ಕಸದ ಗಾಡಿಯ ಸೌಕರ್ಯ ಇಲ್ಲದ ನಾಗರ ಬಾವಿ, ಇತ್ತ ನೋಡಿ ಕ್ಷೇತ್ರದ ಶಾಸಕರೇ, ಬಿಬಿಎಂಪಿ ಅಧಿಕಾರಿಗಳೆ
ಬೆಂಗಳೂರು : ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಬಸ್ ನಿಲ್ದಾಣದ ಸಮೀಪ ಇರುವ ರಸ್ತೆಯಲ್ಲಿ ಪ್ರತಿ ದಿನ ಚಾಪೆಯ ಮೇಲೆ ಕಸದ ರಾಶಿ ರಾಶಿ ಸುರಿದುಕೊಂಡು ಬಿ.ಬಿ.ಎಂ.ಪಿ ಯಲ್ಲಿ ಕೆಲಸ ಮಾಡುವ ಮಹಿಳೆಯರು ಚಾಪೆಯ ಎರಡು ಬದಿಯನ್ನು ಇಬ್ಬರು ಮಹಿಳೆಯರು ಹಿಡಿಕೊಂಡು ನಾಗರಭಾವಿ ಬಸ್ ನಿಲ್ದಾಣ ದಿಂದ ಸ್ವಲ್ಪ ದೂರಕ್ಕೆ ಹೋಗಿ ಅಲ್ಲಿ ಕಸದ ರಾಶಿ ರಾಶಿ ಸುರಿದು ಅಲ್ಲಿನ ನಿವಾಸಿಗಳಿಗೆ ಹಾಗೂ ದಿನ ನಿತ್ಯ ರಸ್ತೆಯಲ್ಲಿ ಸಾಗುವ ಜನರು ಮೂಗು ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಾಪೆಯ ಮೇಲೆ ಕಸದ ರಾಶಿ ರಾಶಿ ಸುರಿದುಕೊಂಡು ರಸ್ತೆ ಉದ್ದಕ್ಕೂ ಕಸ ಚೆಲ್ಲುತ್ತಾ ಸಾಗುವ ದೃಶ್ಯ ಪ್ರತಿ ನಿತ್ಯ ನೋಡಲು ಸಿಗುವ ತಾಣವೇ ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಎಂದರೇ ಅತಿಶಯೋಕ್ತಿಯಲ್ಲ ಎನ್ನಬಹುದು !!
ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ಯಲ್ಲಿ ಚಾಪೆಯಲ್ಲಿ ಕಸದ ರಾಶಿ ರಾಶಿ ತೆಗೆದುಕೊಂಡು ಹೋಗುವುದಕ್ಕೆ ಅಂತ್ಯ ಸಂಸ್ಕಾರ ಎಂದು ಇಲ್ಲಿನ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ಬಿ.ಎಂ.ಪಿ ಕಾರ್ಮಿಕರಿಗೆ ಬೇಕಾಗುವ ಮೂಲಭೂತ ಸೌಕರ್ಯ ಇಲ್ಲದ ಕ್ಷೇತ್ರ ನಾಗರ ಬಾವಿ !!
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ನಿದ್ದೆಗೆ ಜಾರಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಒಟ್ಟಿನಲ್ಲಿ ಜನ ಸಾಮಾನ್ಯರ ಗೋಳು ಕೇಳುವವರು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಶಾಸಕರೆ ಮತದಾರರು ಬೇಕಲ್ಲವೇ ನಿಮಗೆ ?
ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ಕಡೆ ನೋಡಿ ಕ್ಷೇತ್ರದ ಶಾಸಕರೇ, ಸಮಸ್ಯೆಗಳ ಆಗರವಾಗಿರುವ ಕ್ಷೇತ್ರದ ಸಮಸ್ಯೆ ಬಗೆಹರಿಸಿ. ಹೆಚ್ಚಿನ ವಾಹನ ದಟ್ಟಣೆಯಿರುವ ಈ ಸ್ಥಳದಲ್ಲಿ ನಾಗರಿಕರಿಗೆ ಅನುಕೂಲವಾಗುವಂತಹ ಕ್ರಮ ತೆಗೆದುಕೊಳ್ಳಿ ಎಂಬುದು Times of ಕರ್ನಾಟಕ ದ ಕಾಳಜಿಯಾಗಿದ್ದು, ಇನ್ನಾದರೂ ಈ ಸಮಸ್ಯೆ ಗೆ ಬಿ.ಬಿ.ಎಂ.ಪಿ ಹಾಗು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಮನಸ್ಸು ಮಾಡುವುದೇ ಎಂದು ಕಾದು ನೋಡಬೇಕಿದೆ !!
ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Mobile Number : 9480129458