“ಡಾ ಭೇರ್ಯ ರಾಮಕುಮಾರ್” ಹೆಸರಿನಲ್ಲಿಯೇ ಒಂದು ರೀತಿಯ ಅದಮ್ಯ ವಿಶ್ವಾಸ, ಅಗಾಧ ಸಾಹಿತ್ಯ ಜ್ಞಾನವನ್ನು ಹೊಂದಿರುವ ಅಪರೂಪದ ವ್ಯಕ್ತಿತ್ವ ಇವರದು ಎಂದರೆ ಅತಿಶಯೋಕ್ತಿ ಆಗಲಾರದು ಎನ್ನುವುದು ಓದುಗರ ಅಭಿಪ್ರಾಯ.
ಕರ್ನಾಟಕದಲ್ಲಿ ಸಾಹಿತಿಗಳಿಗೆ ಏನೂ ಕೊರತೆ ಇಲ್ಲ ಬಿಡಿ, ಆದರೆ ವರ್ಣರಂಜಿತ ಬದುಕಿನ ಹೋರಾಟಗಳನ್ನು ಅನುಭವಿಸುತ್ತಾ ಸಾಹಿತ್ಯ ಸೇವೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಸಾಹಿತ್ಯ ಮಾತ್ರವಲ್ಲ...
ಗುರುವೆ ಶಕ್ತಿ
ಗುರುವೆನ್ನ ಭಕ್ತಿ
ಗುರುವೆನ್ನ ಶಕ್ತಿ
ಗುರುವೇ ಪರಮೋದ್ಧಾರ
ಗುರುತರ ಜವಾಬ್ದಾರಿಯಲಿ
ಕರುಣೆಯ ಕಾರ್ಪಣ್ಯ ಸಿಂಧು
ಸಹಕಾರಕೆ ಮಾದರಿಯು
ಮಕ್ಕಳ ಪ್ರೀತಿಯಲಿ ಪೊರೆದು
ಗುರಿಯೆಡೆಗೆ ಪಯಣಕೆ
ದಾರಿ ತೋರಿಸುವ ದೀಪ
ತಪ್ಪಾದರೆ ಶಿಕ್ಷಿಸುವ
ನೋವಿನಲಿ ಸ್ಪಂದಿಸುವ
ಸಾಧನೆಗೆ ಬೆನ್ನು ತಟ್ಟುವ
ಬಾಳ ನೌಕೆಯ ದಿಕ್ಸೂಚಿ
ತಿಳಿವಳಿಕೆಯ ಹರಿಸಿ
ಅರಿವಿನ ಧಾರೆಯಲಿ
ಜೀವಿಸಲು ಕಲಿಸಿ
ಪರಿವರ್ತನೆಯ ತೋರಿ
ಮನದ ಕಲ್ಮಶವ ಕಳೆದು
ಕೌಶಲ್ಯ ವೃದ್ಧಿಗೆ
ಸಹನೆಯ ಗುಣದಿ
ವಿಚಾರವಂತಿಕೆಗೆ ಕಾರಣೀಭೂತ
ಸಮಾಜದ ಕೇಂದ್ರ ಬಿಂದು
ನಿರ್ವಹಣೆಗೆ ಹೊಂದಿಸಿ
ಲೆಕ್ಕ ಪಕ್ಕದಿ ಗಮನಿಸಿ
ಸೂಕ್ತ ವ್ಯವಸ್ಥೆ
ಶಕ್ತ ಸಮಾಜ ಕಲ್ಪಿಸಿ
ಸೂಕ್ತ ಪರಿಸರದ ಚಾಲಕ.
ರೇಷ್ಮಾ...
ಶಿಕ್ಷಕರು
ಇವರೇ ನೋಡಿ ಶಿಕ್ಷಕರು
ಸಮಾಜದ ಆಪ್ತ ರಕ್ಷಕರು
ಮಣ್ಣಿನ ಮುದ್ದೆಯ ತಿದ್ದುತ
ಮೂರ್ತಿ ಮಾಡಿದ ಶಿಲ್ಪಕಾರರು
ಮಕ್ಕಳ ಮನವನು ಅರಿತವರು
ಸಹನೆಗೆ ಇವರೇ ಹೆಸರಾಗಿಹರು
ಸಕಲ ಕಲೆಯನು ಬಲ್ಲವರು
ಪ್ರತಿಭೆಯ ಬೆಳಕಿಗೆ ತಂದವರು
ಶಿಕ್ಷಕ ಎನ್ನುವ ಪದದಲ್ಲೆ
ದಿವ್ಯ ಶಕ್ತಿಯು ಅಡಗಿಹುದು
ಚೈತನ್ಯದ ಚಿಲುಮೆ ನೀವಾಗಿರಲು
ಸೇವೆಗಾಗಿ ಮನ ಮಿಡಿದಿಹುದು
ಅಜ್ಞಾನದ ಕತ್ತಲೆ ಆಳಿದವರು
ಜ್ಞಾನ ಜ್ಯೋತಿಯ ಬೆಳಗಿದವರು
ಮಾನವೀಯ ಮೌಲ್ಯಗಳ ತಿಳಿಸಿದರು
ಸಮಾಜದ ಏಳ್ಗೆಗೆ ದುಡಿವವರು
ಸರ್ವ ಸಮಾನತೆ ತಂದವರು
ಜಾತ್ಯತೀತತೆ ಮೆರೆದವರು
ವಿಶ್ವಾಸಕೆ ಬೆಲೆಯನುಕೊಟ್ಟವರು
ನೈತಿಕತೆಯನು ಬೆಳೆಸುವವರು
ಪೂರ್ಣಿಮಾ ಯಲಿಗಾರ
ಶಿಕ್ಷಕಿ...
ನವದೆಹಲಿ - ಭಾರತದ ಸಾರ್ವಭೌಮತ್ವ ಮತ್ತು ರಕ್ಷಣೆ, ರಾಜ್ಯದ ಸುರಕ್ಷತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆಯೆಂದು ಅತ್ಯಂತ ಜನಪ್ರಿಯ ಆನ್ಲೈನ್ ಗೇಮ್ *ಪಬ್ಜಿ* ಸೇರಿದಂತೆ 118 ಚೀನೀ ಮೊಬೈಲ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ನಿರ್ದೇಶನದಂತೆ ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ...
ಸ್ತ್ರೀಯರೆಲ್ಲ ನಿನ್ನಂತೆಯೇ ಇದ್ದರೆ..( ಕೃಷ್ಣ )
ಪುರುಷರೆಲ್ಲ ನಿನ್ನಂತೆಯೇ ಇದ್ದರೆ... ( ಭಾನುಮತಿ)
ಮಹಾಭಾರತ ಯುದ್ಧ ಮುಗಿದಿದೆ ಹತರಾದ ವೀರಾಧಿ ವೀರರ ಚಿತೆಗಳು ದೂರದಲ್ಲಿ ಉರಿಯುತ್ತಿವೆ !... ಅರಮನೆಯ ಊಳಿಗದವರು ಅಲ್ಲಲ್ಲಿ ಅಗ್ನಿಗಳನ್ನು ಸರಿಪಡಿಸುತ್ತಾ ನಿಂತಿದ್ದಾರೆ.
ಇನ್ನೊಂದತ್ತ ಶ್ರೀಕೃಷ್ಣ ಗಂಗೆಯಲ್ಲಿಳಿದು ಸ್ನಾನ ಮಾಡಿ, ಮೈ ಒರೆಸಿಕೊಂಡು, ಮಡಿ ಬಟ್ಟೆಯುಟ್ಟು ಸತ್ತವರಿಗಾಗಿ ಜಲಾಂಜಲಿ ಕೊಡುತ್ತಿದ್ದಾನೆ ..ಅನತಿ ದೂರದಲ್ಲಿ ಒಬ್ಬ ಸ್ತ್ರೀ...
ಜಾತಿ ಬೇಕೇ ? ಮತ ಏಕೆ ?
ಜಾತಿ ಏಕೆ ? ಮತ ಏಕೆ ?
ಧರ್ಮ ಏಕೆ? ಹಿಂಸೆ ಏಕೆ ?
ಕಾಯುವ ದೇವ ಎಲ್ಲರಿಗೊಬ್ಬನಿರಲು,
'ಮನುಜ ಒಂದೇ ಕುಲಂ '
ಧ್ವನಿ ಎಲ್ಲೆಲ್ಲೂ ಮೊಳಗಿರಲು
ಸ್ವಾರ್ಥದ ಮರಳ ಮಹಲನು
ವೈರಸ್ ಗಳೆಂಬ ದುರದೃಷ್ಟದ
ಅಲೆಗಳು,
ನಿರ್ಧಯವಾಗಿ ಕೊಚ್ಚಿಹಾಕುತಿರಲು,
ಮತ್ತೇಕೆ ನಿನಗೆ ,ಅನುದಿನ-ಅನುಕ್ಷಣ
ಜಾತಿ,ಮತ,ಧರ್ಮಗಳ ಹುಲಿವೇಷ !!!
ಕುಡಿವ ನೀರೊಂದೇ,ಹರಿವ ರಕ್ತವೊಂದೇ
ಉಸಿರಾಡುವ ಗಾಳಿಯೊಂದೇ ಇರಲು
ನೋವಾದಾಗ,ನಲಿವಾದಾಗ ಕಣ್ಣಲಿ ಚಿಮ್ಮುವ ಕಂಬನಿಗೆ
ಜಾತಿ,ಮತ,ಧರ್ಮ ಗಳ...
ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ"ಜೋಕ"ಎಂಬ ಮುನಿಯ ಮಗನೆಂದೂ,ಜೇಷ್ಟಾದೇವಿಯ ಮಗನೆಂದೂ ಹೇಳಲಾಗುತ್ತದೆ.ಹುಟ್ಟಿದೊಡನೆ ಆತ ತನ್ನ ಕಾಮುಕ ಪ್ರವೃತ್ತಿಯಿಂದ ಊರವರಿಗೆಲ್ಲ ಹೊರೆಯಾಗಿ ಹೋಗುತ್ತಾನೆ.
ಆತನು ಶಿವನ ಗಣಗಳಲ್ಲಿರುವವನು,ಆತ ಗಣಪತಿಯೊಂದಿಗೆ ಬರುವವನು.ಆದರೆ ಆತನಿಗೆ ಏಳು ದಿನಗಳ ಆಯಸ್ಸು.ಹೀಗೆ ಅನೇಕ ಕಥೆಗಳಿವೆ.
ಒಮ್ಮೆ ಮಳೆ ಹೋಗಿ ಬೆಳೆ ಒಣಗುತ್ತದೆ.ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ.ಅವನು ತನ್ನ ಮೇಲು...
ನಮ್ಮ ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸಬೇಕಾದರೆ ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತುವಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ.
ಇಲ್ಲದಿದ್ದರೆ, ಮನೆಯಲ್ಲಿ ವಾಸ್ತು ದೋಷಗಳು ಇರುವುದರಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು ಅಥವಾ ಬೇರೆಯದೇ ಆದ ಕೆಲವು ಸಮಸ್ಯೆಗಳು ಕಾಡಬಹುದು.
ಆದ್ದರಿಂದ ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಸಂಪತ್ತಿನ ದೇವಿ ಲಕ್ಷ್ಮಿ ದೇವತೆಯೊಂದಿಗೆ ಮನೆಯೊಳಗೆ ಸಕಾರಾತ್ಮಕ...