ಮೂಡಲಗಿ: ಜನರಲ್ಲಿ ಧರ್ಮದ ಜಾಗೃತಿ ಇದ್ದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿಕ್ಕೆ ಸಾಧ್ಯವಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ತಾಲ್ಲೂಕಿನ ಯಾದವಾಡದ ಬಸವೇಶ್ವರ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಗಜಾನನ ಮಂದಿರದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನವಗ್ರಹ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತದ ಹಿಂದೂತ್ವ ಮತ್ತು ಧಾರ್ಮಿಕ ಆಚರಣೆಗಳ, ಸಂಸ್ಕೃತಿ, ಪರಂಪರೆಯಿಂದ ನಮ್ಮ ದೇಶ ಜಗತ್ತಿನಲ್ಲಿ ಗುರತಿಸಿಕೊಳ್ಳುವಂತಾಗಿದೆ ಎಂದರು.
ಭಾರತದಿಂದ ವಿಭಜನೆಯಾದಾಗ ಬಾಂಗ್ಲಾದಲ್ಲಿ ಶೇ. ೩೦ರಷ್ಟು ಹಿಂದುಗಳು ಇದ್ದರು, ಇಂದು ಶೇ. ೮ರಷ್ಟು ಇಳಿಯುವಂತೆಯಾಗಲು ಹಿಂದುಗಳ ಒಗ್ಗಟ್ಟು ಮತ್ತು ಜಾಗೃತಿಯ ಕೊರತೆ. ದೇಶದ ಭದ್ರತೆಗೆ ಸಂಘಟನೆ ಮತ್ತು ಒಂದಾಗಿ ಬಾಳೋದನ್ನು ಕಲಿಯಬೇಕು ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದ ಅಭಿವೃದ್ಧಿ ಮತ್ತು ಸೌಹಾರ್ದತೆಯನ್ನು ಬೆಳೆಸುತ್ತಿದ್ದಾರೆ. ಅವರ ಸಹಕಾರವನ್ನು ಸ್ಮರಿಸುತ್ತೇನೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಜಗದೀಶ ಮೆಟಗುಡ್ಡರ ಸಹಾಯದಿಂದ ದೇವಸ್ಥಾನಕ್ಕೆ ನಿವೇಶನ ದೊರೆತಿದೆ ಎಂದು ಮೆಟ್ಟಗುಡ್ಡ ಅವರ ಕಾರ್ಯವನ್ನು ಶ್ಲಾಘಿಸಿದರು.
ಬೆಳಗಾವಿ ಜಿಲ್ಲೆಯನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಯ ಬಗ್ಗೆ ಅಧಿವೇಶದನದಲ್ಲಿ ಪ್ರಸ್ತಾಪಿಸಿರುವೆನು. ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಯಾದವಾಡಕ್ಕೆ ಸಮುದಾಯ ಭವನ ಇಲ್ಲವೆ ಗ್ರಾಮಸ್ಥರು ತಿಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಡುತ್ತೇನೆ ಎಂದರು.
ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರು ಮಾತನಾಡಿ, ಗ್ರಾಮಸ್ಥರು ಗಜಾನನ ದೇವಸ್ಥಾನವನ್ನು ಸುಂದರವಾಗಿ ನಿರ್ಮಿಸಿದ್ದು ಶ್ಲಾಘನೀಯವಾಗಿದ್ದು, ಗ್ರಾಮಸ್ಥರ ದೈವಭಕ್ತಿಯು ಮೆಚ್ಚುವಂತದ್ದು ಎಂದರು.
ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಚೌಕಿ ಮಠದ ಶಿವಯೋಗಿ ದೇವರು, ತೊಂಡಿಕಟ್ಟಿ ವೆಂಕಟೇಶ ಮಹಾರಾಜರು, ಸಿದ್ದಪ್ರಭಾ ಮಹಾಸ್ವಾಮಿಗಳು, ಚನ್ನಬಸಪ್ಪ ಮುತ್ಯಾ ಹುಬ್ಬಳ್ಳಿ ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗೋವಿಂದ ಕೊಪ್ಪದ, ರಮೇಶ ಉಟಗಿ, ತಾಲ್ಲೂಕಾ ಪಂಚಾಯ್ತಿ ಮಾಜಿ ಸದಸ್ಯ ಶಂಕರ ಬೆಳಗಲಿ, ಯಾದವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಬೂತಾಳಿ, ಉಪಾಧ್ಯಕ್ಷ ಕಲ್ಮೇಶ ಗಾಣಗಿ, ಡಾ. ಹನಮಂತ ಚಕ್ಕೆನ್ನವರ, ಧರೆಪ್ಪ ಮುಧೋಳ, ಶಿವಪ್ಪ ನ್ಯಾಮಗೌಡರ, ಈರಪ್ಪ ಬಾಗಿ, ಬಸಲಿಂಗಪ್ಪ ಢವಳೇಶ್ವರ, ರಾಮಣ್ಣ ಕೇರಿ, ಸೋಮಶೇಖರ ಕತ್ತಿ, ಈರಯ್ಯ ಗೊಡಚಿ, ಭಗವಂತ ಬಡಿಗೇರ, ರಮೇಶ ಹನಗಂಡಿ, ವಿಶ್ವನಾಥ ಕಲ್ಯಾಣಿ, ಹನಮಂತ ಮೆಣಸಿನಕಾಯಿ, ಮಲ್ಲಪ್ಪ ಕೌಜಲಗಿ, ಮಹಾತೇಶ ಮುದ್ನೂರ, ಚನ್ನಗಿರೆಪ್ಪ ಹುನಗುಂದ, ಶಂಕರಯ್ಯ ಘಂಟಿಮಠ, ಮಲ್ಲಪ್ಪ ಬಾಗಿ ಇದ್ದರು.
ಶೈಲಜಾ ಕೊಕ್ಕರಿ ನಿರೂಪಿಸಿದರು. ಬೃಂಗೇಶ ಹಂಗರಗಿ ವಂದಿಸಿದರು.