spot_img
spot_img

ಬಣಜಿಗ ಘಟಕ 14ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

Must Read

spot_img

ಮೂಡಲಗಿ: ಬೆಂಗಳೂರಿನ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ತಾಲೂಕಾ ಘಟಕದ 14ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬುಧವಾರ ಆ. 24 ರಂದು ಬೆಳಿಗ್ಗೆ 10ಕ್ಕೆ ಕೆ ಎಚ್ ಸೋನವಾಲ್ಕರ ಕಲ್ಯಾಣ ಮಂಟಪ್ಪದಲ್ಲಿ ಏರ್ಪಡಿಸಲಾಗಿದೆ ಎಂದು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ಘಟಕದ ಅಧ್ಯಕ್ಷ ಶಿವಪ್ಪ ಭುಜನ್ನವರ ಹೇಳಿದರು

ರವಿವಾರ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭಕ್ಕೆ ಮೂಡಲಗಿ ಶಿವಬೋಧರಂಗ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ದತ್ತಾತ್ರಯಬೋಧ ಸ್ವಾಮಿಜಿ, ಶ್ರೀಧರಬೋಧ ಸ್ವಾಮಿಜಿ, ಶಿರೋಳದ ರಾಮಾರೋಡಮಠದ ಪೀಠಾಧಿಪತಿ ಶ್ರೀ ಶಂಕರಾರೂಡ ಸ್ವಾಮಿಜಿ, ಸುಣದೋಳಿಯ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮಿಜಿಗಳು ದಿವ್ಯ ಸಾನ್ನಿಧ್ಯ ವಹಿಸುವರು ಎಂದರು.

ಸಮಾರಂಭದ ಉದ್ಘಾಟಕರಾಗಿ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಗಮಿಸುವರು, ಅಧ್ಯಕ್ಷತೆಯನ್ನು ಬಣಜಿಗ ಮೂಡಲಗಿ ಘಟಕದ ಅಧ್ಯಕ್ಷ ಶಿವಪ್ಪ ಭುಜನ್ನವರ ವಹಿಸುವರು, ಮುಖ್ಯ ಅತಿಥಿಗಳಾಗಿ ಬೆಳಗಾವಿ ಲೋಕಸಭಾ ಸದಸ್ಯೆ ಮಂಗಳಾ ಅಂಗಡಿ,ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಂಗಳೂರಿನ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನ ಕನಶೆಟ್ಟಿ ಆಗಮಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಶೆಟ್ಟರ ತೀಳಿಸಿದ್ದಾರೆ.

ಈ ಸಮಯದಲ್ಲಿ ಚನ್ನವೀರಪ್ಪ ಅಂಗಡಿ, ಸುಭಾಸ ಅವಟಿ,ವಿರೇಶ ದುಗ್ಗಾಣಿ, ಶಿವಬಸು ನೀಲನ್ನವರ, ಲಿಂಗಪ್ಪ ಗಾಡವಿ, ಮುರಗೇಶ ಗಾಡವಿ ಉಪಸ್ಥಿತರಿದ್ದರು,

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!