spot_img
spot_img

Balachandra Jarakiholi: ಗ್ರಾಮದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ

Must Read

spot_img
- Advertisement -

ಮೂಡಲಗಿ: 17 ವರ್ಷಗಳ ನಂತರ ಸಡಗರ ಸಂಭ್ರಮದಿಂದ ನಡೆದಿರುವ ಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ಗ್ರಾಮದ ಮುಖಂಡರು ಮತ್ತು ಜಾತ್ರಾ ಕಮೀಟಿ ಪದಾಧಿಕಾರಿಗಳನ್ನು ಅಭಿನಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸಕಲರಿಗೂ ದೇವಿಯು ಒಳ್ಳೆಯದನ್ನು ಮಾಡಲಿ. ನಾಡು ಸಂಪದ್ಭರಿತವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿ ಎಂದು ಅವರು ಪ್ರಾರ್ಥಿಸಿದರು.

ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, ಎಲ್ಲರೂ ಒಗ್ಗಟ್ಟಿನಿಂದ ದುಡಿದು ಜಾತ್ರೆಯನ್ನು ಯಶಸ್ವಿ ಮಾಡಿರುವುದಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದರು.

ಕಳೆದ ಮೇ 10 ರಂದು ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಆರನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಲು ಕ್ಷೇತ್ರದ ಎಲ್ಲ ಸಮುದಾಯಗಳ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಆಶೀರ್ವಾದ ಮಾಡಿದ್ದಾರೆ. ಕಾರ್ಯಕರ್ತರ ಶ್ರಮದ ಫಲವಾಗಿ ಬಿಜೆಪಿಯಲ್ಲಿಯೇ ರಾಜ್ಯದಲ್ಲಿ ಅತ್ಯಧಿಕ ಮತಗಳ ಮುನ್ನಡೆಯೊಂದಿಗೆ ಆಯ್ಕೆಯಾಗಿದ್ದೇನೆ. ಅದಕ್ಕಾಗಿ ಸಮಸ್ತ ಕಾರ್ಯಕರ್ತರಿಗೂ ಹಾಗೂ ಮತದಾರ ಬಂಧುಗಳಿಗೂ ಸದಾ ಚಿರಋಣಿಯಾಗಿರುವೆ ಎಂದು ಅವರು ಹೇಳಿದರು.

- Advertisement -

ಹಳ್ಳೂರ ಗ್ರಾಮಸ್ಥರು ಒಂದಾಗಿ, ಒಗ್ಗಟ್ಟಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಹಳ್ಳೂರ ಗ್ರಾಮಸ್ಥರ ಪ್ರೀತಿ ಅಭಿಮಾನಕ್ಕೆ ನಾನೂ ಕೂಡ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.

ಜಾತ್ರಾ ಮಹೋತ್ಸವ ಕಮೀಟಿಯಿಂದ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಡಿವೆಪ್ಪ ಫಾಲಭಾವಿ, ಹನಮಂತ ತೇರದಾಳ, ಭೀಮಶಿ ಮಗದುಮ್ಮ, ಲಕ್ಷ್ಮಣ ಕತ್ತಿ, ಸುರೇಶ ಕತ್ತಿ, ಶಿವನಗೌಡ ಪಾಟೀಲ, ಶಿವದುಂಡು ಕೊಂಗಾಲಿ, ಶ್ರೀಶೈಲ ಬಾಗೋಡಿ, ಕುಮಾರ ಲೋಕನ್ನವರ, ಈಶ್ವರ ಬೆಳಗಲಿ, ಲಕ್ಷ್ಮಣ ಛಬ್ಬಿ, ಹನಮಂತ ಫಾಲಬಾವಿ, ಮಲ್ಲಪ್ಪ ಛಬ್ಬಿ, ಬಾಹುಬಲಿ ಸಪ್ತಸಾಗರ, ಭೀಮಶಿ ಹೊಸಟ್ಟಿ, ಗುರುನಾಥ ಬೋಳನ್ನವರ, ರಾಮಗೌಡ ಪಾಟೀಲ, ರವಿ ಪಾಟೀಲ, ಈಶ್ವರ ಫಾಲಭಾವಿ, ಮಹಾವೀರ ಛಬ್ಬಿ, ಸುರೇಶ ಡಬ್ಬನ್ನವರ, ಶಿವಪ್ಪ ಕೌಜಲಗಿ, ಸದಾಶಿವ ಮಾವರಕರ, ಗಜು ಮಿರ್ಜಿ, ನಾಗಪ್ಪ ವಕೀಲಗೋಳ, ಗುರು ಹಿಪ್ಪರಗಿ, ನಾರಾಯಣ ಪೂಜೇರಿ, ಮುರಿಗೆಪ್ಪ ಮಾಲಗಾರ, ಸಿದ್ದಪ್ಪ ದುರದುಂಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group