ಆಡಳಿತ ಹಾಗೂ ಸಿಬ್ಬಂದಿಯವರ ಪ್ರಾಮಾಣಿಕ ಪ್ರಯತ್ನದಿಂದ ಬ್ಯಾಂಕ ಲಾಭದಾಯಕ-ಅಧ್ಯಕ್ಷ ಸುಭಾಸ ಢವಳೇಶ್ವರ

Must Read

ಆಡಳಿತ ಹಾಗೂ ಸಿಬ್ಬಂದಿಯವರ ಪ್ರಾಮಾಣಿಕ ಪ್ರಯತ್ನದಿಂದ ಬ್ಯಾಂಕ ಲಾಭದಾಯಕ-ಅಧ್ಯಕ್ಷ ಸುಭಾಸ ಢವಳೇಶ್ವ

ಮೂಡಲಗಿ:-ಪಟ್ಟಣದ ಪ್ರತಿಷ್ಠಿತ ದಿ.ಮೂಡಲಗಿ ಕೋ-ಆಪ್ ಬ್ಯಾಂಕಿನ “ವಾರ್ಷಿಕ ಸರ್ವ ಸಾಧರಣಾ ಸಭೆ”ಬ್ಯಾಂಕಿನ ಸಭಾ ಭವನದಲ್ಲಿ ನಡೆಯಿತು‌

ದಿ. ಮೂಡಲಗಿ ಕೋ-ಆಪ್ ಬ್ಯಾಂಕಿನ 2023-24ನೆಯ ಆರ್ಥಿಕ ವರ್ಷದ ಕೊನೆಯಲ್ಲಿ 70.22 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು.

ಶುಕ್ರವಾರದಂದು ಪಟ್ಟಣದ ದಿ. ಮೂಡಲಗಿ ಕೋ-ಆಪ್ ಬ್ಯಾಂಕನ 74ನೆಯ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ ಸದ್ಯ 2.21
ಕೋಟಿ ಷೇರು ಬಂಡವಾಳ, 124.20 ಕೋಟಿ ಠೇವುಗಳು, 08.08 ಕೋಟಿ ನಿಧಿಗಳು, 139 ಕೋಟಿ ದುಡಿಯುವ ಬಂಡವಾಳವನ್ನು ಬ್ಯಾಂಕ್ ಹೊಂದಿದೆ ಎಂದರು.

ಬ್ಯಾ0ಕಿನಿ0ದ ವಿವಿಧ ಕ್ಷೇತ್ರಗಳ ಜನರಿಗೆ ಒಟ್ಟು 73.64 ಕೋಟಿ ಸಾಲವನ್ನು ನೀಡಿದ್ದು ಬ್ಯಾಂಕಿನ 4 ಶಾಖೆಗಳನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ಯುಪಿಐ ಮತ್ತು ಐಎಮ್‌ಪಿಎಸ್ ಸೌಲಭ್ಯಗಳನ್ನು ಪ್ರಾರಂಭಿಸಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷವೂ ಅಡಿಟ್‌ದಲ್ಲಿ ‘ಅ’ ಶ್ರೇಣಿಯನ್ನು ಪಡೆದುಕೊಂಡಿದೆ. ಠೇವುದಾರರು, ಸಾಲಗಾರರು, ಆಡಳಿತ ಮಂಡಳಿ ಸಿಬ್ಬಂದಿಗಳ ಸಹಕಾರ ಮುಖ್ಯವಾಗಿದೆ, ಹಾಗಾಗಿ ಗ್ರಾಹಕರ ವಿಶ್ವಾಸವನ್ನು ಕಾಯ್ದುಕೊಂಡು ಬಂದಿದೆ ಎಂದರು.

ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿ, ಸಹಕಾರಿ ಸಂಘ/ ಕ್ಷೇತ್ರ ರಾಜ್ಯದಲ್ಲಿ 120 ವರ್ಷಗಳ ಇತಿಹಾಸ ಇರುತ್ತದೆ. ದಿ.ಮೂಡಲಗಿ ಕೋ-ಆಪ್ ಬ್ಯಾಂಕಿಗೆ. 74 ನೆಯ ವರ್ಷ ಇತಿಹಾಸ ಹೊಂದಿರುವುದು. ಆಡಳಿತ ಹಾಗೂ ಸಿಬ್ಬಂದಿಯವರ ಪ್ರಾಮಾಣಿಕ ಶ್ರಮ, ನಿಸ್ವಾರ್ಥ ಸೇವೆಯಿಂದ ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಸಾಗುತ್ತಿರುವುದು ಎಂದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಗೌಡಪ್ಪ ಬುದ್ನಿ ವರದಿ ವಾಚನ ಓದಿದರು. ಬ್ಯಾಂಕಿನ ಉಪಾಧ್ಯಕ್ಷ ನವೀನ ಬಡಗನ್ನವರ, ರಾಮದುರ್ಗ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷ ಶೀಧರ ಪತ್ತೇಪೂರ, ಮುಖಂಡರಾದ ಚನ್ನಮಲ್ಲಯ್ಯ ನಿರ್ವಾಣಿ, ಬ್ಯಾಂಕಿನ ನಿರ್ದೇಶಕರುಗಳಾದ ಡಾllಕೃಷ್ಣಾಜಿ ದಂತಿ, ಶಿವಲಿಂಗಪ್ಪ ಗಾಣಿಗೇರ, ರಾಚಯ್ಯ ನಿರ್ವಾಣಿ, ರುದ್ರಪ್ಪ ವಾಲಿ, ವೀರಪ್ಪ ಬೆಳಕೂಡ, ಹರೀಶ ಅಂಗಡಿ, ಮಹ್ಮದರಫೀಕ್ ತಾಂಬೋಳಿ, ಶ್ರೀಮತಿ ಸುಶೀಲಾ ರಾ.ಸತರಡ್ಡಿ, ಶ್ರೀಮತಿ ಪ್ರಭಾವತಿ ಪ್ರ.ಮುಧೋಳ, ಶ್ರೀಮತಿ ಉಜಾಲಾ ಶ್ರೀ. ಪೋಳ ಉಪಸ್ಥಿತರಿದ್ದರು. ಸಿಬ್ಬಂದಿಗಳು, ಷೇರುದಾರರು, ಠೇವಣಿದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಾಖಾ ವ್ಯವಸ್ಥಾಪಕ ಚಿದಾನಂದ ಢವಳೇಶ್ವರ ಸ್ವಾಗತಿಸಿದರು,ಸಹಾಯಕ ವ್ಯವಸ್ಥಾಪಕ ಮಹೇಶ
ಮಡಿವಾಳರ ನಿರೂಪಿಸಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group