ವಿದ್ಯಾರ್ಥಿಗಳಲ್ಲಿ ಪ್ರಾಣಿಗಳ ರಕ್ಷಣೆ ಕುರಿತು ಜಾಗೃತಿ  ಅಗತ್ಯ – ಡಾ. ಪ್ರಶಾಂತ ಕುರಬೇಟ

0
80
ಮೂಡಲಗಿ:ವಿದ್ಯಾರ್ಥಿಗಳಲ್ಲಿ ಪ್ರಾಣಿಗಳ ರಕ್ಷಣೆ ಕುರಿತು ಜಾಗೃತಿ ಅಗತ್ಯವಾಗಿದ್ದು ಪ್ರಾಣಿಗಳ ರಕ್ಷಣೆಯಲ್ಲಿ ಯುವಕರು ಮಹತ್ವದ ಪಾತ್ರ ವಹಿಸಬೇಕು ಮಾನವನ ಜೀವನಕ್ಕೆ ಜೀವಸಂಕಲಗಳು ಪೂರಕವಾಗಿದ್ದು ಅವುಗಳು ನಮಗೆ ಬಹುಉಪಯೋಗಿಗಳಾಗಿ ನಮ್ಮ ಜೀವನದಲ್ಲಿ ಸಹಾಯಕ್ಕೆ ಬರುತ್ತವೆ ಪ್ರಾಣಿ ಪಕ್ಷಿಗಳ ನಿರ್ವಹಣೆಯು ಒಂದು ಕಲೆಯಾಗಿದ್ದು ಪ್ರಾಣಿ ಮತ್ತು ಪಕ್ಷಿಗಳು ಇಂದಿನ ಮಾನವನ
ಜೀವನ ಶೈಲಿಯಿಂದ ತಮ್ಮ ಆಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದು ಅವುಗಳನ್ನು ಸಂರಕ್ಷಿಸುವುದು ನಮ್ಮಲ್ಲರ ಕರ್ತವ್ಯ ಎಂದು ಅವರಾದಿಯ ಪಶು ವೈದಾಧಿಕಾರಿಗಳಾದ ಡಾ ಪ್ರಶಾಂತ ಕುರುಬೇಟ ಹೇಳಿದರು.
ಪಟ್ಟಣದ ಆರ್ ಡಿ ಎಸ್ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಕೋಶದ ವತಿಯಿಂದ ಸಮೀಪದ ದತ್ತು ಗ್ರಾಮ ಮುನ್ಯಾಳದಲ್ಲಿ ಎನ್ ಎನ್ ಎಸ್ ವಾರ್ಷಿಕ ಶಿಬಿರದಲ್ಲಿ ಕಾರ್ಯಕ್ರಮ ನಡೆಯಿತು.
     ದತ್ತು ಗ್ರಾಮ ಮುನ್ಯಾಳದಲ್ಲಿ ಹಮ್ಮಿಕೊಂಡ ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ಮಾತನಾಡಿ ಮಾನವ ಪ್ಲಾಸ್ಟಿಕ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ವಸ್ತುಗಳನ್ನು
ಪರಿಸರದಲ್ಲಿ ಬಿಸಾಡುವದರಿಂದ ಪ್ರಾಣಿ ಪಕ್ಷಿಗಳು ಅವುಗಳನ್ನು ಆಹಾರದ ಭಾಗವಾಗಿ ಸೇವನೆ ಮಾಡಿದಾಗ ಅವುಗಳ ಜೀವಕ್ಕೆ ತೊಂದರೆಯಾಗುತ್ತದೆ ಪ್ಲಾಸ್ಟಿಕ, ಸೂಜಿ, ಬಟ್ಟೆ ಮತ್ತು ಅನುಪಯುಕ್ತ ಇನ್ನಿತರ ಸಾಮಗ್ರಿಗಳನ್ನು ಪರಿಸರದಲ್ಲಿ ಕಂಡ ಕಂಡಲ್ಲಿ ಬಿಸಾಡುವದರಿಂದ ಪರಿಸರ ಹಾಳಾಗುವದರ ಜೊತೆಗೆ ಪ್ರಾಣಿ ಮತ್ತು ಪಕ್ಷಿಗಳ ಜೀವನಕ್ಕೆ ಮಾರಕವಾಗುತ್ತದೆ ಪರಿಸರ ಸಂರಕ್ಷಣೆಯ ಜೊತೆಗೆ ಪ್ರಾಣಿಗಳ ಜೀವ ರಕ್ಷಣೆಗೆ ನಾವೆಲ್ಲರೂ ಮುಂದಾಗೋಣ ಎಂದರು.
ಉಪನ್ಯಾಸಕ ಬಿ, ಎಂ, ಕಬ್ಬೂರೆ ಮಾತನಾಡಿ ಪ್ರಾಣಿಗಳು ಪಕ್ಷಿಗಳು ನಮ್ಮ ಜೀವನದ ಆಧಾರಗಳು ಅವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವಿದ್ಯಾನಿಕೇತನ
ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಸಂಗಮೇಶ ಹಳ್ಳೂರ ವಹಿಸಿಕೊಂಡು ಮಾತನಾಡಿ ಪರಿಸರದ ಕಾಳಜಿಯ ಜೊತೆಗೆ ಪ್ರಾಣಿಗಳ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದಾಗಿದೆ ಎಂದರು.
   ಕಾರ್ಯಕ್ರಮದಲ್ಲಿ ಮಡೆಪ್ಪಾ ಮದಿಹಳ್ಳಿ, ಕೃಷ್ಣಪ್ಪ ಒಂಟಿಗೋಡಿ,  ಸಂಜು ಗಾಂಧಿ ಹೆಬ್ಬಾಳ ಶ್ರೀಶೈಲ ವಡೆಯರ, ಶ್ರೀಶೈಲ ಸೂರನ್ನವರ, ಲಗಮಣ್ಣ ಗೋಣಿ ಮುತ್ತು ಒಡೆಯರ, ಪ್ರಕಾಶ ಚೌಡಕಿ, ರಾಜು ಪತ್ತಾರ, ಸಂಜೀವ ಮಂಟೂರ ಇತರರು ಹಾಜರಿದ್ದರು. ಶಿಬಿರಾರ್ಥಿ ನಿಖಿತಾ ಕುಡಚಿ ನಿರೂಪಿಸಿದರು  ಸೌಜನ್ಯ ಮೂಡಲಗಿ
ಸ್ವಾಗತಿಸಿದರು, ತಿಪ್ಪಣ್ಣ ಜಿರ್ಲಿ ವಂದಿಸಿದರು