ಬೆಳಗಾವಿ: ನಗರದ ಕೇಂದ್ರ ಗ್ರಂಥಾಯದಲ್ಲಿ ದಿ: 23 ರಂದು ಜಗಜ್ಯೋತಿ ಬಸವೇಶ್ವರ ಜಯಂತಿ ಮತ್ತು ವಿಶ್ವ ಪುಸ್ತಕ ದಿನಾಚರಣೆ ಆಚರಿಸಲಾಯಿತು. ವಿಶ್ವಗುರು ಬಸವಣ್ಣ ಮತ್ತು ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ರಂಗನಾಥನ್ ಅವರ ಭಾವಚಿತ್ರ ಗಳಿಗೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ಪ್ರತಿ ವರ್ಷದ ಎಪ್ರಿಲ್ ೨೩ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ (ಇದನ್ನು ಅಂತಾರಾಷ್ಟ್ರೀಯ ಪುಸ್ತಕ ದಿನ ಎಂದೂ ಕರೆಯುತ್ತಾರೆ).ಆಚರಿಸಲಾಗುತ್ತದೆ. 1995ರಲ್ಲಿ ಯುನೆಸ್ಕೋ ಎ.23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಎಂದು ಅಧಿಕೃತವಾಗಿ ಘೋಷಿಸಿತು.
ಉದ್ದೇಶ:
ಜನರಲ್ಲಿ ಓದುವ, ಅಭಿರುಚಿ ಹೆಚ್ಚಿಸುವ ಮತ್ತು ಕೃತಿಸ್ವಾಮ್ಯದ ಬಗ್ಗೆ ಜಾಗೃತಿ ಮೂಡಿಸಲು, ಲೇಖಕರಿಗೆ ಗೌರವ ಸಲ್ಲಿಸಲು, ಹೊಸ ಲೇಖಕರಿಗೆ ಬರೆಯಲು ಸ್ಪೂರ್ತಿಯಾಗಿ ವಿಶ್ವ ಪುಸ್ತಕ ದಿನವನ್ನು ಆಚರಣೆಗೆ ತರಲಾಯಿತು. ಅದೇ ರೀತಿ ವಿಶ್ವ ವಿಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ಹುಟ್ಟಿದ ದಿನ ಎಪ್ರಿಲ್ 23 ನ್ನು ಅವರ ಸ್ಮರಣಾರ್ಥ ವಿಶ್ವ ಪುಸ್ತಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಜೊತೆಗೆ ಮಾನವ ಕುಲಕ್ಕೆ ಅತ್ಯಂತ ಅವಶ್ಯಕ ಇರುವ ಅನೇಕ ಬೋಧನೆಗಳನ್ನು ಬಸವಣ್ಣನವರು ತಿಳಿಸಿದರು. ಕಾಯಕವೇ ಕೈಲಾಸ ಎನ್ನುವ ತತ್ವವನ್ನು ತಿಳಿಸಿ ಅನೇಕ ಸಾಮಾಜಿಕ ಬದಲಾವಣೆಗಳಿಗೆ ನಾಂದಿ ಹಾಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಸುಮಿತ್ ಕಾವಳೆ,ಪ್ರಕಾಶ ಇಚಲಕರಂಜಿ, ಮಹಾಂತೇಶ್ ಗುಡ್ಡದ, ಕಮ್ಮಾರ,ಲಕ್ಷ್ಮಿ, ಮತ್ತು ಓದುಗರು ಹಾಜರಿದ್ದರು.ಗುಡ್ಡದ ಅವರು ಬಸವಣ್ಣನ ವಚನಗಳನ್ನು ಹಾಡಿದರು. ಪುಸ್ತಕ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.