ಸಿಂದಗಿ; ದೇಶ ಸೇವೆಯೇ ಈಶ ಸೇವೆ ಜನ ಸೇವೆಯೇ ಜನಾರ್ಧನ ಸೇವೆ ಎಂಬ ಉಕ್ತಿಯಂತೆ ಶಿಕ್ಷಣ ಪಡೆದ ನಾವು ದೇಶ ಕಟ್ಟಲು ಬದ್ಧರಾಗಬೇಕೆಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಡಾ. ಆರ್. ಆರ್. ಬಿರಾದಾರ ಹೇಳಿದರು.
ಪಟ್ಟಣದ ಪಿ.ಇ.ಎಸ್ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ೨೦೨೪-೨೫ ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಧನೆ ಮಾಡಬೇಕಾದರೆ ತಪಸ್ಸು ಮುಖ್ಯ ತಪಸ್ಸು ಎಂದರೆ ನಂಬಿಕೆ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಅಂದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದರು.
ಜೀವನದಲ್ಲಿ ಸಣ್ಣ ಸಣ್ಣ ಗುರಿಗಳ ಉನ್ನತ ಮಟ್ಟದ ಗುರಿಗೆ ದಾರಿಯಾಗುತ್ತದೆ ಆದ್ದರಿಂದ ತಮ್ಮ ಗುರಿಗಳತ್ತ ಹೆಜ್ಜೆ ಹಾಕಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಡಾ. ಸಂತೋಷಕುಮಾರ ಭೀ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು. ಪಿ.ಇ.ಎಸ್ ಆಡಳಿತಾಧಿಕಾರಿ ಆಯ್. ಬಿ. ಬಿರಾದಾರ, ಕೆ. ಎಚ್. ಸೋಮಾಪೂರ, ಎಸ್. ವಾಯ್. ಬೀಳಗಿ, ಪಿ. ಎಮ್. ಮಡಿವಾಳರ, ಎಂ. ಎಸ್. ಚಾಂದಕವಠೆ ಪ್ರಾಚಾರ್ಯರಾದ ಆರ್. ಬಿ. ಗೋಡಕರ ವಿದ್ಯಾರ್ಥಿ ಪ್ರತಿನಿಧಿ ಕು. ಮಲ್ಲಮ್ಮ ಸೊನ್ನದ ಉಪಸ್ಥಿತರಿದ್ದರು.
ಜಿ. ಎಸ್. ಕಡಣಿ ನಿರೂಪಿಸಿದರು. ಆರ್. ಬಿ. ಯಂಕಂಚಿ ಸ್ವಾಗತಿಸಿದರು. ಅಮೀರ ಮೊಪಗಾರ ವಂದಿಸಿದರು.