spot_img
spot_img

ಮನಸೂರೆಗೊಂಡ ಕಲಾಚಾತುರಿ ಶ್ರೀ ಗಣೇಶ ನೃತ್ಯಾಲಯ ವಿದ್ಯಾರ್ಥಿಗಳಿಂದ ರಂಗಾಭಿವಂದನೆ 

Must Read

spot_img
   ನಗರದ ಮಲ್ಲೇಶ್ವರಂ ಸೇವಾ ಸದನದಲ್ಲಿ ಅರಿಶಿನಕುಂಟೆಯ ಶ್ರೀ ಗಣೇಶ ನೃತ್ಯಾಲಯ ರಂಗಾಭಿವಂದನೆ ಕಲಾಚಾತುರಿ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂತು  ನೃತ್ಯ ಗುರುಗಳಾದ ವಿದ್ವಾನ್ ಎಂ ಡಿ ಗಣೇಶ ಮತ್ತು ವಿದುಷಿ ಭಾವನ ಗಣೇಶ ರವರ  ವಿದ್ಯಾರ್ಥಿಗಳಾದ ಕು. ಐಶ್ವರ್ಯ,ಮಾನವಿ, ತನ್ಮಯಿ  ಮತ್ತು ಸಿಂಚನ ಭಾವಪೂರ್ಣವಾಗಿ ನೃತ್ಯ ಪ್ರಸ್ತುತಿ ಪಡಿಸಿ  ಜನಮನ ಸೂರೆಗೊಂಡರು.
 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತಾ ಪೋಷಕರು ತಮ್ಮ ಮಕ್ಕಳ ಪ್ರತಿಭೆಗಳು ಹೊರಹೊಮ್ಮಲು ಇಂತಹ ಶ್ರೇಷ್ಠ ನೃತ್ಯ ಗುರುಗಳ ಬಳಿ ಅಭ್ಯಾಸಿಸಲು ಕಳುಹಿಸಿ ಸಾಂಸ್ಕೃತಿಕ ಕಾರ್ಯಗಳಿಗೆ ಉತ್ತೇಜನ ನೀಡಬೇಕೆಂದು ತಿಳಿಸಿದರು. ನೃತ್ಯಕುಟೀರದ ಕಲಾತ್ಮಕ ನಿರ್ದೇಶಕಿ ಕಲಾ ಯೋಗಿ ಪುರಸ್ಕೃತೆ ವಿದುಷಿ ದೀಪ ಭಟ್ ಮತ್ತು ವಿದ್ವಾನ್ ಮಂಜುನಾಥ ಪುತ್ತೂರು ಭಾಗವಹಿಸಿದ್ದರು.
    ಎಸ್ ನಂಜುಂಡ ರಾವ್ ಸೊಗಸಾದ ನಿರೂಪಣೆಯಲ್ಲಿ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ ಗಾಯನದಲ್ಲಿ , ವಿದ್ವಾನ್ ನಾರಾಯಣಸ್ವಾಮಿ ಮೃದಂಗದಲ್ಲಿ ಹಾಗೂ ವಿದ್ವಾನ್ ಮಹೇಶ ಸ್ವಾಮಿ ಕೊಳಲಿನಲ್ಲಿ ಹಾಗೂ ನಟವಾಂಗದಲ್ಲಿ ವಿದುಷಿ ಭಾವನಾ ಗಣೇಶ್ ತಿಸ್ರ ಏಕ ಅಲರಿಪು, ಆದಿ ತಾಳ ತೋಡಿ ರಾಗದ ರೂಪಮು ಜ್ಜುಚಿ ವರ್ಣಂ, ಮಿಶ್ರ ಚಾಪು ತಾಳದ ರಾಗ ಮಾಲೀಕ ರಾಗದ  ಶಬ್ದಂ, ಆದಿತಾಳ ಕಲ್ಯಾಣಿ ರಾಗದ ಶೃಂಗಪುರಾದೀಶ್ವರಿ ಶಾರದಾ ಕೃತಿ, ಆದಿತಾಳ ಅಭೇರಿ ರಾಗದ ಅಕ್ಕಮಹಾದೇವಿ ವಚನ ಮತ್ತು ಕೊನೆಯಲ್ಲಿ ಆದಿತಾಳದ ನಟಭೈರವಿ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group