ಮೂಡಲಗಿ – ಮೂಡಲಗಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಎಲ್ ಕೆಜಿ ವರ್ಗದ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು.
ಪತ್ರಕರ್ತ ಸುಭಾಸ ಕಡಾಡಿ ಮಕ್ಕಳಿಗೆ ಬ್ಯಾಗ್ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಮ್ ಸಿ ಅಧ್ಯಕ್ಷ ಬಿಚ್ವು ಝಂಡೇಕುರುಬರ ವಹಿಸಿದ್ದರು.
ಮುಖ್ಯೋಪಾಧ್ಯಾಯ ಸುರೇಶ ಕೋಪರ್ಡೆ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದಕ್ಕೆ ಎಸ್ ಡಿಎಂಸಿ ಸೇರಿದಂತೆ ತಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ವರ್ಗ ಶಿಕ್ಷಕಿ ಬಡಿಗೇರ ಅವರು ಕಡಿಮೆ ಸಮಯದಲ್ಲಿಯೇ ಎಲ್ ಕೆಜಿ ಕ್ಲಾಸಿಗೆ ೨೫ ಮಕ್ಕಳನ್ನು ಸೇರಿಸಿದ್ದು ಶ್ಲಾಘನೀಯ ಇದೇ ರೀತಿ ಎಲ್ಲರೂ ಪ್ರಯತ್ನಿಸಿದರೆ ಸರ್ಕಾರಿ ಶಾಲೆಯಲ್ಲಿ ಶಾಲಾ ದಾಖಲಾತಿ ಹೆಚ್ಚಳವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಬ್ಯಾಗ್ ವಿತರಿಸಿದ ಸುಭಾಸ ಕಡಾಡಿ ಅವರನ್ನು ಸತ್ಕರಿಸಲಾಯಿತು.
ಪತ್ರಕರ್ತ ಸುರೇಶ ಎಮ್ಮಿ, ಶಿವಬಸು ಗಾಡವಿ, ಉಮೇಶ ಬೆಳಕೂಡ, ಶಾಲೆಯ ಇತರೆ ವರ್ಗಗಳ ಶಿಕ್ಷಕಿಯರಾದ ನಗಾರ್ಚಿ, ಸಣ್ಣಕ್ಕಿ, ಮಹೇಂದ್ರಕರ,ಪತ್ತಾರ, ಮಂದ್ರೋಳಿ, ಮಾದರ, ಚಂದಗಡೆ ಉಪಸ್ಥಿತರಿದ್ದರು. ಅಶೋಕ ಬಸಳಿಗುಂದಿ ನಿರೂಪಿಸಿದರು