spot_img
spot_img

ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಆಗ್ರಹ

Must Read

ಸಿಂದಗಿ: ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವ ಹಾಗೂ ಸತ್ಯ ಪ್ರತಿಪಾದನಾ ಸತ್ಯಾಗ್ರಹವನ್ನು ಮಾಡುತ್ತಿರುವ ಬೇಡ ಜಂಗಮರನ್ನು ಬಂಧಿಸಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸಾರಂಗಮಠದಿಂದ ಹೊರಟ ಬ್ರಹತ್ ಪ್ರತಿಭಟನಾ ಮೆರವಣಿಗೆಯು ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ಟಿಪ್ಪು ಸುಲ್ತಾನ ವೃತ್ತದಿಂದ ಡಾ. ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಛೇರಿಯ ಆವರಣದಲ್ಲಿ ಸಮಾವೇಶಗೊಂಡು ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರಿಗೆ ಮನವಿ ಸಲ್ಲಿಸಿದರು.

ಆಲಮೇಲದ ಚಂದ್ರಶೇಖರ ಶ್ರೀಗಳು, ಶಿವಕುಮಾರ ಮಠಪತಿ ಮಾತನಾಡಿ, ಬೇಡ ಜಂಗಮ ಹೋರಾಟದ ನಾಡಿನ ಪರಮ ಪೂಜ್ಯ ಮಠಾಧೀಶರ ಮತ್ತು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ.ಡಿ.ಹಿರೇಮಠ ಇವರ ನೇತೃತ್ವದಲ್ಲಿ ಬೇಡಜಂಗಮ ಸತ್ಯ ಪ್ರತಿಪಾದನಾ ಹೋರಾಟವು ಕಳೆದ ಜೂ 5 ರಂದು ಮುಖ್ಯಮಂತ್ರಿಗಳವರೆಗೆ ಪಾದಯಾತ್ರೆ ಹೋರಾಟ ಸಂದರ್ಭದಲ್ಲಿ ಅಧ್ಯಕ್ಷರನ್ನು ಮಠಾಧೀಶರನ್ನು ಹಾಗೂ ಅಪಾರ ಬೇಡ ಜಂಗಮರನ್ನು ಬಂಧನ ಮಾಡಿದ್ದು ಸಂವಿಧಾನ ಬಾಹಿರ ಮತ್ತು ಸಂವಿಧಾನ ದತ್ತವಾದ ಎಲ್ಲ ಹಕ್ಕುಗಳ ಉಲ್ಲಂಘನೆಯಾಗಿದ್ದು ಇದನ್ನು ನಮ್ಮ ಬೇಡ ಜಂಗಮ ಸಮಾಜ ಮತ್ತು ಅವರ ಭಕ್ತರು ಬಲವಾಗಿ ಖಂಡಿಸುತ್ತೇವೆ. ಮತ್ತು ಪ್ರಜ್ಞಾವಂತಿಕೆ ಮತ್ತು ಸರಳತೆಯ ಹೋರಾಟ ಮಾಡುವುದು ಜಂಗಮ ಹೋರಾಟವಾಗಿದೆ ಹಾಗೂ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಸುವ ಅನಿವಾರ್ಯತೆಯೂ ಇದೆ ಕಾರಣ ಪ್ರತಿಯೊಬ್ಬ ಜಂಗಮರು ಸರಕಾರಕ್ಕೆ ಅರ್ಜಿ ಸಲ್ಲಿಸಿ ಸಮಸ್ಯೆಯನ್ನು ಸರಳೀಕರಣಗೊಳಿಸಿ ಶೀಘ್ರ ಬಗೆಹರಿಸಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶ ಹೊರಡಿಸುವವರೆಗೂ ಹೋರಾಟ ನಿಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೇರಟಗಿಯ ಕುಂಟೋಜಿ ಮಠದ ಶ್ರೀಗಳು ಮಾತನಾಡಿ, ಜಂಗಮರ ಜೋಳಿಗೆ ಹಿಟ್ಟು ಹಾರಿತೆಂದರೆ ಅದು ಬರೀ ಧೂಳಲ್ಲ ಸರಕಾರವನ್ನೆ ಧೂಳಿಪಟ ಮಾಡುವ ತಾಕತ್ತು ಈ ಜಂಗಮರಿಗಿದೆ. ಸ್ವತಂತ್ರ ಭಾರತದಲ್ಲಿ 101 ಮಿಸಲಾತಿ ಪಟ್ಟಿಯಲ್ಲಿ ಬೇಡಜಂಗಮವೂ ಕೂಡಾ ಇದೆ ಆದರೆ 70 ವರ್ಷದಿಂದ ಈ ಮೌಢ್ಯತೆಯಿಂದ ಮೀಸಲಾತಿ ಪಡೆದುಕೊಳ್ಳುವಲ್ಲಿ ಪ್ರಯತ್ನಿಸಿಲ್ಲ. ರಾಜ್ಯದ ಬಿಜೆಪಿ ಸರಕಾರ ಜನಿವಾರ ಮತ್ತು ಶಿವದಾರ ಕೈ ಹಿಡಿದಿದ್ದರಿಂದ ಸರಕಾರ ರಚನೆಯಾಗಿದೆ ಇದು ಕಾಡುಸಿದ್ಧರ ಸರಕಾರವಲ್ಲ ಸಿದ್ದರ ಸರಕಾರ ಎನ್ನುವುದನ್ನು ಸಾಬೀತು ಪಡಿಸಲು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಭೇಟಿ ನೀಡಿ ಕೆಲವು ದಿನಗಳಲ್ಲಿ ಈ ಸಮಾಜಕ್ಕೆ ಎಸ್.ಸಿ ಸರ್ಟಿಫಿಕೇಟ್ ನೀಡಲು ಆದೇಶ ನೀಡುತ್ತೇನೆ ಎಂದು ಭರವಸೆ ನೀಡಿದ್ದು ಸ್ವಾಗತಾರ್ಹ ಆದರೆ ಈ ಸರಕಾರ 20 ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದು ಅವರಿಗೆ ಮುಂದಿನ ಚುನಾವಣೆಯಲ್ಲಿ ಜಂಗಮರು ತಕ್ಕ ಉತ್ತರ ನೀಡಲಿದ್ದಾರೆ ಎಚ್ಚರಿಕೆ ನೀಡಿದರು.

ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಬೇಡ ಜಂಗಮ ಸಂಘಟನೆಗಳ ಒಕ್ಕೂಟ ತಾಲೂಕಾಧ್ಯಕ್ಷ ಶಂಕ್ರಯ್ಯ ಹಿರೇಮಠ, ಶೈಲಜಾ ಸ್ಥಾವರಮಠ ಮಾತನಾಡಿದರು.

ಈ ಸಂದರ್ಭದಲ್ಲಿ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಬೋರಗಿಯ ತಪೋರತ್ನ ಮಹಾಲಿಂಗೇಶ್ವರ ಸ್ವಾಮಿಗಳು, ಚಿಕ್ಕಲ್ಲಾಪುರದ ಮರಯ್ಯ ಸ್ವಾಮಿಗಳು, ಹರನಾಳದ ಗುರುಸಂಗನಬಸವ ಸ್ವಾಮಿಗಳು, ಶಿವಾನಂದ ಶಿವಾಚಾರ್ಯರು, ಶಿವಬಸವ ಶ್ರೀಗಳು, ಮಡಿವಾಳ ಶ್ರೀಗಳು, ಅಭಿನವ ಮರಳೇಂದ್ರ ಶ್ರೀಗಳು, ಕನ್ನೋಳ್ಳಿಯ ಸಿದ್ದಲಿಂಗ ಶ್ರೀಗಳು, ಬಸವರಾಜ ವಸ್ತ್ರದ, ಶ್ರೀಶೈಲ ನಂದಿಕೋಲ, ಶರಣಯ್ಯ ಮಠ, ಸರಸ್ವತಿ ಮಠ, ಆರ್.ಎಸ್.ಹಿರೇಮಠ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಮಾಜದ ನೂರಾರು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!