದಾರೆ.

ಬಳಿಕ ಸ್ಥಳಕ್ಕೆ ಧಾವಿಸಿದ ಅಬಕಾರಿ ಡೈವೈಎಸ್ಪಿ‌ ಆನಂದ, ಸರ್ಕಲ್ ಇನ್ಸ್ಪೆಕ್ಟರ್ ತ್ರಿವೇದಿ ಮತ್ತು ಪೊಲೀಸ್ ತಂಡ ಗಲಾಟೆ ಮಾಡುತ್ತಿದ್ದ ಖದೀಮರಿಗೆ ಲಾಠಿ ರುಚಿ ತೋರಿಸಿ ಸಂಜುಕುಮಾರ್, ನಂದುಕುಮಾರ್ ಎಂಬ ಇಬ್ಬರನ್ನು ಬಂಧಿಸಿದರು.

ಘಟನೆಯಿಂದ ಪ್ರತಾಪ್ ನಗರದಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group