spot_img
spot_img

ಮಾಲಾಧಾರಿಗಳು ವೃತದ ನಂತರವೂ ಕಪ್ಪು ಚುಕ್ಕೆ ಬಾರದಂತೆ ಇರಬೇಕು – ಕಡಾಡಿ

Must Read

spot_img
- Advertisement -

ಮೂಡಲಗಿ: ಭಾರತ ದೇಶ ಹಲವಾರು ಮತ, ಪಂಥ, ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಈ ಎಲ್ಲ ಮತ, ಪಂಥ, ಸಂಪ್ರದಾಯಗಳು ಶಾಂತಿ ನೆಮ್ಮದಿಗಾಗಿಯೇ ಪ್ರಾರ್ಥನೆ ಮಾಡುತ್ತವೆ. ಅದರಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಕಠಿಣ ವ್ರತವು ತಪಸ್ಸು ಇದ್ದಂತೆ. ಹೀಗಾಗಿ ಎಲ್ಲ ಮಾಲಾಧಾರಿಗಳು ವ್ರತ ಮುಗಿದ ಮೇಲು ಸಮಾಜದಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಬಾಳಿ ಬದುಕಬೇಕು ಆಗ ನೀವು ಮಾಲೆಧಾರಣೆ ಮಾಡಿದಕ್ಕೂ ಸಾರ್ಥಕವಾಗುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಸೋಮವಾರ ಡಿ-30 ರಂದು ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ನಿರ್ಮಿಸಲಾದ ಸಮುದಾಯ ಭವನದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳುವ ಜಿಲ್ಲೆಯ ಯಾತ್ರಾರ್ಥಿಗಳಿಗೆ ಬೆಳಗಾವಿಯಿಂದ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಗ್ರಾಮಗಳ ಅಭಿವೃದ್ದಿ ಎನ್ನುವುದು ಚುನಾಯಿತ ಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಒಕ್ಕಟಿನಿಂದ ನಾವು ಪ್ರಯತ್ನ ಮಾಡಿ ಪಕ್ಷಪಾತ ಮತ್ತು ಜಾತಿ ವ್ಯವಸ್ಥೆಯನ್ನು ಮೀರಿ ಅಭಿವೃದ್ದಿ ಪರವಾಗಿ ನಾವು ಚಿಂತನೆ ಮಾಡಿದಾಗ ಅಭಿವೃದ್ದಿ ಪರ್ವ ತನ್ನಿಂದ ತಾನೆ ಪ್ರಾರಂಭವಾಗುತ್ತದೆ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಅನ್ನುವಂತಹ ಕಿವಿಮಾತು ಹೇಳಿದರು.

- Advertisement -

ಗೋವಿಂದಪ್ಪ ಗಿರಡ್ಡಿ, ರವಿಂದ್ರ ದೇಶಪಾಂಡೆ, ಗೋಪಾಲ ಬಿಳ್ಳೂರ, ಪ್ರಕಾಶ ಪಾಟೀಲ, ಬಸು ನಿಡಗುಂದಿ, ರಾಜು ರೂಗಿ, ಪರಪ್ಪ ಕುಂಬಾರ, ಶ್ರೀಶೈಲ ಪೂಜೇರಿ, ಶಾಂತು ಉಪ್ಪಿನ, ಚಂದ್ರಶೇಖರ ಗೌಡನ್ನವರ, ಗುರುಶಾಂತ ಹಿರೇಮಠ ಗುರುಸ್ವಾಮಿಗಳಾದ ಮಹಾದೇವ ಕೆಂಪ್ಪನ್ನವರ, ಮಂಜುನಾಥ ಜಕಾತಿ, ಮಾಲಾಧಾರಿಗಳಾದ ಹಣಮಂತ ಉತ್ತೂರ, ಸಂಗಯ್ಯ ಹಿರೇಮಠ, ರಾಜು ಡೊಂಬರ, ಹಣಮಂತ ಕೊಪಪ್ದ, ಸಚಿನ ಕುರುಬರ, ರಾಜು ಪತ್ತಾರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group