ಬೀದರ – 889ನೇ ಬಸವ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿನ ಬಸವಣ್ಣನ ಅನುಯಾಯಿ ಸಂಘಟನೆಗಳ ವತಿಯಿಂದ ಎರಡು ಸಾವಿರದಾ ಇಪ್ಪತ್ತೆರಡು ಬೈಕ್ ಗಳ ಯಾರ್ಲಿ ಹಮ್ಮಿಕೊಳ್ಳಲಾಗಿತ್ತು.
ಬಸವಣ್ಣನವರ ಕರ್ಮಭೂಮಿ ಬೀದರನಲ್ಲಿ ಬಸವಣ್ಣನವರ 889ನೇ ಜಯಂತಿ ಹಿನ್ನೆಲೆಯಲ್ಲಿ ಬೀದರ ನಗರದಲ್ಲಿ ಬಸವ ಧರ್ಮ ಅನುಯಾಯಿಗಳು ಬೈಕ್ ಯಾರ್ಲಿ ನಡೆಸಿದರು.
ಈ ಯಾರ್ಲಿ ಮುಖಾಂತರ ಲಿಂಗಾಯತ ಧರ್ಮದ ಶಕ್ತಿ ಪ್ರದರ್ಶನ ನಡೆಸಿದರೆಂದು ಹೇಳಲಾಗಿದ್ದು ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಕೂಗು ಎತ್ತ ಬೇಕು ಎಂಬುದು ಲಿಂಗಾಯತ ಧರ್ಮದ ಪ್ರಮುಖ ನಾಯಕರ ಉದ್ದೇಶವೆಂಬುದು ಅಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿತ್ತು.
ಬಸವಣ್ಣನವರ ಜಯಂತಿಯ ಈ ಯಾರ್ಲಿಯ ನೇತೃತ್ವವನ್ನು ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಬಸವರಾಜ ಪಾಟೀಲ ಹಾರುಗೇರಿ, ಸೂರ್ಯಕಾಂತ ನಾಗಮರಪಳ್ಳಿ ವಹಿಸಿದ್ದರು.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಸದ್ಯಕ್ಕೆ ತಣ್ಣಗಾಗಿರುವಂತೆ ಕಂಡಿದ್ದರೂ ಪ್ರಸಕ್ತ ಬೈಕ್ ರ್ಯಾಲಿಯಿಂದಾಗಿ ಹೋರಾಟವು ಮತ್ತೆ ಜೀವ ತಳೆಯುವ ಲಕ್ಷಣಗಳು ತೋರುತ್ತಿದ್ದು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸವಾಲಾಗಲಿದೆ ಎಂದು ಹೇಳಲಾಗುತ್ತಿದೆ. ಬೈಕ್ ರ್ಯಾಲಿಯ ಮುಖಾಂತರ ಲಿಂಗಾಯತರು ತಮ್ಮ ಹೋರಾಟದ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆನ್ನಬಹುದು.
ವರದಿ: ನಂದಕುಮಾರ ಕರಂಜೆ, ಬೀದರ