ಬಡವರ ಪಾಲಿಗೆ ಸಂಜೀವಿನಿಯಾದ ಶಾಸಕ ಬಾಲಚಂದ್ರ : ಸುಣಧೋಳಿ ಶಿವಾನಂದ ಸ್ವಾಮೀಜಿ ಬಣ್ಣನೆ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಶಾಸಕರ ನಿಧಿಯಿಂದ ನೀಡಲಾದ ಎರಡು ರಕ್ಷಾ ಕವಚ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಜಡಿ ಸಿದ್ದೇಶ್ವರ ಮಠದ ಪೀಠಾಧಿಪತಿ

ಮೂಡಲಗಿ: ಕೊರೋನಾ ಸೋಂಕಿತರ ನೆರವಿನ ಹಸ್ತ ಹಾಗೂ ಅಮೂಲ್ಯ ಜೀವ ಉಳಿಸುವ ಸಂದರ್ಭದಲ್ಲಿ ಅವಶ್ಯಕವಾಗಿ ಅಂಬ್ಯುಲೆನ್ಸ್ ಗಳ ಅಗತ್ಯವಿದೆ. ಅರಭಾಂವಿ ಕ್ಷೇತ್ರದ ಶಾಸಕರ ನಿಧಿಯಿಂದ ನೀಡಿರುವ ತುರ್ತು ಸೇವೆ ಸೋಂಕಿತರಿಗೆ ಸಹಕಾರಿಯಾಗುವದು. ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಕಾರಿಗಳಾದ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಮೇಲ್ದರ್ಜೆಗೇರಿಸಿದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜರುಗಿದ ಶಾಸಕರ ಸ್ಥಳೀಯ ಪ್ರಾಧಿಕಾರ ಅಭಿವೃದ್ಧಿ ಯೋಜನೆಯಡಿಯಲ್ಲಿ ಕ್ಷೇತ್ರದ ಮೂಡಲಗಿ ಹಾಗೂ ಕುಲಗೋಡ ಆಸ್ಪತ್ರೆಗಳಿಗೆ ಅಂಬ್ಯುಲೆನ್ಸಗಳಿಗೆ ಚಾಲನೆ ನೀಡಿ ಮಾತನಾಡಿ, ಕೊರೋನಾ 2ನೇ ಅಲೆಯು ಗ್ರಾಮೀಣ ಭಾಗಕ್ಕೆ ಹೆಚ್ಚು ಹಬ್ಬಿದೆ.

- Advertisement -

ಸೋಂಕಿತರಿಗೆ ಹಾಗೂ ಸೋಂಕಿನ ಸ್ವಭಾವವಿರುವರಿಗೆ ಸರಿಯಾದ ರೋಗದ ಲಕ್ಷಣ, ಆರೈಕೆ ಕ್ರಮಗಳು, ಮುನ್ನೆಚ್ಚರಿಕೆಯ ಕೊರತೆಯಿಂದಾಗಿ ರೋಗದ ಭೀತಿ ಹೆಚ್ಚಾದಾಗ ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆಯುಂಟಾಗುವದು. ಸೋಂಕಿತರಿಗೆ ತೊಂದರೆಯಾಗಬಾರದೆಂದು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಕೊಡಿಸಿರುವ ಅಂಬ್ಯುಲೆನ್ಸನ್ನು ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಂಡು ಅಮೂಲ್ಯ ಜೀವ ಉಳಿಸಿಕೊಳ್ಳಬೇಕು. ಕ್ಷೇತ್ರದ ಜನತೆ ಯಾವುದೇ ತೊಂದರೆಗೆ ಸಿಲುಕಬಾರದೆಂದು ಶಾಸಕರು ಹಾಗೂ ಎನ್.ಎಸ್.ಎಫ್ ಟೀಂ ವತಿಯಿಂದ ಹಗಲಿರುಳು ಶ್ರಮಿಸುತ್ತಿರುವದು ನಿಜಕ್ಕೂ ಮೆಚ್ಚುಗೆ ಪಡುವಂತಹದು ಎಂದು ನುಡಿದರು.

ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಬಲಿ ಮಾತನಾಡಿ, ವೈದ್ಯಕೀಯ ಸಿಬ್ಬಂದಿ ಹಾಗೂ ಸೇವಾ ವರ್ಗದವರು ಪ್ರತಿ ಕ್ಷಣವು ಸೋಂಕಿತರ, ಸ್ವಭಾವವಿರುವ ಹಾಗೂ ಅವಲಂಬಿತರ ಕಾಳಜಿಯಲ್ಲಿದ್ದೇವೆ. ರೋಗಿಗೆ ರೋಗದ ಬಗ್ಗೆ ಭಯ ತರಿಸದೆ, ಮನೋ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಅತೀ ಮುಖ್ಯ. ಕೋವಿಡ್-19 ಎರಡನೇ ಅಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಜನತೆ ಹೈಟೆಕ್ ವೈದ್ಯೋಪಚಾರ ಸಿಗಲೆಂದು ಅಂಬ್ಯುಲೆನ್ಸ ತುರ್ತು ಸೇವೆ ಅಗತ್ಯವಾಗಿದೆ.

ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ವೈಯಕ್ತಿಕ ಕಾಳಜಿ, ತಾಲೂಕಾಡಳಿತ, ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಬಹುಮುಖ್ಯವಾಗಿದೆ. ಸಾರ್ವಜನಿಕರು ಸೋಂಕಿತರಿಗೆ ಹೆದರದೆ ಮುನ್ನಚ್ಚರಿಕೆ ಕ್ರಮಗಳು ಹಾಗೂ ನಮ್ಮಲ್ಲಿ ಆರೋಗ್ಯದ ಏರುಪೇರುಗಳ ಮೇಲೆ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡರು.

ಚಿಕ್ಕೋಡಿ ಅಪರ ಜಿಲ್ಲಾ ವೈದ್ಯಾಧಿಕಾರಿ ಡಾ. ಎಸ್.ಎಸ್ ಗಡಾದ ಮಾತನಾಡಿ, ಸೋಂಕಿನ ತುರ್ತು ಚಿಕಿತ್ಸೆಯ ಹೈಟೆಕಾಗಿ ಆಕ್ಸಿಜನ್, ವೈದ್ಯ ಸಿಬ್ಬಂದಿ, ರೋಗಿಯ ಪ್ರಥಮೋಪಚಾರಕ್ಕೆ ಬೇಕಾಗುವ ಅಗತ್ಯ ಸೇವೆಗಳು ದೊರೆಯುತ್ತವೆ. ಸುರಕ್ಷಿತವಾಗಿ ಜಾಗೃತರಾಗಿ ಮನೆಯಲ್ಲಿಯೇ ಇರುವ ಮೂಲಕ ಕೊರೋನಾ ಚೈನ್ ಬ್ರೇಕ್ ಮಾಡುವ ಕುರಿತು ವಿವರಿಸಿದರು.

ಚಾಲನಾ ಕಾರ್ಯಕ್ರಮದಲ್ಲಿ ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ, ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಟಿ.ಎಚ್.ಒ ಡಾ. ಎಮ್.ಎಸ್ ಕೊಪ್ಪದ, ಹಿರಿಯ ತಜ್ಞ ವೈದ್ಯ ಡಾ. ಆರ್.ಎಸ್ ಬೆನಚಿನಮರಡಿ, ಬಿಇಒ ಅಜಿತ ಮನ್ನಿಕೇರಿ, ಗ್ರೇಡ್ 2 ತಹಶೀಲ್ದಾರ ಶಿವಾನಂದ ಬಬಲಿ, ತಾಪಂ ಎಡಿ ಎಸ್.ಎಸ್ ರೊಡ್ಡನವರ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಎಚ್ ವಾಯ್ ಬಾಲದಂಡಿ, ಸ್ಥಳೀಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಆರೋಗ್ಯ ಸಲಹಾ ಸಮಿತಿಯ ಆರ್.ಪಿ ಸೋನವಾಲಕರ, ಡಾ. ಎಸ್.ಎಸ್ ಪಾಟೀಲ, ಹನಮಂತ ಪೂಜೇರಿ, ಟೀಂ ಎನ್.ಎಸ್.ಎಫ್‍ನ ನಿಂಗಪ್ಪ ಕುರಬೇಟ ಹಾಗೂ ಪುರಸಭೆ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಕೋವಿಡ್ ಸೋಂಕಿತರ ಆರೈಕೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅವಿರತವಾಗಿ ಶ್ರಮಿಸುತ್ತಿದ್ದು, ಗೋಕಾಕ, ಮಲ್ಲಾಪೂರ ಪಿಜಿ ಮತ್ತು ಮೂಡಲಗಿ ಪಟ್ಟಣಗಳಲ್ಲಿ ಕೋರೊನಾ ಕಾಳಜಿ ಕೇಂದ್ರಗಳನ್ನು ತೆರೆದು ಸೋಂಕಿತರಿಗೆ ಸ್ವಂತ ವೆಚ್ಚದಲ್ಲಿ ಆಕ್ಸಿಜನ್, ಔಷಧಿಗಳ ಕಿಟ್‍ಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಸೋಂಕಿತರ ಆರೋಗ್ಯ ವಿಚಾರಿಸಲು ಬರುವ ಕುಟುಂಬಸ್ಥರಿಗೆ ಮಲ್ಲಾಪೂರ ಪಿಜಿಯಲ್ಲಿ ಶೆಡ್ ನಿರ್ಮಿಸಿ ಆಸರೆಯಾಗಿದ್ದಾರೆ. ಪ್ರತಿ ಸಂದರ್ಭಗಳಲ್ಲೂ ಜನರು ಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಆಪತ್ಬಾಂಧವರಂತೆ ಧಾವಿಸುತ್ತಾ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಅವಳಿ ತಾಲೂಕುಗಳ ಜನತೆಯ ಸಂಜೀವಿಯಾಗಿದ್ದಾರೆ. ಇಂತಹವರನ್ನು ಶಾಸಕರನ್ನಾಗಿ ಪಡೆದಿರುವದು ನಮ್ಮೆಲ್ಲರ ಸುದೈವ.

-ಶ್ರೀ ಅಭಿನವ ಶಿವಾನಂದ ಸ್ವಾಮೀಜಿಗಳು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!