ಸಿಂದಗಿ – ಕಲಬುರಗಿ ಜಿಲ್ಲಾ ವಿಶ್ವಕರ್ಮ ಹೋರಾಟ ಸಮಿತಿ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ, ಇವರ ಸಂಯುಕ್ತ ಆಶ್ರಯದಲ್ಲಿ ಮೇ 6 ರಂದು ಕರ್ನಾಟಕ ರಾಜ್ಯ ವಿಶ್ವಬ್ರಾಹ್ಮಣ ಪೀಠಾಧಿಪತಿಗಳ ಮತ್ತು ಮಠಾಧಿಪತಿಗಳ ಅಭಿವೃದ್ಧಿ ಸಂಘ (ರಿ) ವಿಜಯಪೂರ ಅಧ್ಯಕ್ಷರು ಹಾಗೂ ತಾಲೂಕಿನ ವಾಕ್ ಸಿದ್ದಿಪುರುಷ ಶ್ರೀ ರಾಮಚಂದ್ರ ಮೂರ್ಝಾವಮಠ ಶ್ರೀಗಳಿಗೆ ರಜತ ಕಿರೀಟ ಧಾರಣೆ ಹಾಗೂ ರಾಜ್ಯಮಟ್ಟದ ವಿವಿಧ ಕೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವಶ್ರೀ ಪ್ರಶಸ್ತಿ ಪ್ರದಾನ ಹಾಗೂ ಧರ್ಮಸಭೆ ಕಾರ್ಯಕ್ರಮ ನಡೆಯಲಿದ್ದು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿಶ್ವಕರ್ಮ ಸ್ವಾಗತ ಸಮಿತಿಯ ಅಧ್ಯಕ್ಷ ಮನೋಹರ ಪೋದ್ದಾರ ಹೇಳಿದರು.
ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲಬುರಗಿಯ ಅಣ್ಣಾರಾವ ಬೆಣ್ಣೂರ ಕಲ್ಯಾಣ ಮಂಟಪದಲ್ಲಿ ರಜತ ಕಿರೀಟ ಧಾರಣೆ ಹಾಗೂ ಸಾಧನೆಗೈದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮದ ನಾಡಿನ ಸರ್ವ ಪೂಜ್ಯರುಗಳ ಸಾನ್ನಿಧ್ಯದಲ್ಲಿ ಸಮಾಜದ ಮುಖಂಡರು ಹಾಗೂ ರಾಜಕೀಯ ಧುರೀಣರು ಆಗಮಿಸಲಿದ್ದಾರೆ ಮತ್ತು ಈ ಕಾರ್ಯಕ್ರಮದ ಆಯೋಜನೆಯನ್ನು ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ವಹಿಸಿಕೊಂಡಿದ್ದಾರೆ. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕುಪ್ಪಣ್ಣ ಪೋದ್ದಾರ ಕೇಳಗಿ. ಕಾರ್ಯಾಧ್ಯಕ್ಷ ಕೇಶವ ಸೀತನೂರ. ಉಪಾಧ್ಯಕ್ಷ ದಶರಥ ಪೋದ್ದಾರ. ಸತೀಶ ಪತ್ತಾರ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಚಪ್ಪ ಪತ್ತಾರ, ದಯಾನಂದ ಪತ್ತಾರ, ಶಿವಾನಂದ ಬಡಿಗೇರ ವಿಶ್ವನಾಥ ಬಡಿಗೇರ ಸೇರಿದಂತೆ ಹಲವರಿದ್ದರು.