ಸಿಂದಗಿ: ಉಡುಪಿಯ ಬುಡೂಕಾನ ಕರಾಟೆ ಮತ್ತು ಸ್ಪೋರ್ಟ್ಸ ಅಸೋಸಿಯೇಶನ್ ವತಿಯಿಂದ ಮೇ.21 ಮತ್ತು 22 ರಂದು ಹಮ್ಮಿಕೊಂಡ ಬುಡೋಕಾನ ಕರಾಟೆ 2ನೇ ನ್ಯಾಶನಲ್ ಕರಾಟೆ ಚಾಂಪಿಯನ್ಸಿಪ್ ನಲ್ಲಿ ಸಿಂದಗಿ ನಗರದ ವಿದ್ಯಾರ್ಥಿಗಳು ಚಾಂಪಿಯನ್ ಕರಾಟೆ ಕ್ಲಾಸ್ನ 9 ವಿದ್ಯಾರ್ಥಿಗಳು ಭಾಗವಹಿಸಿ ಕಿರಣ ಕುಂಬಾರ , ತಸ್ಮಿಯಾ ಸಿಂದಗಿಕರ, ರಾಹುಲ್ ಪ್ರಥಮ, ಮಲ್ಲಿಕಾರ್ಜುನ, ಹಾಸ್ಮಿಯಾ ದ್ವಿತೀಯ, ಆಯಿಶಾ, ಪ್ರತೀಕ ಕುಮಾರ ಅಧಿಶ , ವಿದ್ಯಾ , ತೃತೀಯ ಸ್ಥಾನ ಪಡೆದು 9 ಪದಕಗಳನ್ನು ತಮ್ಮದಾಗಿಸಿಕೊಂಡು ಸಿಂದಗಿಯ ಕೀರ್ತಿ ಹೆಚ್ಚಿಸಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ತರಬೇತಿ ನೀಡಿದ ಭಾಗಣ್ಣ ಎಸ್. ಲಾಳಸಂಗಿ, ಕರಾಟೆ ಶಿಕ್ಷಕರು ಮತ್ತು ಹಿರಿಯ ಶಿಕ್ಷಕ ಎ ಎಸ್ ಪಟೇಲ, ಅಯೂಬ ನಾಟಿಕಾರ, ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಳಕರ, ಕಾರ್ಯದರ್ಶಿ ವೀರೇಶ ಕೂಟಾರಗಸ್ತಿ, ಸಂಸ್ಥೆಯ ಪ್ರಧಾನ ಸಂಚಾಲಕ ಖಾಜಾಪಟೇಲ ದೊಡ್ಡಮನಿ ಸೇರಿದಂತೆ ಎಲ್ಲಾ ಗುರು ಹಿರಿಯರು ಹಾಗೂ ಪಾಲಕರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.