spot_img
spot_img

ಆಯುಧ ಪೂಜೆ; ಪೌರಾಣಿಕ ಮಹತ್ವ

Must Read

ಆಯುಧಪೂಜೆಯನ್ನು ಆಶ್ವಯುಜ ಶುದ್ಧ ನವಮಿ ತಿಥಿಯಂದು ಆಚರಿಸಲಾಗುತ್ತದೆ.   ಆ ದಿನವನ್ನು “ಮಹಾನವಮಿ” ಎನ್ನುತ್ತಾರೆ.

ಆಯುಧಪೂಜೆ ಅಥವಾ ಅಸ್ತ್ರಪೂಜೆ ದಸರಾ ಉತ್ಸವದ ಒಂದು ಭಾಗ.  ಈ ದಿನ ನಾವು ಉಪಯೋಗಿಸುವ ಎಲ್ಲಾ ರೀತಿಯ ಉಪಕರಣಗಳು, ಆಯುಧಗಳು,  ಯಂತ್ರಗಳು ಎಲ್ಲವನ್ನೂ ಪೂಜಿಸಬೇಕು. ನವರಾತ್ರಿಯ 9ನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುವುದು. ಈ ದಿನ ನಾವು ದಿನನಿತ್ಯ ಜೀವನದಲ್ಲಿ ಬಳಸುವ ಕೃಷಿ ಉಪಕರಣಗಳು, ಗಾಡಿಗಳು, ಯಂತ್ರಗಳನ್ನು ಪೂಜಿಸಲಾಗುವುದು.

ಆಯುಧ ಪೂಜೆಯಂದು ನಾವು ಮಾಡುವ ವೃತ್ತಿಗೆ ಅನುಗುಣವಾಗಿ ಆಯುಧಗಳನ್ನು ಪೂಜಿಸುತ್ತೇವೆ. ಕೃಷಿಕನಿಗೆ ಕತ್ತಿ, ಗುದ್ದಲಿ, ಹಾರೆ, ನೇಗಿಲು, ಪಿಕಾಸು ಇತರೆ ಕೃಷಿ ಉಪಕರಣಗಳನ್ನು ಪೂಜಿಸಿದರೆ ಐಟಿ ಕ್ಷೇತ್ರದಲ್ಲಿ ದುಡಿಯುವವನಿಗೆ ಲ್ಯಾಪ್‌ಟಾಪ್ ಅವಶ್ಯಕ, ಅದನ್ನು ಪೂಜಿಸುತ್ತಾರೆ. ಇನ್ನು ಡ್ರೈವರ್‌ಗಳು ಗಾಡಿಯನ್ನು, ಟೈಲರಿಂಗ್ ಮಾಡುವವರು ಹೊಲಿಗೆ ಯಂತ್ರಗಳನ್ನು ಹೀಗೆ ತಮ್ಮ ವೃತ್ತಿಗೆ ಸಹಾಯವಾಗುವ ಉಪಕರಣಗಳನ್ನು ಪೂಜಿಸಲಾಗುವುದು.

ಹೀಗೆ ನಮ್ಮ ಬದುಕು ನಡೆಸಲು ಅನಕೂಲಕರವಾಗಿರುವ ಉಪಕರಣಗಳನ್ನು ಪೂಜಿಸಲಾಗುವುದು.

ಪೌರಾಣಿಕ ಹಿನ್ನೆಲೆ:

ಚಾಮುಂಡೇಶ್ವರಿ ದೇವಿಯ ರಾಕ್ಷಸ ಮಹಿಷಾಸುರನ ವಿರುದ್ಧದ ಯುದ್ಧದ ಹಿಂದಿನ ದಿನ ಆಯುಧ ಪೂಜೆಯನ್ನು ನಡೆಸಲಾಯಿತು. ಆಕೆ ಯುದ್ಧಕ್ಕೆ ಹೊರಡುವ ಮೊದಲು ಅವಳ ಎಲ್ಲಾ ಆಯುಧಗಳನ್ನು ಪೂಜಿಸಲಾಯಿತು ಎಂದು ಪುರಾಣ ಹೇಳುತ್ತದೆ. ನಂತರದ ದಿನವು ರಾಕ್ಷಸನ ವಿರುದ್ಧದ ಯುದ್ಧದಲ್ಲಿ ಅವಳ ವಿಜಯದ ಆಚರಣೆಯಾಗಿದೆ.

ಈ ದಿನದಂದು ಮೈಸೂರು ಅರಮನೆಯಲ್ಲಿರುವ ಎಲ್ಲಾ ಆಯುಧಗಳನ್ನು ನವಮಿಯಂದು ಮಹಾರಾಜರು ಅಂಗಳದಲ್ಲಿ ಪೂಜಿಸುತ್ತಾರೆ. ಅಲ್ಲದೆ, ಎಲ್ಲಾ ಸಾರಿಗೆ ವಾಹನಗಳು, ಹಸುಗಳು ಮತ್ತು ಕುದುರೆಗಳನ್ನು ಸಹ ಪೂಜಿಸಲಾಗುತ್ತದೆ.

ದುರ್ಗೆಯು ಚಾಮುಂಡಿಯ ಅವತಾರ ತಾಳಿ ರಾಕ್ಷಸ ಮಹಿಷಾಸುರನನ್ನು ಸಂಹರಿಸುತ್ತಾಳೆ, ನಂತರ ತಾನು ರಾಕ್ಷಸನನ್ನು ಸಂಹರಿಸಲು ಬಳಸಿದ ಆಯುಧವನ್ನು ಭೂಮಿಯಲ್ಲೇ ಬಿಟ್ಟು ಹೋದಳು, ಆ ಆಯುಧವನ್ನು ತಂದು ಪೂಜಿಸಲಾಯಿತು, ಅಲ್ಲಿಂದ ಆಯುಧ ಪೂಜೆ ಆಚರಣೆಗೆ ಬಂತು ಎಂದು ಹೇಳಲಾಗುವುದು.

ಆಯುಧ ಪೂಜೆ ಯಾವುದೋ ಆಯುಧವಿಟ್ಟು ಪೂಜೆ ಮಾಡುವುದಲ್ಲ, ನಾವು ನಮ್ಮ ವೃತ್ತಿ ಬದುಕಿಗೆ ಬಳಸುವ ಆಯುಧ – ಉಪಕರಣಗಳನ್ನು ಪೂಜಿಸಲಾಗುವುದು, ಆದ್ದರಿಂದ ಈ ಪೂಜೆಗೂ ನಮ್ಮ ಭಾವನೆಗಳಿಗೂ ತುಂಬಾನೇ ಸಂಬಂಧವಿದೆ. ನಮಗೆ ಅನ್ನ ಹಾಕುತ್ತಿರುವ, ನಮ್ಮ ಬದುಕನ್ನು ಮತ್ತಷ್ಟು ಸರಳವಾಗಿಸಿರುವ ಉಪಕರಣಗಳನ್ನು ಪೂಜಿಸಲಾಗುವುದು.

ವಿಜಯದಶಮಿಯ ದಿನದಂದು ಪಾಂಡವ ಸಹೋದರ ಅರ್ಜುನನು ವಾಣಿ ಮರದಲ್ಲಿ ಬಚ್ಚಿಟ್ಟಿದ್ದ ತನ್ನ ಶಸ್ತ್ರವನ್ನು ವಾಪಸು ಪಡೆದಿದ್ದೂ ಈ ಸಂದರ್ಭದಲ್ಲಿ, ಆದ್ದರಿಂದ ಈ ಆಯುಧಪೂಜೆಯ ಮಹತ್ವ ಹೆಚ್ಚಿದೆ. ಮಾರುವೇಷಕ್ಕೂ ಮುನ್ನ ಕಟ್ಟಿ ಬಚ್ಚಿಟ್ಟಿದ್ದ ಆಯುಧಗಳನ್ನು ತಮ್ಮ ವನವಾಸ ಮುಗಿದ ಬಳಿಕ ಪಾಂಡವರು ಕುರುಕ್ಷೇತ್ರ ಯುದ್ಧಕ್ಕಾಗಿ ವಾಪಸು ತೆಗೆದುಕೊಂಡರು.

ಆಚರಣೆ:

ಆಯುಧ ಪೂಜೆಯ ಹಿಂದಿನ ದಿನವೇ ಮನೆಯನ್ನು ಶುದ್ಧ ಮಾಡಬೇಕು. ಎಲ್ಲಾ ಉಪಕರಣಗಳನ್ನು ಶುದ್ಧ ಮಾಡಬೇಕು. ನಂತರ ಅವುಗಳಿಗೆ ಕುಂಕುಮ ಹಚ್ಚಿ, ಆರತಿ ಎತ್ತಬೇಕು. ಗಾಡಿಯ ಮುಂದೆ ಕುಂಬಳಕಾಯಿಗೆ ಕುಂಕುಮ, ನಾಣ್ಯ ಹಾಕಿ ಅದನ್ನು ಗಾಡಿ ಮುಂದೆ ಒಡೆಯಲಾಗುವುದು. ಈ ದಿನ ಕಬ್ಬು, ಬಾಳೆಹಣ್ಣು, ಅವಲಕ್ಕಿ, ಸಿಹಿ ತಿನಿಸುಗಳನ್ನು ಬಳಸಿ ಪ್ರಸಾದ ತಯಾರಿಸಲಾಗುವುದು.


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!