ಇಂದಿನಿಂದ ಅರಳಿಮಟ್ಟಿಯಲ್ಲಿ ಬಸವೇಶ್ವರ ಕಾರ್ತಿಕೋತ್ಸವ

Must Read

ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಫೆ.೯ ರಿಂದ ೧೧ ರವರೆಗೆ ಮೂರು ದಿನಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಸಮಾರಂಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಫೆ.೯ ರಂದು ಕಾರ್ತಿಕೋತ್ಸವ  ನಿಮಿತ್ತ ಅರಳಿಮಟ್ಟಿ ಹಾಗೂ ಆರತಿ ಕಡಕಭಾಂವಿ ಅವರಿಂದ ಭಜನಾ ಕಾರ್ಯಕ್ರಮ ಜರುಗುವವು. ಸೋಮವಾರ ಫೆ.೧೦ ರಂದು ಮುಂಜಾನೆ ೮ಕ್ಕೆ ಮಹಾಅಭಿಷೇಕ, ಸಾಯಂಕಾಲ ಕಾರ್ತಿಕೋತ್ಸವ, ರಾತ್ರಿ ೧೦ಕ್ಕೆ ಲಕ್ಷ್ಮೇಶ್ವರ ಜೈ ಮಾತೃಭೂಮಿ ನಾಟ್ಯ ಸಂಘದಿಂದ “ಮಗ ಹೋದರು ಮಾಂಗಲ್ಯ ಬೇಕು” ಸಾಮಾಜಿಕ ನಾಟಕ ಪ್ರದರ್ಶನಗೋಳ್ಳುವುದು.

ಮಂಗಳವಾರ ಫೆ.೧೧ ರಂದು ಮಧ್ಯಾಹ್ನ ೧೨ಕ್ಕೆ ಶ್ರೀ ಬಸವೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಕಲಾವಿದರಿಂದ ಕರಡಿ ಮಜಲು ಮತ್ತು ಸಾರವಾಡದ ಶ್ರೀ ಶಕ್ತಿ ಗೊಂಬಿ ಕುಣಿತ, ಖಣಿ ವಾದ್ಯಗಳು ಮತ್ತು ಅನ್ನಪ್ರಸಾದ ಜರುಗಲಿದೆ ಎಂದು ದುಂಡಪ್ಪ ಸತ್ತಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಗಂಡನ ಮನೆಯವರ ಕಿರುಕುಳ ; ಗೃಹಿಣಿ ಆತ್ಮಹತ್ಯೆ, ಅನಾಥವಾದ ೧೧ ತಿಂಗಳ ಮಗು

ಬೀದರ - ಗಂಡ, ಅತ್ತೆ, ಮಾವ ಸೇರಿ ಗೃಹಿಣಿಗೆ ಸತತವಾಗಿ ಮಾನಸಿಕ ಕಿರುಕುಳ ನೀಡಿದ ಕಾರಣ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರನಲ್ಲಿ ನಡೆದಿದೆಹೌದು...

More Articles Like This

error: Content is protected !!
Join WhatsApp Group