ಸಿಂದಗಿ: ಪೌರಾಣಿಕ ಬಯಲಾಟಗಳು ನಮ್ಮ ನಾಡಿನ ಶ್ರೇಷ್ಠ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಮುಂದಿನ ಮಾನವ ಜನಾಂಗಕ್ಕೆ ಭಾರತದ ಸಂಸ್ಕೃತಿಯಲ್ಲಿರುವ ನ್ಯಾಯ, ನೀತಿ, ಧರ್ಮವನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಇಂತಹ ಸಾಮಾಜಿಕ ಬಯಲಾಟಗಳು ಮೇಲಿಂದ ಮೇಲೆ ಜರುಗಬೇಕು. ಅಂದಾಗ ಮಾತ್ರ ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುತ್ತವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಬಂದಾಳ ರಸ್ತೆಯಲ್ಲಿರುವ ಗೋಲಿಬಾರ ಮಡ್ಡಿಯ ಸೀಮಿದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸಮಾಜ ಪತಿವರ್ತನಾ ಸಮಿತಿ ಹಮ್ಮಿಕೊಂಡ “ಕರ್ಣಾರ್ಜುನರ ಕಾಳಗ”ಎಂಬ ಬಯಲಾಟವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಪೌರಾಣಿಕ ಬಯಲಾಟಗಳು, ಸಾಮಾಜಿಕ ನಾಟಕಗಳು ಮರೆಮಾಚುತ್ತಿದ್ದು ಅದರಿಂದ ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾವಿಧರ ಸ್ಥಿತಿ ಚಿಂತಾಜನಕವಾಗಿದ್ದು ಕಾರಣ ಅವರ ಉತ್ತೆಜನಕ್ಕೆ ಗ್ರಾಮಗಳ ಜಾತ್ರಾ ಮಹೋತ್ಸವಗಳನ್ನು ಸಾಮಾಜಿಕ ಪಿಡಗನ್ನು ಹೋಗಲಾಡಿಸುವ ಇಂತಹ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳು ಪ್ರದರ್ಶನಗೊಳಿಸಿದ್ದಾದರೆ ಸಮಾಜದಲ್ಲಿನ ಅಂಧಕಾರವನ್ನು ಹೋಗಲಾಡಿಸಬಹುದು ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ರಾಜಣ್ಣಿ ನಾರಾಯಣಕರ, ಹಣಮಂತ ಸುಣಗಾರ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಡಾ. ಅನೀಲ ನಾಯಕ, ರವಿ ನಾಯ್ಕೋಡಿ, ಕಾಜು ಬಂಕಲಗಿ, ಶರಣಪ್ಪ ಸುಲ್ಪಿ, ಮಹಾಂತೇಶ ನಾಯ್ಕೋಡಿ, ರಫೀಕ ಮಣ್ಣುರ, ಮಹಿಬೂಬ ವಾಲೀಕಾರ, ಪರಸು ಕಲಹಳ್ಳಿ ಸೇರಿದಂತೆ ಹಿರಿಯ ಮುಖಂಡರು, ತಾಯಂದಿರು ಯುವ ಮಿತ್ರರು ಉಪಸ್ಥಿತರಿದ್ದರು.