ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ವಚನ ಪಿತಾಮಹ ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ 69ನೇಯ ವಚನೋತ್ಸವ ಕಾರ್ಯಕ್ರಮ ಶರಣ ದಂಪತಿಗಳಾದ ಕುಸುಮಾ ಸಿದ್ದಣ್ಣ ಗದಗ ಅವರ ಮನೆಯಲ್ಲಿ ಜರಗಿತು.
ಶರಣ ದಂಪತಿಗಳಾದ ಡಾ. ಸುಷ್ಮಾ ಮಹಾಂತೇಶ ಗದಗ ಧ್ವಜಾರೋಹಣ ನೆರವೇರಿಸಿ, ಜಾತ್ಯತೀತವಾದ ಲಿಂಗಾಯತ ಧರ್ಮ ವಿಶ್ವಧರ್ಮ, ಧರ್ಮದ ರಕ್ಷಣೆ ಹಾಗೂ ಅನುಷ್ಠಾನಗೊಳ್ಳುವಲ್ಲಿ ನಮ್ಮೆಲ್ಲರ ಪಾತ್ರ ಬಹಳ ಮುಖ್ಯ ಎಂದು ನುಡಿದರು.
ಅಲ್ಲಮಪ್ರಭುಗಳ ಸಂಸಾರವೆಂಬ ಹೆಣ ಬಿದ್ದಿರೆ…….. ವಚನ ಚಿಂತನೆ ವಿದ್ಯಾ ನೀಲಪ್ಪನವರ ನಡೆಸಿಕೊಟ್ಟರು. ಮೋಹನ್ ಗೌಡ ಪಾಟೀಲ ಮಹೇಶ ಕೋಟಗಿ ಮಾತನಾಡಿದರು.
ಮಾತೋಶ್ರೀ ಶಾಂತಮ್ಮ ಗದಗ ಅಧ್ಯಕ್ಷತೆ ಪ್ರೇಮಕ್ಕ ಅಂಗಡಿ ನೇತೃತ್ವ ವಹಿಸಿದ್ದರು ಶರಣೆ ಕುಸುಮ ಗದಗ ಸ್ವಾಗತಿಸಿದರು. ಶರಣೆ ರಾಜೇಶ್ವರಿ ದ್ಯಾಮನಗೌಡರ ನಿರೂಪಿಸಿದರು. ಗೀತಾ ಅರಳಿ ಕಟ್ಟಿ ಸುವಾಸಿನಿ ಸಿಲ್ಲಿ , ಪ್ರೀತಿ ತುಳಜನ್ನವರ, ಅನುರಾಧ ಕರಡಿಗುದ್ದಿ, ಡಾ.ಬಸವರಾಜೇಶ್ವರಿ ಹಸರಗುಂಡಗಿ, ಉಮಾ ತಲ್ಲೂರ, ಶಿವಲೀಲಾ ಹುಲಿಕಟ್ಟಿ, ಅನ್ನಪೂರ್ಣ ಕಣೋಜ, ಶ್ರೀಶೈಲ ಶರಣಪ್ಪನವರ, ಚಂದ್ರಶೇಖರ ಕೊಪ್ಪದ ಚನ್ನಬಸಪ್ಪ ತಲ್ಲೂರ ಹಾಗೂ ಅಜಗನ್ನ ಬಳಗದ ಸದಸ್ಯರು ಹಾಜರಿದ್ದರು ಮುಕ್ತಾಯಕ್ಕ ಬಳಗದವರು ಪೂಜೆ ಪ್ರಾರ್ಥನೆ ನೆರವೇರಿಸಿ ಕೊಟ್ಟರು ಸೋಮವಾರಪೇಟೆ ಹಾಗೂ ನಗರದ ನೂರಾರು ಶರಣ ಶರಣೀಯರು ಉಪಸ್ಥಿತರಿದ್ದರು.