ಮೂಡಲಗಿ : ಇಲ್ಲಿನ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮಿದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಲಕ್ಷ್ಮಿದೇವಿ ವಿಶೇಷ ಭಕ್ತಿ ಗೀತೆಯ ಹಾಡಿನ ಆಡಿಯೋ ಬಿಡುಗಡೆ ಶುಕ್ರವಾರ ರಂದು ಸಂಜೆ ದೇವಸ್ಥಾನ ಆವರಣದಲ್ಲಿ ಜರುಗಿತು.
ಈ ಭಕ್ತಿಗೀತೆಯ ಸಾಹಿತ್ಯ ಪ್ರಕಾಶ ಗೋಕಾಕ ಬರೆದಿದ್ದು ಯೇಸು ಸಣ್ಣಕ್ಕಿ ಹಾಡಿದ್ದಾರೆ. ಧ್ವನಿ ಮುದ್ರಣ ಮೂಡಲಗಿಯ ಶ್ರೀ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ರುದ್ರಪ್ಪಾ ವಾಲಿ, ಮಲ್ಲಿಕಾರ್ಜುನ ಢವಳೇಶ್ವರ, ಗಿರೀಶ ಢವಳೇಶ್ವರ, ಬಸವರಾಜ ತೇಲಿ, ಜಾತ್ರಾ ಕಮೀಟಿಯ ಈರಣ್ಣಾ ಸತರಡ್ಡಿ, ಪ್ರದೀಪ ಪೂಜೇರಿ, ಈಶ್ವರ ಢವಳೇಶ್ವರ , ಮಹಾಂತೇಶ ಖಾನಾಪೂರ, ಉದಯ ಬಡಿಗೇರ, ವಿಕಾಸ ಮದಗನ್ನವರ, ಬಸವರಾಜ ಬಡಗನ್ನವರ, ಅಜಪ್ಪಾ ಜರಾಳೆ, ಪ್ರಕಾಶ ಗೋಕಾಕ, ಯೇಸು ಸಣ್ಣಕ್ಕಿ ಇವರನ್ನು ಸತ್ಕರಿಸಲಾಯಿತು. ಮಂಜುನಾಥ ರೇಳೆಕರ, ಆನಂದ ಕೊಳವಿ ಅನೇಕರು ಇದ್ದರು.