spot_img
spot_img

ಶಾಲೆಯ ಅಮೂಲ್ಯ ರತ್ನಗಳಿಗೆ ಭರವಸೆ ದೊರಕಲಿ

Must Read

spot_img
- Advertisement -

ಮೂಡಲಗಿ – ಇದೇ ತಿಂಗಳಿನಲ್ಲಿ ಒಂದೇ ವಾರದ ಅವಧಿಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಎರಡು ಖಾಸಗಿ ಶಾಲೆಗಳ ವಾಹನಗಳು ಅಪಘಾತಕ್ಕೆ ಈಡಾಗಿರುವ ಕಳವಳಕಾರಿ ಘಟನೆ ಮೂಡಲಗಿ ತಾಲೂಕಿನಲ್ಲಿ ಜರುಗಿದೆ.

ಶಾಲಾ ವಾಹನಗಳಲ್ಲಿ ಅಮೂಲ್ಯ ರತ್ನಗಳು ಸಂಚರಿಸುತ್ತವೆ. ಅದಕ್ಕೆಂದೇ ವಾಹನಗಳ ಹಿಂದೆ ‘ ಅಮೂಲ್ಯ ರತ್ನಗಳಿವೆ ಸಾಕಷ್ಟು ಅಂತರ ಕಾಯ್ದುಕೊಳ್ಳಿ’ ಎಂದು ಬರೆದಿರುವುದನ್ನು ನಾವು ನೋಡುತ್ತೇವೆ. ಹೀಗೆ ವಾಹನದ ಮೇಲೆ ಕೇವಲ ಬರೆಸುವುದರಿಂದ ಯಾವುದೇ ಪ್ರಯೋಜನವಾಗದು. ಶಾಲಾ ವಾಹನಗಳು ಎಲ್ಲ ರೀತಿಯಿಂದಲೂ ಫಿಟ್ ಆಗಿರಬೇಕಾಗುತ್ತದೆ. ವಾಹನ ಅಷ್ಟೇ ಫಿಟ್ ಆಗಿದ್ದರೆ ಸಾಲದು ವಾಹನ ಚಾಲಕರೂ ಕೂಡ ಎಲ್ಲ ರೀತಿಯಿಂದಲೂ ಫಿಟ್ ಆಗಿರಬೇಕಾಗುತ್ತದೆ. ಚಾಲಕರಿಗೆ ಡ್ರೈವಿಂಗ್ ಲೈಸೆನ್ಸ್ ಇರಬೇಕು, ವಾಹನದಲ್ಲಿ ಒಬ್ಬರು ಸಹಾಯಕರಿರಬೇಕು, ಮಕ್ಕಳು ವಾಹನದಿಂದ ಇಳಿದ ಕೂಡಲೇ ಅಡ್ಡಾದಿಡ್ಡಿಯಾಗಿ ಓಡಾಡದಂತೆ ಅವರನ್ನು ರಸ್ತೆ ದಾಟಿಸಿ ಸಾಧ್ಯವಾದರೆ ಮಕ್ಕಳ ಪಾಲಕರ ಹತ್ತಿರ ಕಳಿಸಿ ಬರಬೇಕಾದ ಜವಾಬ್ದಾರಿ ವಾಹನ ಹೊಂದಿರುವ ಶಾಲೆಯ ಜವಾಬ್ದಾರಿಯಾಗಿರುತ್ತದೆ.

ಇಷ್ಟಾಗಿಯೂ ಕೆಲವೊಮ್ಮೆ ಅಪಘಾತಗಳು ಜರುಗುತ್ತವೆ. ಈ ಪ್ರಕರಣದಲ್ಲಿ ಒಂದು ಶಾಲೆಯ ವಾಹನದ ಚಾಲಕ ಮೊಬೈಲ್ ಬಳಸುತ್ತಿದ್ದರಿಂದ ಬಸ್ ಪಲ್ಟಿ ಆಯಿತೆನ್ನಲಾಗಿದ್ದು ಆತನಿಗೆ ಇದರ ಬಗ್ಗೆ ತಿಳಿವಳಿಕೆ ನೀಡದೇ ಇದ್ದದ್ದು ಆಡಳಿತ ಮಂಡಳಿಯ ಬೇಜವಾಬ್ದಾರಿ ಎನ್ನಬಹುದು. ಅದೃಷ್ಟವಶಾತ್ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜೀವಾಪಾಯವಾಗಿದ್ದರೆ ಅಮೂಲ್ಯ ರತ್ನಗಳನ್ನು ಕಳೆದುಕೊಂಡ ವೇದನೆ ಪಾಲಕರನ್ನು ಜೀವನ ಪರ್ಯಂತ ಕಾಡುವುದು ನಿಜವಾಗುತ್ತದೆ.

- Advertisement -

ಇದರಲ್ಲಿ ಯಾರು ದೋಷಿಯಾಗುತ್ತಾರೆ ? ಬೇಕಾಬಿಟ್ಟಿಯಾಗಿ ಶಾಲೆಗಳಿಗೆ ಅಪಾಯದ ಜಾಗಗಳಲ್ಲಿ ಪರವಾನಿಗೆ ನೀಡುವ ಶಿಕ್ಷಣ ಅಧಿಕಾರಿಗಳು. ಶಾಲೆಗಳು ಮುಖ್ಯರಸ್ತೆಯಿಂದ ಒಳಗೆ ಇದ್ದು ವಾಹನಗಳ ಭರಾಟೆ ಇರದ ಜಾಗದಲ್ಲಿ ಇರಬೇಕು. ಹೊಲಗಳಲ್ಲಿ ಇರುವ ಶಾಲೆಗಳು ಕೆನಾಲ್ ಗಳ ಪಕ್ಕದಲ್ಲಿ ಇರುವಂತೆ ಮೊದಲು ಪರವಾನಿಗೆ ಕೊಡಲೇಬಾರದು. ಯಾಕೆಂದರೆ, ರಸ್ತೆ, ಕಂಪೌಂಡ್ ಎಲ್ಲವೂ ಸರಿಯಿದ್ದರೂ ಕೆಲವೊಮ್ಮೆ ಶಾಲಾ ವಾಹನಗಳು ಅಪಘಾತವಾಗುತ್ತವೆ ಅಂಥದರಲ್ಲಿ ಕೆನಾಲ್ ಮೇಲೆ ವಾಹನ ಹಾದು ಹೋಗುವಾಗ ತೀರಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೂ ಕೆನಾಲ್ ಪಕ್ಕದಲ್ಲಿ ಪಕ್ಕಾ ರಸ್ತೆ ಇರುವುದಿಲ್ಲ ಅದ್ದರಿಂದ ಮಳೆಗಾಲದಲ್ಲಿ ರಸ್ತೆಯೆಲ್ಲ ಕೆಸರುಮಯವಾಗಿ ವಾಹನ ಅತ್ತಿತ್ತ ಜಾರುತ್ತ, ಹೊಯ್ದಾಡುತ್ತ ಹೋಗುತ್ತಿರುತ್ತದೆ. ತುಂಬಿ ಹರಿಯುತ್ತಿರುವ ಕೆನಾಲ್ ಪಕ್ಕ ಶಾಲಾ ವಾಹನ ಹೋಗುವುದು ತೀರಾ ಅಪಾಯಕಾರಿ. ಶಿಕ್ಷಣಾಧಿಕಾರಿಗಳು ಇಂಥ ಶಾಲೆಗಳ ಸ್ಥಳಾಂತರ ಮಾಡಿಸಿದರೆ ಮಕ್ಕಳ ಜೀವಕ್ಕೆ ರಕ್ಷಣೆ ಒದಗಿಸಿದಂತಾಗುತ್ತದೆ.

ಇನ್ನು ವಾಹನ ಚಾಲಕರು ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಶಿಕ್ಷಣಾಧಿಕಾರಿಗಳು, ಆರ್ ಟಿಓ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಆಗಾಗ ಪರಿಶೀಲಿಸುತ್ತ ಇದ್ದರೆ ಒಳ್ಳೆಯದು. ಕೆಲವು ಶಿಕ್ಷಣ ಸಂಸ್ಥೆಗಳು ಒಂದೇ ವಾಹನದ ಪರವಾನಿಗೆ ಪಡೆದು ಎರಡು ಮೂರು ವಾಹನ ಓಡಿಸುತ್ತವೆ. ಒಂದಕ್ಕಿಂತ ಹೆಚ್ಚು ವಾಹನಗಳಿದ್ದರೂ ಒಬ್ಬ ಚಾಲಕ ಮಾತ್ರ ಲೈಸೆನ್ಸ್ ಹೊಂದಿರುತ್ತಾನೆ. ವಾಹನಗಳಲ್ಲಿ ಸುರಕ್ಷತಾ ಕ್ರಮಗಳ ಪಾಲನೆಯಾಗಿರುವುದಿಲ್ಲ….ಇಂಥವೇ ನಿಯಮಗಳ ಬಗ್ಗೆ ಪರಿಶೀಲನೆಯಾಗಬೇಕು.  ಒಂದು ವೇಳೆ ನಿಯಮಗಳ ಉಲ್ಲಂಘನೆಯಾಗಿದ್ದರೆ ಆಡಳಿತ ಮಂಡಳಿಯನ್ನು ಹೊಣೆಗಾರನನ್ನಾಗಿ ಮಾಡಿ ಶಾಲಾ ವಾಹನ ಪರವಾನಿಗೆ ಅದರ ಜೊತೆಗೇ ಶಾಲೆಯ ಪರವಾನಿಗೆ ರದ್ದುಪಡಿಸುವ ಕಠಿಣ ಕ್ರಮಕ್ಕೆ ಮುಂದಾಗಬೇಕು ಅಂದಾಗಲೇ ಅಮೂಲ್ಯ ರತ್ನಗಳಿಗೆ ಒಂದು ಭರವಸೆ ಸಿಕ್ಕಿದಂತಾಗುತ್ತದೆ.

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group