spot_img
spot_img

ತಾಯಿ ಎದೆ ಹಾಲು ಮಹತ್ವ ಜಾಗೃತಿ ಕಾರ್ಯಕ್ರಮ

Must Read

spot_img
ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು ಮುಖ್ಯವಾಗಿರುವುದರಿಂದ ತಾಯಿಂಯದಿರು ತಿಳಿದುಕೊಳ್ಳುವುದು ಮುಖ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ ತಿಳಿಸಿದರು.
ಮಂಗಳವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆ. ಎಚ್. ಐ ಕಾಲೇಜ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ಘಟಪ್ರಭಾ ಮತ್ತು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಜರುಗಿದ, “ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು,
  ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ಬೀದಿ ನಾಟಕಗಳ ಮೂಲಕ ಮಹಿಳೆಯರಿಗೆ ತಮ್ಮ ಮಗುವಿಗೆ ನಿರ್ದಿಷ್ಟ ಅವಧಿಯವರೆಗೆ ಹಾಲುಣಿಸಲು ಉದ್ದೇಶದ ಬಗ್ಗೆ ಅರಿವು ಮೂಡಿಸುತ್ತದೆ ಅದಲ್ಲದೇ ಈ ಸಪ್ತಾಹದಲ್ಲಿ ತಾಯಿ ಹಾಲಿನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಮಗುವಿನ ಬೆಳವಣಿಗೆಗೆ ತಾಯಿಯ ಹಾಲು ಎಷ್ಟು ಮುಖ್ಯ ಎನ್ನುವ ಬಗ್ಗೆ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಘಟಪ್ರಭಾದ ಕೆ.ಎಚ್. ಐ ಕಾಲೇಜ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯರಾದ ತೇಜಸ್ವಿನಿ ಹೊಳೆಪ್ಪನ್ನವರ ಮಾತನಾಡಿ, ತಾಯಿ ಎದೆ ಹಾಲು ಉಣಿಸುವಿಕೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ತಾಯಿ ಎದೆಹಾಲು ಅಮೃತ. ಹುಟ್ಟಿದ ಒಂದು ಗಂಟೆಯೊಳಗೆ ಮಗುವಿಗೆ ಹಾಲುಣಿಸಲು ಪ್ರಾರಂಭಿಸಬೇಕು. ಆರು ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ನೀಡಬೇಕು. ಆರು ತಿಂಗಳ ನಂತರ ಎದೆಹಾಲಿನ ಜೊತೆಗೆ ದ್ರವರೂಪದ ಪೋಷಕಾಂಶಯುಕ್ತ ಪೂರಕ ಆಹಾರ ನೀಡಬೇಕು. ಇದರಿಂದ ಶಿಶುವಿನ ಸದೃಢ ಬೆಳವಣಿಗೆಗೆ ಅಗತ್ಯವಾದ ಖನಿಜಾಂಶ, ಪೋಷಕಾಂಶ, ವಿಟಮಿನ್ ದೊರೆಯುತ್ತದೆ ಎಂದರು.
ಇದೇ ವೇಳೆ ಆರೋಗ್ಯ ಕೇಂದ್ರದಲ್ಲಿ  ಘಟಪ್ರಭಾದ ಎಚ್. ಐ ಕಾಲೇಜ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿನಿಯರು ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ಬೀದಿ ನಾಟಕ ಮಾಡುವ ಮೂಲಕ ಆಸ್ಪತ್ರೆಯಲ್ಲಿ ಇರುವಂತ ಬಾನಂತಿಯರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ  ಘಟಪ್ರಭಾದ ಕೆ.ಎಚ್. ಐ ಕಾಲೇಜ ಹಾಗೂ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶೋಭಾ ಸುಲ್ತಾನಪೂರ, ವಿದ್ಯಾರ್ಥಿಗಳಾದ ಲಕ್ಷ್ಮಿ ಸುಂಕದ, ದಾನಮ್ಮ ಸಡಲಿ, ಅರ್ಚನಾ ಪಾಟೀಲ್, ನಯನಾ ಕುಲಕರ್ಣಿ, ಆಶಾ ಚೌವಾನ್ ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group