“ಬದುಕು ಬಂಡಿ” ಸಿನೆಮಾ ಬಿಡುಗಡೆ ಪೂರ್ವಭಾವೀ ಸಭೆ.

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಧಾರವಾಡ: ನವರಸ ಸ್ನೇಹಿತರ ವೇದಿಕೆ ಮತ್ತು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಆಶ್ರಯದಲ್ಲಿ ಬದುಕು ಬಂಡಿ ಸಿನೆಮಾ ಬಿಡುಗಡೆ ಆಗಲಿದ್ದು, ಸಿನೆಮಾ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯದ ವಿಶಿಷ್ಟವಾದ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರು ಹಾಗೂ ವಿವಿಧ ರಂಗದ ಶ್ರಮಜೀವಿಗಳನ್ನು ಗುರುತಿಸಿ ಶಿಕ್ಷಕರಿಗೆ ಶಿಕ್ಷಕರತ್ನ ವಿವಿಧ ರಂಗದ ಸಾಧಕರಿಗೆ ಶ್ರಮಿಕರತ್ನ ರಾಜ್ಯ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಂಸ್ಥೆಯ ಗೌರವಾದ್ಯಕ್ಷರು ಭೀಮಪ್ಪ ಕಾಸಾಯಿ ತಿಳಿಸಿದರು,

ಅವರು ಧಾರವಾಡದ ಟೀಚರ್ಸ ಸೊಸೈಟಿ ಕೊಪ್ಪದಕೇರಿಯಲ್ಲಿ ಜರುಗಿದ ಪೂರ್ವ ಭಾವೀ ಸಭೆಯಲ್ಲಿ ಮಾತನಾಡಿದರು.

- Advertisement -

ಇದೇ ಸಂದರ್ಭದಲ್ಲಿ ಸಂಸ್ಥೆಗೆ ಕೆಲ ಪದಾಧಿಕಾರಿಗಳನ್ನು ಬದಲಿಸಿ ಆಜೀವ ಸದಸ್ಯತ್ವವನ್ನು ಪಡೆದವರನ್ನು ಸೇರಿಸಲಾಯಿತು, ಜೊತೆಗೆ ಕೆಲವು ಜಿಲ್ಲೆಗಳಿಗೆ ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಲಾಯಿತು, ಮಹಾಪೋಷಕರಾಗಿ ಲೂಸಿ ಸಾಲ್ಡಾನ ಅವರನ್ನು ಗೌರವ ಸಲಹೆಗಾರರರಾಗಿ ಆರ್ ನಾರಾಯಣಸ್ವಾಮಿ ಚಿಂತಾಮಣಿ ವಿದ್ಯಾ ನಾಡಿಗೇರ ಗುರುಪುತ್ರಪ್ಪ ಶಿರೋಳ ಡಾ, ರೇಣುಕಾ ಅಮಲಜರಿ, ಗುರು ತಿಗಡಿ ಅಶೋಕ ಸಜ್ಜನ, ಶಂಕರ ಘಟ್ಟಿ ಕಾಶಪ್ಪ ದೊಡವಾಡ, ವಾಯ್ ಬಿ ಕಡಕೋಳ ಇವರುಗಳನ್ನು ಆಯ್ಕೆ ಮಾಡಲಾಯಿತು ಎಂದು ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ತಿಳಿಸಿದರು.

ಸಂಸ್ಥೆಯ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸರಕಾರಿ ಶಾಲೆಗಳಿಗೆ ದತ್ತಿ ನೀಡುವುದು, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ, ನೈತಿಕ ಶಿಕ್ಷಣದ ಕುರಿತು ಬಿಡುವಿನ ವೇಳೆಯಲ್ಲಿ ಜಿಲ್ಲೆಯಾದ್ಯಂತ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ, ಜಿಲ್ಲಾ ಸಂಚಾಲಕರು ತಮ್ಮ ತಮ್ಮ ಜಿಲ್ಲೆಯಲ್ಲಿ ಸಮಾಜ ಉಪಯೋಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ ಸಭೆಗೆ ತಿಳಿಸಿದರು. ಸಂಸ್ಥೆಯ ಪ್ರಮುಖರಾದ ಅಜೀತಸಿಂಗ ರಜಪೂತ, ವಿ ಎನ್ ಕೀರ್ತಿವತಿ ಹಸೀನ ಸಮುದ್ರಿ, ಸಂಜಯ ಕೋಡಿ ಫಕ್ಕಿರಪ್ಪ ಮಡಿವಾಳರ, ಸುರೇಶ ಗೋವಿಂದರಡ್ಡಿ, ಆರ್ ಎಸ್ ಹಿರೇಗೌಡರ ಮುಂತಾದವರು ಇದ್ದರು.

ಲೂಸಿ ಸಾಲ್ಡಾನ ತ್ಯಾಗಮಯಿ, ಈ ನಾಡು ಕಂಡ ಅತ್ಯಂತ ಶ್ರೇಷ್ಠ ಶಿಕ್ಷಕಿ – ಭೀಮಪ್ಪ ಕಾಸಾಯಿ.

ಲೂಸಿ ಸಾಲ್ಡಾನ ಅವರು ಈ ನಾಡಿಗೆ ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ, ಸಂಸ್ಥೆಯ ಬೆಳವಣಿಗೆಗೆ ನಾವೆಲ್ಲರೂ ಬದ್ಧರಾಗೋಣ. ಜೊತೆಗೆ ಸಂಸ್ಥೆಯ ವತಿಯಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸೋಣ, ಈ ನಾಡಿನಲ್ಲಿ ಯುವಕರು ಅತ್ಯಾಚಾರ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ವರದಕ್ಷಿಣೆ, ಮೂಢನಂಬಿಕೆ, ಕುಡಿತದಂತಹ ಕೆಟ್ಟ ಕಾರ್ಯಗಳು ಹೆಚ್ಚುತ್ತಿವೆ ಇದನ್ನು ತಪ್ಪಿಸಲು ಜನಜಾಗೃತಿ ಮೂಲಕ ಯುವಕರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಸಂಸ್ಥೆಯ ಮೂಲಕ ಮಾಡಲಾಗುವುದು ಎಂದು ಸಂಸ್ಥೆಯ ಗೌರವಾಧ್ಯಕ್ಷರಾದ ಭೀಮಪ್ಪ ಕಾಸಾಯಿ ತಿಳಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!