spot_img
spot_img

ಉಪಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದೇ ಮೂಲ ಜೀವನಕ್ಕೆ ಮಹತ್ವ ಕೊಡಬೇಕು – ಮುಕ್ತಾನಂದ ಪೂಜ್ಯರು

Must Read

ಮುನವಳ್ಳಿಃ “ ದೇವರು ನಮಗೆ ಜೀವನವನ್ನು ಕೊಟ್ಟಿದ್ದಾನೆ. ಇರುವ ಜೀವನದಲ್ಲಿ ನಮ್ಮ ನಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಮೂಲ ಜೀವನ ಹೊಂದಿದ್ದೇವೆ. ಅದರ ಜೊತೆಗೆ ಉಪಜೀವನ ಎಂಬುದನ್ನು ನಾವು ಮುಖ್ಯ ಜೀವನದೊಂದಿಗೆ ಅಳವಡಿಸಿಕೊಂಡಿರುತ್ತೇವೆ. ಆದರೆ ಮೂಲ ಜೀವನಕ್ಕೆ ನೀಡುವ ಪ್ರಾಮುಖ್ಯತೆಗಿಂತ ಉಪ ಜೀವನಕ್ಕೆ ಪ್ರಾಮುಖ್ಯತೆ ನೀಡಿದರೆ ಬದುಕಿನಲ್ಲಿ ಕಹಿಯನ್ನು ಅನುಭವಿಸುತ್ತೇವೆ.ನಮ್ಮ ನಿಜವಾದ ಆಂತರಿಕ ಶಾಂತಿ ಮತ್ತು ಶಕ್ತಿಯೊಂದಿಗೆ ನಾವು ಸಂಪರ್ಕ ಕಳೆದುಕೊಳ್ಳುತ್ತೇವೆ. ನಮ್ಮ ಮನಸ್ಸು ನಮ್ಮ ಕೈಯಲ್ಲಿದ್ದಾಗ ಮಾತ್ರ ಮುಖ್ಯ ಜೀವನಕ್ಕೆ ಒತ್ತು ಕೊಡಲು ಸಾಧ್ಯ.ಅಧ್ಯಾತ್ಮಿಕ ಅರಿವು ನಮಗೆ ಸಕಾರಾತ್ಮಕ ಆಲೋಚನೆಗಳನ್ನು ಒದಗಿಸುತ್ತದೆ. ಇಂತಹ ಸತ್ಸಂಗದಲ್ಲಿ ಪಾಲ್ಗೊಂಡು ನಮ್ಮ ಜೀವನವನ್ನು ಸಕಾರಾತ್ಮಕ ಆಲೋಚನೆಗಳಲ್ಲಿ ತೊಡಗಿಸಿಕೊಳ್ಳಬೇಕು.” ಎಂದು ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ತಿಳಿಸಿದರು.

ಅವರು ಮುನವಳ್ಳಿಯ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಜರುಗಿದ ಸತ್ಸಂಗವನ್ನು ಉದ್ದೇಶಿಸಿ ಮಾತನಾಡಿದರು.”ಜೀವನವನ್ನು ನಿಜವಾದ ಸೃಜನಶೀಲ ಪ್ರಕ್ರಿಯೆಯಾಗಿ ವಿನ್ಯಾಸಗೊಳಿಸಲಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಾಗ ಕಾರ್ಯಗಳ ಮೇಲೆ ನಿಯಂತ್ರಿಸಲು ಧ್ಯಾನ ಅವಶ್ಯ.ನಾವು ನಮ್ಮ ಜೀವನದಲ್ಲಿ ಶುದ್ಧ ಭಾವನೆಗಳನ್ನು ಅಳವಡಿಸಕೊಳ್ಳಬೇಕು.ಆಗ ನಮ್ಮ ಬದುಕು ಶುಭವಾಗುತ್ತದೆ” ಎಂದು ಯರಗಟ್ಟಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ತನುಜಾ ಸತ್ಸಂಗದ ಮಹತ್ವ ಕುರಿತು ಇದೇ ಸಂದರ್ಭದಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ೨೫ ವರ್ಷಗಳ ವೈವಾಹಿಕ ಜೀವನವನ್ನು ಪೂರೈಸಿದ ಗೋರಾಬಾಳ ದಂಪತಿಗಳಿಂದ ಪೂಜ್ಯರಿಗೆ ಮತ್ತು ಅಕ್ಕನವರಿಗೆ ಗೌರವ ಸಮರ್ಪಣೆ ಜರುಗಿತು. ಗಂಗಾಧರ ಗೋರಾಬಾಳ ಮಾತನಾಡಿ “ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯದಿಂದ ನಮ್ಮ ಜೀವನಕ್ಕೆ ಬಹಳಷ್ಟು ಮೌಲ್ಯಗಳು ದೊರಕಿದ್ದು.ನಮ್ಮ ದಾಂಪತ್ಯ ಜೀವನದಲ್ಲಿ ನಾವು ಪ್ರತಿನಿತ್ಯ ಈ ಸಂಸ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಸಾಗಿಸುತ್ತಿದ್ದೇವೆ. ಇಂದು ನಮ್ಮ ೨೫ ವರ್ಷಗಳ ದಾಂಪತ್ಯ ಜೀವನಕ್ಕೆ ಎಲ್ಲ ಹಿರಿಯರಿಂದ ಆಶೀರ್ವಾದ ದೊರಕಿದ್ದು ನಮ್ಮ ಪುಣ್ಯ”ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಗೀತಾ ಅಕ್ಕನವರು. ಬಿ.ಬಿ.ಹುಲಿಗೊಪ್ಪ, ತಾನಾಜಿರಾವ್ ಮುರಂಕರ, ವೈ.ಬಿ.ಕಡಕೋಳ, ಬಸವರಾಜ ತುಳಜನ್ನವರ, ವೈ.ಎಫ್.ಶಾನುಭೋಗ, ಮಂಜುನಾಥ ಭಂಡಾರಿ, ಶರಣೆ ಇಂದ್ರವ್ವ ಕದಂ, ಸಂಗವ್ವಕ್ಕ ಅನ್ನಪೂರ್ಣ ಅಕ್ಕನವರು. ಗೋಮಾಡಿ ಅಜ್ಜಪ್ಪ ಕಳಸನಗೌಡರ ಅಮ್ಮನವರು. ಬಾಳು ಹೊಸಮನಿ ಸೇರಿದಂತೆ ಸತ್ಸಂಗದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮಂಜುನಾಥ ಭಂಡಾರಿ ಪ್ರಾರ್ಥನೆ ಸಲ್ಲಿಸಿದರು. ಬಾಳು ಹೊಸಮನಿ ಸ್ವಾಗತಿಸಿದರು. ಬ್ರಹ್ಮಕುಮಾರಿ ಗೀತಾ ಅಕ್ಕನವರು ಕಾರ್ಯಕ್ರಮ ನಿರೂಪಿಸಿದರು. ವೈ.ಬಿ.ಕಡಕೋಳ ವಂದಿಸಿದರು. ಕೊನೆಯಲ್ಲಿ ಬ್ರಹ್ಮ ಭೋಜನ ಜರುಗುವ ಮೂಲಕ ಕಾರ್ಯಕ್ರಮ ಸಂಪನ್ನವಾಯಿತು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!