spot_img
spot_img

ಬಸವಣ್ಣನವರ ವಿಚಾರಗಳೇ ನಮಗೆ ಸ್ಪೂರ್ತಿ- ಕಡಾಡಿ

Must Read

- Advertisement -

ಮೂಡಲಗಿ: ವಿಶ್ವಗುರು ಬಸವಣ್ಣನವರ ವಿಚಾರಗಳು ಸಾರ್ವಕಾಲಿಕ.ಇಂದಿನ ಯುವ ಜನಾಂಗ ಬಸವಣ್ಣನವರ ಆಚಾರ, ವಿಚಾರ ನಡೆ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ, ಸಮಾಜಕ್ಕೆ ಅವರ ವಿಚಾರಗಳೇ ನಮಗೆ ಸ್ಪೂರ್ತಿ ಎಂದು ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಕಡಾಡಿ ಹೇಳಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ ಕಲ್ಲೋಳಿ, ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯ ಹಾಗೂ ಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆದ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದ ಕಡಾಡಿ ಅವರು ರೈತಾಪಿ ಜನರು ದಿನಂಪ್ರತಿ ಬಸವಣ್ಣ ಜೊತೆ ಕೃಷಿ ಕಾಯಕದಲ್ಲಿ ಕಾಲ ಕಳೆಯುತ್ತಾರೆ. ಬಸವಣ್ಣ ಎಂದರೆ ರೈತರಿಗೆ ಎಲ್ಲಿಲದ ಪ್ರೀತಿ, ಪ್ರತಿ ಸೋಮವಾರ ಪೂಜೆ ಪುನಸ್ಕಾರ ಮಾಡಿದ ನಂತರ ರೈತರು ಊಟ ಮಾಡುವುದು ಹಿಂದಿನ ಕಾಲದಿಂದಲೂ ಬಂದ ಪದ್ಧತಿಯಾಗಿದೆ ಅದನ್ನು ನಾವು ಮುಂದುವರಿಸಿಕೊಂಡು ಹೊಗುವುದು ಉತ್ತಮ ಕಾರ್ಯ ಎಂದರು.

ಸಹಕಾರಿಯ ನಿರ್ದೇಶಕರಾದ ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಗೊಂಡ ವ್ಯಾಪಾರಿ, ಸಿದ್ದಪ್ಪ ಹೆಬ್ಬಾಳ, ಸೋಮನಿಂಗ ಹಡಗಿನಾಳ, ಹಣಮಂತ ಸಂಗಟಿ, ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕರಾದ ಪರಪ್ಪ ಗಿರೆಣ್ಣವರ, ಶಂಕರ ಕೌಜಲಗಿ, ದೊಡ್ಡಪ್ಪ ಉಜ್ಜಿನಕೊಪ್ಪ, ವಿಠ್ಠಲ ಜಟ್ಟೆನ್ನವರ, ಬಿ.ಆರ್. ಪಾಟೀಲ, ರಾಜಶೇಖರ ಕುರಬೇಟ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group