ಮೂಡಲಗಿ: ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯೋಜನೆಗಳ ಅರಿವು ಅವಶ್ಯಕವಾಗಿದೆ. ಇಂದು ಅನೇಕ ವಿದ್ಯಾರ್ಥಿಗಳು ಸರಕಾರದ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಸರಕಾರ ವಿದ್ಯಾರ್ಥಿಗಳಿಗಾಗಿ ಅನೇಕ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿ ಜಾರಿಗೆ ರೂಪಿಸುತ್ತಿದೆ ಅವುಗಳ ತಿಳಿವಳಿಕೆ ಹೊಂದಿ ಸರಿಯಾದ ಮಾರ್ಗದರ್ಶನದಲ್ಲಿ ಪ್ರಯೋಜನ
ಪಡೆಯುವಂತಾಗಬೇಕು ಅಲ್ಲದೇ ಪರಿಶಿಷ್ಟ ಜಾತಿ ಪರಿಶಿಷ್ಟ
ಪಂಗಡದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು
ಸಮಾಜಕಲ್ಯಾಣ ಇಲಾಖೆಯಲ್ಲಿ ಇದ್ದು ಅವುಗಳನ್ನು
ಪಡೆದುಕೊಳ್ಳಲು ಸರಿಯಾದ ದಾಖಲೆಗಳನ್ನು ಹೊಂದಿ ಹೆಚ್ಚು
ಪ್ರಯೋಜನ ಪಡೆದುಕೊಳ್ಳಲು ವಿದ್ಯಾರ್ಥಿಗಳು
ಮುಂದಾಗಬೇಕೆಂದು ಮೂಡಲಗಿಯ ಎಸ್ಸಿ,ಎಸ್ಟಿ ಇಲಾಖೆಯ ವಸತಿ ನಿಲಯದ ವ್ಯವಸ್ಥಾಪಕರಾದ ಯಲ್ಲಪ್ಪ ಭಜಂತ್ರಿ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ ಹಾಗೂ ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ಆಯ್ ಕ್ಯೂ ಎಸ್ಸಿ, ಎನ್‌ಎಸ್‌ಎಸ್ ಹಾಗೂ ಪರಿಶಿಷ್ಟ ಜಾತಿ ಹಾಗೂ
ಪರಿಶಿಷ್ಟ ಪಂಗಡದ ಘಟಕಗಳ ಸಹಯೋಗದಲ್ಲಿ
ಹಮ್ಮಿಕೊಂಡಿರುವ ಶಿಷ್ಯವೇತನ ಅಭಿಯಾನ
ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿ ಗೋಕಾಕ ಹಾಗೂ
ಮೂಡಲಗಿ ತಾಲೂಕಗಳ ಸಮಾಜ ಕಲ್ಯಾಣ ಇಲಾಖೆಯ ಡಿಇಓ ಅಪ್ರೋಜ್ ಡೇವಿಡ್ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯ, ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಸ್ವ ಉದ್ಯೋಗಕ್ಕಾಗಿ ಸಹಾಯಧನ, ವಸತಿ ವ್ಯವಸ್ಥೆ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ಇನ್ನಿತರ ಸೌಲಭ್ಯಗಳು ಇರುತ್ತವೆ ಅವುಗಳ ಪ್ರಯೋಜನ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ
ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಜು ಕಡಕೋಳ ಮಾತನಾಡಿ, ಎಸ್ಸಿ,ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಸರಕಾರದ ಸಹಾಯಧನ ಪಡೆಯಲು ಅನುಸರಿಸುವ ಕ್ರಮಗಳು ಹಾಗೂ ಎಸ್ಸಿ, ಎಸ್ಟಿ ಸಮುದಾಯದ ಮೇಲೆ ನಡೆಯುವ ದೌರ್ಜನ್ಯಗಳನ್ನು
ತಡೆಯಲು ಇರುವ ಕಾನೂನು ನಿಯಮಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ
ಪ್ರಾಚಾರ್ಯ ಸತ್ಯಪ್ಪ ಗೋಟೂರ ವಹಿಸಿಕೊಂಡು ಮಾತನಾಡುತ್ತಾ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸರಕಾರದಿಂದ ಶೈಕ್ಷಣಿಕ ಸಹಾಯಧನ ಸಿಗುತ್ತದೆ ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯ ಮೂಲಕ ಹೆಚ್ಚಿನ ಪ್ರೋತ್ಸಾಹ ಇರುವದರಿಂದ ಅದರ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು
ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಕಾಲೇಜು ಎಸ್‌ಸಿ-ಎಸ್‌ಟಿ ನೋಡಲ್ ಅಧಿಕಾರಿ ಸಂಜೀವ ಮಂಟೂರ, ಉಪನ್ಯಾಸಕಿ ಗೀತಾ ಹಿರೇಮಠ, ಮಲ್ಲಪ್ಪ ಪಾಟೀಲ, ಸುನೀಲ ಸತ್ತಿ ಮತ್ತಿತತರು ಹಾಜರಿದ್ದರು ಉಪನ್ಯಾಸಕಿ ರೋಹಿಣಿ ಕಾಂಬಳೆ ನಿರೂಪಿಸಿದರು ಘಟಕಾಧಿಕಾರಿ ಎಮ್.ಬಿ.ಪರಮಶೆಟ್ಟಿ ಸ್ವಾಗತಿಸಿದರು, ಉಪನ್ಯಾಸಕ ರಾಜು ಪತ್ತಾರ
ವಂದಿಸಿದರು.