spot_img
spot_img

ಬಸವ ತ್ರಿಪದಿಗಳು…

Must Read

spot_img

ಬಸವ ತ್ರಿಪದಿಗಳು…

- Advertisement -

ಬಸವಜ್ಯೋತಿಯ ಪ್ರಭೆಯು ಜಗದಲ್ಲಿ ಹರಡಿರಲು

ಬಸವನಾಮವ ಜಗವು ಸ್ಮರಿಸಿರಲು| ಬಸವಣ್ಣ

ಜನಿಸಿ ಬಂದಾನೋ ಮತ್ತೊಮ್ಮೆ||

- Advertisement -

ಬಸವ, ಬಸವ ಎಂದು ಮನದುಂಬಿ ಭಜಿಸು ನೀ

ಬಸವ ಸದ್ಗುರುವು ಕರುಣಿಸುವಾ| ನಿನ್ನಯ

ಭವಬಂಧನ ಕಳೆವ ಬಸವಣ್ಣ||

- Advertisement -

ಬಸವಣ್ಣ ನೀ ಬಾರೋ ಬಸವೇಶ ನೀ ಬಾರೋ

ಬಸವ ಬೆಳಕನ್ನು ಕೊಡುಬಾರೋ| ಜಗದ

ಕತ್ತಲೆಯ ಕಳೆಯಬಾರೋ ಬಸವಣ್ಣ||

ಶರಣು ಬಂದೆನು ತಂದೆ ಕರುಣದಿ ಕಾಯೆನ್ನ

ಕರುಣೆಯ ತೋರೋ ಬಸವಣ್ಣ| ಭವದ

ಬಂಧನವ ಕಳೆಯೋ ನಮ್ಮಣ್ಣ||

ಬಸವನಾಮದ ಒಸಗೆ ನಿತ್ಯವೂ ಜಗದೊಳಗೆ

ಬಸವ ರಥವನ್ನು ಎಳೆದಾರೋ| ಭಕ್ತರು

ಬಸವತತ್ವದ ಕಂಪು ಹರಡ್ಯಾರೋ||

ಬಸವಣ್ಣ ನಮ್ಮಪ್ಪ ಚನ್ನಬಸವ ನಮ್ಮಣ್ಣ

ಬಸವಾದಿ ಶರಣರು ಬಳಗವು| ನಮಗೆಲ್ಲ

ಶರಣ ಸಂತತಿಯು ನಮದಣ್ಣಾ||

ಮಾದರ ಚನ್ನಯ್ಯ ಮಡಿವಾಳ ಮಾಚಯ್ಯ

ನುಲಿಯ ಚಂದಯ್ಯ ನಮ್ಮಜ್ಜ| ಆಗಿರಲು

ಜಾತಿಯ ಹಂಗೇಕೆ ನಮಗೆಲ್ಲ||

ಶರಣರ ಮಹಿಮೆಯು ಅಗಣಿತವಾಗಿಹುದು

ಶರಣು ಶರಣೆನ್ನಿ ಶರಣರಿಗೆ| ಮಹಾಮಹಿಮ

ಪರಶಿವನೇ ಒಲಿವ ನಿಮಗೆಲ್ಲ||

ಶರಣತತ್ವವ ಕಲಿತು, ಶರಣತತ್ವವ ಕಲಿಸಿ

ಶರಣತತ್ವವನು ಪಾಲಿಸಲು| ಶರಣರು

ಶರಣುಶರಣೆಂದಾರು ಬಸವಣ್ಣ||

ಶರಣಜನರು ಸಾಧು ಹೃದಯವ ಹೊಂದ್ಯಾರೋ

ಸಜ್ಜನರ ಸಂಗದಿ ನಲಿದಾರೋ| ಅವರು

ಬಸವ ನಾಮವ ಜಪಿಸ್ಯಾರೋ||

ಶರಣನಾಗುವ ಮುನ್ನ ಬೆರಣಿಯು ನೀನಾಗು

ಬಸವಕುಲುಮೆಯಲಿ ಬೆಂದಿರಲು| ನೀನು

ಶರಣರ ನೊಸಲಿಗೆ ವಿಭೂತಿ||

ಇಷ್ಟಲಿಂಗವ ತಂದು ಪೂಜಿಸಿ ಫಲ ಏನು

ಬಸವತತ್ವವ ಮರೆತಿರಲು| ಕೈಲಾಸ

ಕಡುಕಷ್ಟ ಕಾಣಿರೋ ನಿಮಗೆಲ್ಲ||

ಅಷ್ಟವರಣದ ಅರಿವು ಷಟ್ ಸ್ಥಳದ ಸುಳಿವು

ಲಿಂಗಪೂಜೆಯ ನಿತ್ಯ ಮಾಡಿರಲು| ಇವು ಕಾಣೋ

ಮೋಕ್ಷಕೆ ದಾರಿ ಅನವರತ||

ಶರಣರು ಸತಿಯಾಗಿ ಲಿಂಗವು ಪತಿಯಾಗಿ

ಲಿಂಗಸಂಗದಿ ಬಾಳಿರಲು| ಅನವರತ

ಸಮರಸವೇ ಕಾಣೋ ಬಸವಣ್ಣ||

ಬಸವಣ್ಣ ಬಂದಾನೋ ಬಾಗಲಕ ನಿಂತಾನೋ

ವಚನಗಳ ಹೊತ್ತು ತಂದಾನೋ| ಬಸವಣ್ಣ

ಶರಣ ತತ್ವವನು ಸಾರ್ಯಾನೋ||


ಚನ್ನಬಸಪ್ಪ ರೊಟ್ಟಿ, ನೇಸರಗಿ

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group