spot_img
spot_img

ಆಲದ ಮರ (ವಟ ವೃಕ್ಷ)

Must Read

- Advertisement -

ಆಲ ಅಥವಾ ವಟವೃಕ್ಷ ಹಿಂದುಗಳಿಂದ ಪೂಜಿಸಲ್ಪಡುವ  ಒಂದು ಮರ.

ಸತ್ಯವಾನನ ಮರಣ ನಂತರ ಸತಿಯಾದ ಸಾವಿತ್ರಿಯೂ ತನ್ನ ಪತಿಯ ಶವವನ್ನು ವಟವೃಕ್ಷದ ಕೆಳಗೆ ಮಲಗಿಸಿ ಹಾಳಾಗದಂತೆ ಕಾಯಲು ಮರಕ್ಕೆ ತಿಳಿಸಿ ಅಲ್ಲಿಂದ ತೆರಳಿ ಯಮನಲ್ಲಿ ಬೇಡಿ ತನ್ನ ಪತಿಯ ಆತ್ಮವನ್ನು ಮರಳಿ ತರುತ್ತಾಳೆ. ಇದು ಈಗಲೂ ವಟ ಸಾವಿತ್ರಿ ವ್ರತ ಎಂದು ಆಚರಣೆಯಲ್ಲಿ ಇದೆ. ವೈಶಾಖ  ಮಾಸದ ಅಮಾವಾಸ್ಯೆಯಿಂದ ಪ್ರಾರಂಭಿಸಿ ಜೇಷ್ಠ ಮಾಸದ ಹುಣ್ಣಿಮೆ ವರೆಗೂ ವೃತದ ಆಚರಣೆ ಇರುತ್ತದೆ. ಈ ಸಮಯದಲ್ಲಿ ಹೆಣ್ಣು ಮಕ್ಕಳು ಮರದ ಪ್ರದಕ್ಷಣೆ ಹಾಕುವುದರಿಂದ ಗಂಡನ ಆಯುಷ್ಯ ವೃದ್ಧಿಯಾಗುತ್ತದೆ ಎನ್ನುವ ಅಚಲ ನಂಬಿಕೆ ನಮ್ಮ ಹಿಂದುಗಳಲ್ಲಿ ಇದೆ.

ಅಂದರೆ ದೇಹದ ಭಾಗವನ್ನು ಕೊಳೆಯದಂತೆ ಇಡುವ ಶಕ್ತಿ ಈ ಮರದಲ್ಲಿ ಇದೆ ಎಂದು ಹಿಂದಿನವರು ಪರೋಕ್ಷವಾಗಿ ನಮಗೆ ತಿಳಿಸಿದ್ದಾರೆ.

- Advertisement -

ಎಷ್ಟೊಂದು ಮರಗಳನ್ನು ನಮಗೆ ದಿನನಿತ್ಯದ ವಾಡಿಕೆಯಲ್ಲಿ ತಂದು ನಮಗೆ ತಿಳಿಯುವಂತೆ ಮಾಡಿದ್ದಕ್ಕೆ ಅವರಿಗೊಂದು ಸಲಾಂ ಅಲ್ಲವೇ.

ಪ್ರೇಮಿಗಳ ದಿನ ಅಪ್ಪನಿಗೊಂದು ದಿನ ಅಮ್ಮನಿಗೊಂದು ದಿನ ಇದೇ ರೀತಿ ಬೇರೆ ಬೇರೆ ದಿನಗಳನ್ನು ಆಯ್ದುಕೊಂಡ ಪಶ್ಚಿಮಾತ್ಯ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಅಜಗಜಾಂತರ.

ಪುಂಸವನದಲ್ಲಿ ಮತ್ತು ಹೋಮಗಳಲ್ಲಿ ಇದರ ಬಳಕೆ ಇದೆ.

- Advertisement -

ವಟವೃಕ್ಷದ ಇಳಿಬಿದ್ದ ಬೇರುಗಳು ಚಿಗುರು ಹಣ್ಣು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. ಮರದಿಂದ ಜೋತುಬಿದ್ದ ಬೇರುಗಳಿಗೆ ಬಿಳಲು ಎಂದು ಆಡು ಭಾಷೆಯಲ್ಲಿ ಕರೆಯುತ್ತಾರೆ.


  • ಬಿಳಲನ್ನು ಜಜ್ಜಿ ಕಷಾಯ ಮಾಡಿ ಕಲ್ಲು ಸಕ್ಕರೆಯೊಂದಿಗೆ ಸೇವಿಸುವುದರಿಂದ ಉರಿಮೂತ್ರ ಗುಣವಾಗುತ್ತದೆ.
  • ಇದರ ರೆಂಬೆಯನ್ನು ಮುರಿದಾಗ ಹಾಲಿನಂತಹ ದ್ರವ ಬರುತ್ತದೆ ಇದನ್ನು ಕಣ್ಣಿಗೆ ಬಿಡುವುದರಿಂದ ಕಣ್ಣಿನ ರೋಗಗಳು ಗುಣವಾಗುತ್ತದೆ.
  • ಬಿಳಲನ್ನು ರುಚಿಗೆ ತಕ್ಕಷ್ಟು ಬೆಲ್ಲ ಅಥವಾ ಕೆಂಪು ಕಲ್ಲು ಸಕ್ಕರೆ ಹಾಕಿ ಕುದಿಸಿ ದಿನಕ್ಕೆರಡು ಬಾರಿ ಕುಡಿಯುತ್ತಾ ಬಂದರೆ ಕಾಮಾಲೆ ಗುಣವಾಗುತ್ತದೆ.
  • ಬಿಳಲನ್ನು ಚಚ್ಚಿ ತುಪ್ಪದಲ್ಲಿ ಕಲಸಿ ಹಚ್ಚುವುದರಿಂದ ಗಾಯ ಬೇಗನೆ ವಾಸಿಯಾಗುತ್ತದೆ.
  • ಬಿಳಲಿನಿಂದ ಹಲ್ಲು ಉಜ್ಜುವುದರಿಂದ ಹಲ್ಲಿನ ರೋಗಗಳು ಗುಣವಾಗುತ್ತದೆ.
  • ರೆಂಬೆಯಲ್ಲಿ ಬರುವ ಆಂಟಿಗೆ ತುಪ್ಪ ಸೇರಿಸಿ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ.
  • ಬಿಳಲನ್ನು ಸುಟ್ಟು ಬಸ್ಮ ಮಾಡಿ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.
  • ಎಲೆಯ ಮೃದುವಾದ ಭಾಗವನ್ನು ಧನಿಯಾ ಪುಡಿ ಸೇರಿಸಿ  ಕಷಾಯ ಮಾಡಿ ಕುಡಿಯುವುದರಿಂದ ರಕ್ತಾತಿಸಾರ ಗುಣವಾಗುತ್ತದೆ.
  • ಇದರ ಹಣ್ಣನ್ನು ಹಾಲಿನೊಂದಿಗೆ ಅಥವಾ ನೀರಿನೊಂದಿಗೆ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
  • ಹಣ್ಣನ್ನು ಹಾಲು ಕಲ್ಲುಸಕ್ಕರೆ ಸೇರಿಸಿ ಸೇವಿಸುವುದರಿಂದ ಹೊಟ್ಟೆಯ ಉರಿ ಗುಣವಾಗುತ್ತದೆ.
  • ಹಾಲು ಆಗದ ಹಸುಳೆಗೆ ಪ್ರತಿದಿನ ಇದರ ಕಷಾಯವನ್ನು ಕುಡಿಸುವುದರಿಂದ ಹಾಲಿನಲ್ಲಿ ಸಿಗುವ ಎಲ್ಲಾ ಅಂಶಗಳು ಮಗುವಿಗೆ ದೊರೆಯುತ್ತದೆ ಮತ್ತು ಅಜೀರ್ಣ ಆಗುವುದಿಲ್ಲ. ನಾನು ಹಸುಳೆಯಾದಾಗ ನನ್ನಮ್ಮ ನನಗೆ ಕೊಟ್ಟಿರುವ ಕಷಾಯ ಇದೆ ಆಗಿದೆ. ನಾನು ನನ್ನ ಮೊಮ್ಮಗನಿಗೆ ಇದೇ ಪ್ರಯೋಗ ಮಾಡಿರುತ್ತೇನೆ.
  • ಹಣ್ಣನ್ನು ತಿಂದು ಹಾಲು ಕುಡಿಯುವುದರಿಂದ ಶಕ್ತಿ ವೃದ್ಧಿಯಾಗುತ್ತದೆ.
  • ಇದರ ಕಷಾಯ ಸೇವನೆಯಿಂದ ಬಾಯಿಹುಣ್ಣು ಗುಣವಾಗುತ್ತದೆ.
  • ನಾನು ತಯಾರಿಸುವ ಕೂದಲಿನ ಎಣ್ಣೆಯಲ್ಲಿ ಆಲದ ಬಿಳಲು ಇರುತ್ತದೆ
  • ಅಲುಗಾಡುತ್ತಿರುವ ಹಲ್ಲಿಗೆ ಇದರ ಹಾಲನ್ನು ಬಿಡುವುದರಿಂದ ಸುಲಭದಲ್ಲಿ ಕೀಳಬಹುದು. ಮಾಹಿತಿ ಇದ್ದವರಲ್ಲಿ ಮಾತ್ರ ಮಾಡಿ.
  • ಮೇಲಿಂದ ಮೇಲೆ ಇದರ ಹಾಲನ್ನು ಬಿಡುತ್ತಿದ್ದರೆ ಕುರು ಕಳಿತು ಒಡೆಯುತ್ತದೆ ನಂತರ ಮತ್ತೆ ಇದೆ ಹಾಲನ್ನು ಬಿಡುತ್ತಾ ಬಂದರೆ ಪೂರ್ತಿ ಗುಣವಾಗುತ್ತದೆ.

 ಸುಮನಾ ಮಳಲಗದ್ದೆ 9980182883.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group