spot_img
spot_img

ಸಕ್ಕರೆ ಮತ್ತು ರಕ್ತದೊತ್ತಡ ಕಾಯಿಲೆಗಳ ಬಗ್ಗೆ ಎಚ್ಚರವಹಿಸಿರಿ – ಡಾ. ಎಸ್ ಎಸ್ ಗಡೇದ

Must Read

- Advertisement -

ಮೂಡಲಗಿ: ‘ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕಾಯಿಲೆಗಳು ದೇಹದಲ್ಲಿ ಆಶ್ರಯ ಪಡೆಯುವುದಕ್ಕಿಂತ ಮುಂಚೆ ಪ್ರತಿಯೊಬ್ಬರು ಎಚ್ಚರವಹಿಸಬೇಕು’ ಎಂದು ಚಿಕ್ಕೋಡಿಯ ಹೆಚ್ಚುವರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ಗಡೇದ ಅವರು ಹೇಳಿದರು.

ಇಲ್ಲಿಯ ಅಂಜುಮನ್ ಎ ಇಸ್ಲಾಂ ಸೊಸೈಟಿ ಹಾಗೂ ಖಿದಮತ್ ಸೋಸಿಯಲ್ ವೆಲಫೇರ್ ಕಮಿಟಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಮದರಸಾ ದಾರುಲ ಉಲೂಮದಲ್ಲಿ ಆಯೋಜಿಸಿದ್ದ ಉಚಿತ ಸಕ್ಕರೆ ಕಾಯಿಲೆ ಮತ್ತು ಕಣ್ಣು ತಪಾಸಣೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ದೇಹದಲ್ಲಿ ಕಾಣಿಸಿಕೊಂಡರೆ ತಪ್ಪದೆ ಸರಿಯಾಗಿ ಉಪಚಾರ ಮಾಡಿಕೊಳ್ಳಬೇಕು ಎಂದರು.

ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕಾಯಿಲೆಗಳನ್ನು ನಿರ್ಲಕ್ಷಿಸಿದರೆ ಪಾರ್ಶ್ವವಾಯು, ಹೃದಯಾಘಾತ, ಕಿಡ್ನಿ ನಿಷ್ಕ್ರಿಯತೆ ಹೀಗೆ ಹಲವಾರು ತೀಕ್ಷ್ಣ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆದುಕೊಂಡು ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಂಡು ರೋಗಗನ್ನು ನಿಯಂತ್ರಿಸಿಕೊಳ್ಳಬೇಕು ಎಂದರು.

- Advertisement -

ಅಂಜುಮನ್ ಸೊಸೈಟಿಯವರು ಜನರ ಆರೋಗ್ಯ ಸಪಾಸಣೆಯಂಥ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಬೆಳಗಾವಿಯ ಕುಷ್ಟರೋಗ ನಿವಾರಣಾಧಿಕಾರಿ ಡಾ. ಚಂದನಿ ದೇವಡಿ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆಯಲ್ಲಿ ಬಿಪಿಎಲ್ ಕಾರ್ಡದಾರರ ಕುಟುಂಬಗಳ ಚಿಕಿತ್ಸೆಗಾಗಿ ರೂ. 5 ಲಕ್ಷ ಹಾಗೂ ಎಪಿಎಲ್ ಕಾರ್ಡದಾರರಿಗೆ ರೂ. 1 ಲಕ್ಷ ಧನಸಹಾಯವಿದ್ದು ಜನರು ಇಂಥ ಯೋಜನೆಗಳಿಗೆ ನೊಂದಣಿ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಾ. 26 ಮತ್ತು 27ರಂದು ಎರಡು ದಿನ ಉಚಿತ ಬೃಹತ್ ಕಣ್ಣು ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಗೋಕಾಕ ಮತ್ತು ಮತ್ತು ಮೂಡಲಗಿ ತಾಲ್ಲೂಕಿನ ಜನರು ಶಿಬಿರದ ಸದುಪಯೋಗಪಡೆದುಕೊಳ್ಳಲು ತಿಳಿಸಿರುವರು.

- Advertisement -

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತಸಹಾಯಕ ನಾಗಪ್ಪ ಶೇಖರಗೋಳ ಶಿಬಿರವನ್ನು ಉದ್ಘಾಟಿಸಿದರು.

ಅಂಜುಮನ್ ಎ ಇಸ್ಲಾಂ ಸೊಸೈಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.

ತಹಶೀಲ್ದಾರ್ ಡಿ.ಜೆ. ಮಹಾತ್, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಇಒ ಅಜಿತ್ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಹಾಲಪ್ಪ ಬಾಲದಂಡಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಬಾಲಶೇಖರ ಬಂದಿ, ಡಾ. ಭಾರತಿ ಕೋಣಿ, ಡಾ. ರಾಜೇಂದ್ರ ಕಣದಾಳೆ, ಡಾ. ಮಹಮ್ಮದ ಆರೀಫ, ಡಾ. ದೀಪಾ ಮಾಚಪ್ಪನ್ನವರ ಇದ್ದರು. ವೇದಿಕೆಯಲ್ಲಿದ್ದರು.

ಲಾಲ್‍ಸಾಬ ಸೈದಾಪುರ ಸ್ವಾಗತಿಸಿದರು, ಎಸ್.ಎಂ. ದಬಾಡಿ ನಿರೂಪಿಸಿದರು, ನೂರ ಹುಣಶ್ಯಾಳ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group