spot_img
spot_img

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯಿರಲಿ : ಸತೀಶ ಜಾರಕಿಹೊಳಿ

Must Read

ಬೆಳಗಾವಿ – ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಬದುಕು ಬದಲಾಗಲು ಸಾಧ್ಯ. ಪೋಷಕರು ತಮ್ಮ ಮಕ್ಕಳನ್ನೇ ದೇವರೆಂದು ಭಾವಿಸಿ, ದೇವರ ಹೆಸರಿನಲ್ಲಿ ಮಾಡುವ ದುಂದುವೆಚ್ಚಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಿ ಎಂದು ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟರು.

ನಗರದ ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಂಸ್ಥೆಯು ಕಣಬರಗಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೊಳಿಯವರು ಉದ್ಘಾಟಿಸಿ ಮಾತನಾಡಿದರು.

ಖಡ್ಗಗಳಿಂದ ಮಾತ್ರ ಇತಿಹಾಸ ರಚನೆಯಾಗಿರುವುದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಆದರೆ, ಲೇಖನಿಯಿಂದ ಇತಿಹಾಸವನ್ನು ರಚನೆ ಮಾಡಬಹುದೆಂದು ತೋರಿಸಿಕೊಟ್ಟವರು ಡಾ. ಬಾಬಾ ಸಾಹೇಬರು. ದೇವರು ಜಾತ್ರೆ, ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ಖರ್ಚುಮಾಡುವುದು ಮರಳಿ ಬರುವುದಿಲ್ಲ. ಆದರೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾಡಿದ ಖರ್ಚು ದುಪ್ಪಟ್ಟಾಗಿ ಮರಳಿ ಬರುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯಿರಲಿ. ಈ ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತಿದೆ. ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಗುರುತಿಸಿ ಗೌರವಿಸುವುದರ ಮೂಲಕ ಅವರ ಕಾರ್ಯಕ್ಷಮತೆಗೆ ಇನ್ನಷ್ಟು ಬಲ ತುಂಬುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದ ೧೮ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಲಂಪಿಕ್ ಕ್ರೀಡಾಪಟುಗಳಾದ ಸಂಜಯ ಹಮ್ಮಣ್ಣವರ, ರಾಷ್ಟ್ರಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಈಜುಪಟುವಾದ ರಾಘವೇಂದ್ರ ಅಣವೇಕರ, ಮಹೇಶ ಫೌಂಡೇಶನ್ ಸಂಸ್ಥಾಪಕರಾದ ಮಹೇಶ ಜಾಧವ, ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ ಸದಾಶಿವ ಗಸ್ತಿ, ಆಶ್ರಯ ಫೌಂಡೇಶನ್ ಸಂಸ್ಥಾಪಕರಾದ ಶ್ರೀಮತಿ ನಾಗರತ್ನ ರಾಮಗೌಡರ, ವೈದ್ಯಕೀಯ ಹಾಗೂ ಸಮಾಜ ಸೇವಕರುಗಳಾದ ಲಕ್ಷಣ ಮಾಲಾಯಿ ಮತ್ತು ಸುನಿಲ್ ನೇಗಿನಹಾಳ, ಕಲಾವಿದರಾದ ಆಕಾಶ ರುದ್ರಪ್ಪ ಹಲಗೇಕರರನ್ನು ಸನ್ಮಾನಿಸಲಾಯಿತು.

ಅತಿಥಿಗಳಾದ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರಗೌಡ ಪಾಟೀಲ ಮತ್ತು ಅಖಿಲ ಭಾರತ ದಲಿತ ಯುವ ಸಂಘಟನೆಯ ಅಧ್ಯಕ್ಷರಾದ ಮಲ್ಲೇಶ ಚೌಗಲೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಬೆಳಗಾವಿ ನಗರವಲಯದ ಶಿಕ್ಷಣಾಧಿಕಾರಿಗಳಾದ ರಿಜ್ವಾನ್ ನಾವಗೇಕರ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿಗಳು. ಯಾವುದೇ ವಿದ್ಯಾರ್ಥಿ ಆರ್ಥಿಕ ತೊಂದರೆಯಿಂದ ಶಿಕ್ಷಣದಿಂದ ವಂಚಿತನಾಗಬಾರದು. ಅಂಥವರಿಗಾಗಿ ಇಂಥ ಹಲವಾರು ಸಂಘ- ಸಂಸ್ಥೆಗಳು ಸಹಾಯ ಮಾಡಲು ಸಿದ್ಧವಿದ್ದಾವೆ ಎಂದರು.

ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ದುಂಡಯ್ಯ ಪೂಜೇರಿ ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಈರಪ್ಪ ಜಡಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜ ರಾಯವ್ವಗೋಳ, ಬೆಳಗಾವಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ತಹಶೀಲ್ದಾರರಾದ ಅಶೋಕ ಮನ್ನಿಕೇರಿ, ಸಾಮಾಜಿಕ ಕಾರ್ಯಕರ್ತರಾದ ಗುರುದೇವಗೌಡ ಪಾಟೀಲ, ಸಮಾಜದ ಹಿರಿಯ ಮುಖಂಡರಾದ ಬಾಬು ಮೇತ್ರಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಅಂಜನಕುಮಾರ ಗಂಡಗುದರಿ ಪ್ರಾಸ್ತಾವಿಕ ಮಾತಾಡಿದರು.

ಗಂಗಾಧರ ಹೊರಗಿನಮನಿ ನಿರೂಪಿಸಿದರು, ಸಂಸ್ಥೆಯ ಗೌರವಾಧ್ಯಕ್ಷರಾದ ಅಕ್ಷಯ ಕೋಲ್ಕಾರ ಸ್ವಾಗತಿಸಿದರು. ಸದಸ್ಯರಾದ ಪ್ರಮೋದ ಮೇತ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆನಂದ ಕೋಲ್ಕಾರ, ಕಾರ್ಯದರ್ಶಿ ಚನ್ನಬಸಪ್ಪ ಟೋಪಿ, ಸದಸ್ಯರುಗಳಾದ ಅಜೀತ ಕಾಂಬ್ಳೆ, ಶ್ರೀಮತಿ ಸುಚೇತಾ ಗಂಡಗುದರಿ, ಹಾಗೂ ಊರಿನ ಸಮಸ್ತ ನಾಗರಿಕರು ಮತ್ತು ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!