spot_img
spot_img

ಎಲ್ಲ ವರ್ಗಗಳ ಹಿತಚಿಂತಕ ಶಾಸಕ ಬಾಲಚಂದ್ರ ಜಾರಕಿಹೊಳಿ : ರಂಗಪ್ಪ ಇಟ್ಟನ್ನವರ

Must Read

ಯಾದವಾಡ-ಗುಲಗಂಜಿಕೊಪ್ಪ ರಸ್ತೆ ಕಾಮಗಾರಿಗೆ 3 ಕೋಟಿ ರೂ.

ಮೂಡಲಗಿ: ಹದಗೆಟ್ಟ ರಸ್ತೆಗಳನ್ನು ನಿರ್ಮಿಸಿಕೊಟ್ಟು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಯಾದವಾಡ ಜಿಪಂ ಮಾಜಿ ಸದಸ್ಯ ರಂಗಪ್ಪ ಇಟ್ಟನ್ನವರ ತಿಳಿಸಿದರು.

ತಾಲೂಕಿನ ಯಾದವಾಡದಲ್ಲಿ ಇತ್ತೀಚೆಗೆ ಜರುಗಿದ ಗುಲಗಂಜಿಕೊಪ್ಪ-ಯಾದವಾಡ ರಸ್ತೆ ಕಾಮಗಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾದವಾಡ-ಗುಲಗಂಜಿಕೊಪ್ಪ ರಸ್ತೆಯ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಸಮಸ್ತ ಸಾರ್ವಜನಿಕರ ಪರವಾಗಿ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಯಾದವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾದವಾಡ ಮತ್ತು ಮಾನೋಮ್ಮಿ, ಕಾಮನಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ ಗ್ರಾಮಗಳ ಪ್ರಗತಿಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾಕಷ್ಟು ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದಾರೆ. ಜೊತೆಗೆ ಜನೋಪಯೋಗಿ ಕಾರ್ಯಗಳನ್ನು ನೆರವೇರಿಸಿ ಎಲ್ಲ ಸಮಾಜಗಳು ಸಮಾಜದ ಮುಖ್ಯ ವಾಹಿನಿಗೆ ತರಲು ಶಾಸಕರ ಕಾಳಜಿ ಹಾಗೂ ಪರಿಶ್ರಮವೇ ಕಾರಣವೆಂದು ಇಟ್ಟನ್ನವರ ತಿಳಿಸಿದರು.

3 ಕೋಟಿ ರೂ. ವೆಚ್ಚದ ಯಾದವಾಡ-ಗುಲಗಂಜಿಕೊಪ್ಪ ರಸ್ತೆ ಕಾಮಗಾರಿಗೆ ಯಾದವಾಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಶ್ರೀ ದಾಸರ ಮತ್ತು ಉಪಾಧ್ಯಕ್ಷ ರಾಜುಗೌಡ ಪಾಟೀಲ ಅವರು ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಮನಕಟ್ಟಿ ಗ್ರಾಪಂ ಅಧ್ಯಕ್ಷ ಸದಾಶಿವ ದುರಗನ್ನವರ, ಉಪಾಧ್ಯಕ್ಷ ಸದಾಶಿವ ಮೂಲಿಮನಿ, ಉದ್ಯಮಿ ಹಾಗೂ ಪಿಕೆಪಿಎಸ್ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ, ಚಲನಚಿತ್ರ ನಿರ್ಮಾಪಕ ಬಸವರಾಜ ಭೂತಾಳಿ, ನೂರಸಾಬ ಜಾರೆ, ಶಿವನಗೌಡ ಪಾಟೀಲ, ರಾಮಣ್ಣಾ ಅರೆನಾಡ, ರಾಮಣ್ಣಾ ಚನ್ನಾಳ, ಕಲ್ಲಪ್ಪ ಮೂಲಿಮನಿ, ಮದನ ಅರೆನ್ನವರ, ಶಂಕರ ತೋಟಗಿ, ಇಮಾಮ ಬಾಗವಾನ, ಮಾರುತಿ ಹನಗಂಡಿ, ಸದಾ ಮಾಶಾಳಿ, ಸತೀಶ ತೊಂಡಿಕಟ್ಟಿ, ಮುರಳಿ ಇತಾಪಿ, ಹನಮಂತ ಮಳ್ಳಿ, ಹನಮಂತ ಚಕ್ಕೆನ್ನವರ, ನಾರಾಯಣ ದಾಸರ, ರಂಗಣ್ಣಾ ಮಳಲಿ, ಮಹಾದೇವ ಮಳಲಿ, ಹನಮಂತ ಹೊಸಮನಿ, ಹನಮಂತ ಮಳ್ಳಿ, ಯಾದವಾಡ ಹಾಗೂ ಕಾಮನಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರು ಉಪಸ್ಥಿತರಿದ್ದರು.

ಅರಭಾವಿ ಮತಕ್ಷೇತ್ರದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ವರ್ಷಾಂತ್ಯಕ್ಕೆ ಕ್ಷೇತ್ರದ ಪ್ರಮುಖ ರಸ್ತೆ ಕಾಮಗಾರಿಗಳು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲ ಕಾಮಗಾರಿಗಳನ್ನು ಮುಗಿಸುವ ಸಂಬಂಧ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು, ರಸ್ತೆಗಳನ್ನು ಅಭಿವೃದ್ಧಿಪಡಿಸುವುದೇ ಈಗ ನಮ್ಮ ಮುಂದಿರುವ ಪ್ರಮುಖ ಯೋಜನೆಯಾಗಿದೆ. ಅರಭಾವಿ ಮತಕ್ಷೇತ್ರದ ಸಮಗ್ರ ಏಳ್ಗೆಯೇ ನಮ್ಮ ಗುರಿಯಾಗಿದೆ.

-ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷರು ಹಾಗೂ ಶಾಸಕರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!