ಬೆಳಗಾವಿ: ನಗರದ ಶ್ರೀ ನಗರದ ನಿವಾಸಿಗಳು,ಸಾಹಿತಿಗಳು, ಸಂಘಟಕರು,ಸರಳ ಸಜ್ಜನಿಕೆಯ ಸ್ನೇಹಜೀವಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ 42 ವರ್ಷ ಸೇವೆ ಸಲ್ಲಿಸಿ ಕೊನೆಗೆ ತಾಲೂಕಾ ಅಧಿಕಾರಿಗಳಾಗಿ ಕಾರ್ಯಮಾಡಿ ಸೇವೆಯಿಂದ ನಿವೃತ್ತರಾದ ಬಸವರಾಜ ಗಾರ್ಗಿ ಅವರನ್ನು ಬೆಳಗಾವಿಯ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷರಾದ ಬಸವರಾಜ ಸುಣಗಾರ ರವರು ಶುಕ್ರವಾರ ಸಂಜೆ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸನ್ಮಾನಿಸಿ ಅಭಿನಂದಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಎಸ್ ಆರ್ ಹಿರೇಮಠರು, ನಿವೃತ್ತ ಪ್ರಧಾನ ಗುರುಗಳಾದ ಎಸ್ ಎಸ್ ಪಾಟೀಲರು, ಕನ್ನಡ ಸಾಹಿತ್ಯ ಭವನದ ವ್ಯವಸ್ಥಾಪಕರಾದ ಆರ್ ಬಿ ಕಟ್ಟಿ ಯವರು, ಹಿರಿಯರಾದ ಪ್ರಾಥಮಿಕ ಶಾಲಾ ಶಿಕ್ಷಕರಾದ ರಾಜೇಂದ್ರ ಗೋಶ್ಯಾನಟ್ಟಿಯವರು, ಅಯ್ ಆರ್ ಮೇಟ್ಯಾಳಮಠ ರವರು,ಪ್ರೌಢ ಶಾಲಾಶಿಕ್ಷಕರಾದ ಬಿ ಬಿ ಮಠಪತಿ ಯವರು ಉಪಸ್ಥಿತರಿದ್ದು ಅಭಿನಂದನೆಗಳನ್ನು ಸಲ್ಲಿಸಿದರು.