ಬೆಳಗಾವಿ – ಜಿಲ್ಲಾ ಪಂಚಾಯತ್ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಚಿಕ್ಕೋಡಿ ಹಾಗೂ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ” ಗ್ರಾಮೋದಯ ಬೈಲಹೊಂಗಲ ” ಇವರ ಸಹಯೋಗದೊಂದಿಗೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ದಿ.೧೭ ರಂದು ಗೋಕಾಕ ತಾಲೂಕಿನ ಕೊಳವಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷತೆಯಲ್ಲಿ “ವಸ್ತು ಪ್ರದರ್ಶನ ಹಾಗೂ ಕಲುಷಿತ ನೀರು ಸೇವನೆಯಿಂದ ಅನಾರೋಗ್ಯ ಬಗ್ಗೆ ಮಾಹಿತಿ ಆಂದೋಲನ”ಕ್ಕೆ ಚಾಲನೆ ನೀಡಲಾಯಿತು.
ಜಲ್ ಜೀವನ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯಡಿ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯಗಳ ಸ್ವಚ್ಛತೆ, ,FHTC,OHT, ಮಾದರಿ ಗ್ರಾಮ ದ ಬಗ್ಗೆ ಮಾಹಿತಿ ನೀಡಿದರು. ಜಲ-ಮೂಲಗಳ ಸ್ವಚ್ಚತೆ, ಕಸದ ವ್ಯವಸ್ಥಿತ ನಿರ್ವಹಣೆ, ಮನೆಯ ಮೂಲದಲ್ಲಿಯೇ ಅದರ ವಿಂಗಡನೆ,ದ್ರವ ತ್ಯಾಜ್ಯ ನಿರ್ವಹಣೆ,ಪ್ಲಾಸ್ಟಿಕ್ ನಿಷೇಧ, ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಮೂಲಗಳನ್ನು ಪರೀಕ್ಷೆಯ, ನೀರಿನ ಮೂಲಗಳ ಸುತ್ತಲು ಸ್ವಚ್ಛತೆ,ಗ್ರಾಮದಲ್ಲಿ OHT ಗಳನ್ನು ಸ್ವಚ್ಛಗೊಳಿಸಿ,
ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ, FTK KIT & H2S VIALS ಮುಖಾಂತರ ನೀರಿನ ಗುಣಮಟ್ಟ ಪರೀಕ್ಷೆ, ಶುದ್ಧ ಕುಡಿಯುವ ನೀರಿನ ಘಟಕಗಳು,ಮುಂತಾದ ವಿಷಯಗಳ ಕುರಿತು ISRA ಸಿಬ್ಬಂದಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಶಿಕ್ಷಕರು,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು,
ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಜಿಲ್ಲಾ ಯೋಜನಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.ಒಟ್ಟಾಗಿ ಸುಮಾರು 900ಕ್ಕೂ ಹೆಚ್ಚು ಜನರು ಈ ಆಂದೋಲನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.