Times of ಕರ್ನಾಟಕ
ಜೋತಿಷ್ಯ
ಜ್ಯೋತಿಷ್ಯ: ಗುರು ಚಂಡಾಲ ಯೋಗ
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಅಂಮಗಳ ಯೋಗವಿದ್ದರೆ, ಹಿಡಿದ ಕಾರ್ಯಗಳು ಕೈಗೂಡದೇ ಹೋಗುತ್ತವೆ, ಅವರ ಜೀವನದಿಂದ ಸಂತೋಷ ಮತ್ತು ಶಾಂತಿ ನಾಶವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆ ಮುಂದುವರಿಯುತ್ತದೆ. ಜನರೊಂದಿಗಿನ ಸಂಬಂಧ ಹದಗೆಡುತ್ತದೆ ಮತ್ತು ವ್ಯಕ್ತಿಯು ಅಲೆದಾಡಬೇಕಾಗುತ್ತದೆ. ಶಾಂತಿಯೆಂಬುದು ಮಾಯವಾದರೆ ಗೊತ್ತಲ್ಲ, ಮಾನಸಿಕ ಒತ್ತಡ ಆರಂಭವಾಗಿತ್ತದೆ. ಅದು ಬೇರೆ ಬೇರೆ ರೀತಿಯ ತೊಂದರೆಗಳಿಗೆ ದಾರಿ...
ಕಥೆ
ಕಿವಿಯ ಕಥೆ-ವ್ಯಥೆ!
( ಕಿವಿಯ ಕಥೆ ಓದಿ ಕಿವಿಗೆ ಅರ್ಥವಾಗದಿರುವುದು ವ್ಯಥೆ )
ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ!
ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ!ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ತಲೆಗೆ ಅಂಟಿಸಿದ್ದಾನೆ ಅ ಸೃಷ್ಟಿಕರ್ತ!
ನಮ್ಮ ದುಃಖ ಇಷ್ಟೇ ಆದರೆ ತೊಂದರೆ ಇರಲಿಲ್ಲ.ನಮ್ಮ ಕರ್ತವ್ಯ ಬರೇ ಕೇಳುವುದು...
ಕಥೆ
ವಿನೋದ ರಾ. ಪಾಟೀಲರ ಎರಡು ನೀತಿ ಕಥೆಗಳು
ಬಣ್ಣ ಮುಖ್ಯವಲ್ಲ ಗುಣ ಮುಖ್ಯ
ಸದಾ ಮಳೆಬಿಳುವ ಕಾಡಂಚಿನ ಊರು ಅರೆಹೊಳೆ.ಅಲ್ಲಿ ಸದಾ ಹಸಿರು ಹೊದ್ದಿರುವ ಕಾರಣ ಎಂತವರಿಗೂ ಇಷ್ಟವಾಗದೆ ಇರದು. ಹಳ್ಳ ,ಕೊಳ್ಳ ಝರಿಗಳಿಂದ ಕೂಡಿದ ಊರು.ನೇರಳೆ,ಹಲಸು, ಹೀಗೆ ಕಾಡಿನ ಸಿಹಿಯಾದ ಹಣ್ಣುಗಳು ಹೇರಳವಾಗಿದ್ದ ಕಾರಣ ಆ ಊರಿನಲ್ಲಿ ಆಹಾರಕ್ಕೆ ಕೊರತೆಯಿರಲಿಲ್ಲ.ಇಂತಹ ಊರಿನಲ್ಲಿ ಕೆಂಪಿರುವೆ ಮತ್ತು ಕಪ್ಪಿರುವೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದವು. ಆ ಹಣ್ಣಿನ...
ಕವನ
ಮಕ್ಕಳ ಕಥನ ಕಾವ್ಯ
ಮಕ್ಕಳ ಕಥನ ಕಾವ್ಯ
ಮಾಡಿದ ತಪ್ಪನು ನೆನೆದು
ಆವಾಗ ನಾನು ಚಿಕ್ಕವ
ಮಳೆ ಚಳಿ ಲೆಕ್ಕಿಸದೆ
ಹೊಳೆ ಹಳ್ಳ ಈಜಾಡಿ
ಆಡು ಪಾಡುವ ಜೀವ
ಗುಡ್ಡ ಗವಾರ ತಿರುಗಿದವ
ಗಿಡ ಗಂಟೆ ಏರಿದವ
ಜೇನ ರುಚಿ ಸವಿದವ
ಬಾಲ ಲೋಕದಲಿ
ನನ್ನ ನಾನೇ ಮರೆತವ
ಹುಂಬ ಭಾವ
ಹಲವು ನಿಲುವ
ಮನಸು ಹರಿದಡೆ
ಹೂಗನಸು ಕಾಣೋ ಜೀವ
ಆವಾಗ ನಾನು ಚಿಕ್ಕವ
ಹುಚ್ಚುಚ್ಚು ಭಾಷೆಯಲಿ
ಬಗರಿ ಗಿಚ್ಚಾಡುತ
ವಿಕಾರದಿ ನಗುತಲಿ
ಹಸಿವು ತವಕ ನೀಗುತ
ಹುಸಿಯ ಬಯಕೆ ತೇಲುತ
ಮೃದು ಮಾತಿನಲಿ
ಅಪ್ಪನು ಕರೆದನಂದು
ಎತ್ತುಗಳ ಮೇಯಿಸಲು
ಸರದಿಯು...
ಕವನ
ಸ್ವಾತಂತ್ರ್ಯೋತ್ಸವ ಕವನ
ಹೇಳೋಣ ನನ್ನ ಭಾರತ ಮಹಾನ್
ಕಟ್ಟೋಣ ಇಲ್ಲೇ ಕಾಡನ್ನು ಕಡಿದು
ದೊಡ್ಡ ದೊಡ್ಡ ನಿವೇಶನಗಳಲ್ಲಿ
ಶಾಪಿಂಗ್ ಮಾಲ್ ಗಳನ್ನ
ಕಿತ್ತೆಸೆಯೋಣ ಗುಡಿಸಲುಗಳನ್ನ
ಗೇಣು ಹೊಟ್ಟೆ ತುಂಬಿಸಲು ಹೆಣಗುವ ಮಾನವ ಗೂಡುಗಳನ್ನ
ನಿಮೂ೯ಲ ಮಾಡುತ್ತ ವನಸಿರಿಯನ್ನ
ನಿಮಿ೯ಸೋಣ ಜಲ್ಲಿ ಕಾಂಕ್ರೀಟ್ ಕಾಡುಗಳನ್ನ
ನೀರಿಲ್ಲವೆ ?
ಚಿಂತೆ ಇಲ್ಲ ತರಿಸೋಣ ಬಿಸಲೆರಿ
ಬಾಟಲ್ ಗಳನ್ನ ವಿದೇಶದಿಂದ !
ನಿಮಿ೯ ಸೋಣ ಒಂದು ಹೊಸ ವಿಶ್ವ ವಿಶ್ವಕಮ೯ ನಿಗೂ ಮಾಡಲಾಗದಂಥಾದ್ದು
ನೀತಿ ನೈತಿಕತೆಯನ್ನು ಗಂಟು ಕಟ್ಟಿ
ಬೀಸಾಡೋಣ...
ಲೇಖನ
ನಾಡ ಪ್ರಭು ಕೆಂಪೇಗೌಡರು
ಬೆಂಗಳೂರು ನಗರವನ್ನು ಸ್ಥಾಪಿಸಿದವರು ಕೆಂಪೇಗೌಡರು. ಒಂದಾನೊಂದು ಕಾಲದಲ್ಲಿ ಈ ಪ್ರದೇಶವು ಜನವಸತಿ ಇಲ್ಲದಿದ್ದಾಗ ಹೊಯ್ಸಳರ ರಾಜ ಎರಡನೇ ವೀರಬಲ್ಲಾಳನು ಇಲ್ಲಿಗೆ ಬಂದಿದ್ದರು. ಅಲ್ಲಿ ಕೇವಲ ಒಂದು ಗುಡಿಸಲು ಆ ಗುಡಿಸಿಲಿನಲ್ಲಿ ಮುದುಕಿಯೊಬ್ಬಳು ವಾಸವಾಗಿದ್ದಳು. ಇವನಿಗೆ ಹಸಿವೆ. ಏನಾದರೂ ತಿನ್ನಲು ಕೊಡು ಎಂದಾಗ ಅವಳು ಅವನಿಗೆ ಬೆಂದಿದ್ದ ಕಾಳನ್ನು ಕೊಟ್ಟಳು. ಈ ಕಾರಣದಿಂದಲೇ ಆ ಸ್ಥಳಕ್ಕೆ...
ಸುದ್ದಿಗಳು
ರಾಹುಕಾಲ ತಿಳಿಯುವ ಸುಲಭ ಪಂಚಾಂಗ
ಸಾಮಾನ್ಯವಾಗಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೆ ರಾಹುಕಾಲ ನೋಡುವುದು ರೂಢಿಯಲ್ಲಿ ಇದೆ. ಪ್ರತಿದಿನ ರಾಹು ಕಾಲದ ಘಳಿಗೆ ಬೇರೆ ಇರುತ್ತದೆ. ಅದನ್ನು ತಿಳಿಯಬೇಕಾದರೆ ಈ ಒಂದು ಕೋಷ್ಟಕವನ್ನು ನಾವು ತಿಳಿದುಕೊಳ್ಳಬೇಕು.ಈ ಸರಳ ಕೋಷ್ಟಕದಲ್ಲಿ ಮೊದಲಿನ ಸಾಲು ವಾರಗಳಿಗೆ ಮೀಸಲು. ಎರಡನೇ ಸಾಲು ಮೇಲಿನ ಇಂಗ್ಲೀಷ ಸಾಲಿನ ಎಲ್ಲ ಪದಗಳ ಮೊದಲ ಅಕ್ಷರಗಳು ಇವೆ. ಅವುಗಳಿಗೆ...
ಲೇಖನ
ಪುಸ್ತಕ ಪರಿಚಯ
ಪುಸ್ತಕದ ಹೆಸರು: ಇಂಗ್ಲೆಂಡಿನ ರಾಜ ರಾಣಿಯರ ಕಥೆಗಳುಲೇಖಕರು : ಆಗುಂಬೆ ಎಸ್. ನಟರಾಜ್ಪುಟಗಳು : 352+16, ಬೆಲೆ 250/-ಮುದ್ರಣ ವರ್ಷ : ಮೊದಲ ಮುದ್ರಣ 2019ಪ್ರಕಾಶಕರು : ಎ.ಎಸ್. ಬಿ. ಟ್ರಸ್ಟ್ (ರಿ) 947, 1ನೇ ಮಹಡಿ, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-40ಆಗುಂಬೆ ಎಸ್. ನಟರಾಜ್ ಅವರು ಆಗುಂಬೆಯವರು. ಕೆನರಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರು....
ಕವನ
ಕವನಗಳು
ಶೋಭಾ ಪುರೋಹಿತ, ಎಚ್ ಎನ್ ಸವಿತಾ, ಶರಶ್ಚಂದ್ರ ತಳ್ಳಿಮರಳಿ ರಾಮರಾಜ್ಯವಾಗಲಿ
ಭರತಖಂಡದ ಇತಿಹಾಸದಲ್ಲಿ ಮರೆಯದ ದಿನವಿದು...
ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿಂದು!!
ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನಡೆದುದು..
ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥಹದು!!
ಎನಿತು ಕಾಲದಿಂದ ಎದುರು ನೋಡುತಿದ್ದೆವು...
ಅಂತೂ ಆ ದಿನ ಬಂದಿತಿಂದು ಸಂಭ್ರಮಿಸಿದೆವು!!
ನಮ್ಮದೇ ಮನೆಯಲ್ಲಿ ಅಸಹಾಯಕರಾಗಿದ್ದೆವು!!
ಶ್ರೀರಾಮ ಜನ್ಮಭೂಮಿ ಪಡೆಯುವಲ್ಲಿ ಗೆದ್ದೆವು!!
ತಲೆಯೆತ್ತಲಿದೆ ಕೆಲ ಕಾಲದಲಿ ರಾಮಮಂದಿರ..
ರಾರಾಜಿಸುವನಿಲ್ಲಿ ರಘುವಂಶದ ರಾಮಚಂದಿರ!!
ನೆನೆದುಕೊಂಡರೇ ಅದೇನೋ ಮನದಲಿ ಪುಳಕ..
ಹರಸಬೇಕು ನಮ್ಮನೆಲ್ಲ...
ಕವನ
ಕವನ: ಒಪ್ಪಿಕೊ ಕೃಷ್ಣ
ಒಪ್ಪಿಕೊ ಕೃಷ್ಣ
ಮನೆ ಅಂಗಳದಿ
ಹೆಜ್ಜೆಗಳ ಹಾಕಿ
ಹೃದಯ ಮಂಟಪದಿ
ಬಾ ಎನ್ನುತ
ಸುದಾಮನ ಬೆಲ್ಲ ಅವಲಕ್ಕಿ
ತರತರದ ಉಂಡಿಗಳ
ಮೊಸರು ಕಡೆದು ತೆಗೆದ ಬೆಣ್ಣೆಯ
ಆಕಳ ನೊರೆ ಹಾಲು
ಮಾನಸ ಪೂಜೆಯ ಮಾಡಿ
ಅಪಿ೯ಸುತಿಹೆನು
ಒಪ್ಪಿಕೋ ಕೃಷ್ಣ
ಚಿನ್ನದ ತೊಟ್ಟಿಲ ಕಟ್ಟಿ
ನಿನ್ನ ಮಲಗಿಸಿ ಹಾಡಿ
ತೂಗುವೆನು
ಯಶೋದೆಯಾಗಿ
ಎನ್ನ ಹೃದಯ ಸಿಂಹಾಸನದಿ
ವಿರಾಜಮಾನ
ಆಗು ಬಾ ಕೃಷ್ಣ.
ರಾಧಾ ಶಾಮರಾವ
About Me
12113 POSTS
1 COMMENTS
Latest News
ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ
ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...



