ಕವನ: ಮುಂಜಾನೆಯ ಸೊಬಗು

Must Read

ಮುಂಜಾನೆಯ ಸೊಬಗು

ಬೆಳಿಗ್ಗೆ ಆದರೆ ಸಾಕು ಎಲ್ಲರ
ಕಿವಿಗೆ ಬೀಳೋ ಶಬ್ದ ಅಂದ್ರ ಬರೀ ಕರೋನಾ ಕರೋನಾ

ಯಾಕ ಇಂತಾ ಹೊತ್ತಿನಾಗರ ಸ್ವಲ್ಪ ಸೃಷ್ಟೀನ ಕಣ್ತೆರದು ನೋಡಬಾರದಂತೀನಿ

ಸರಿ ಬಿಡಪಾ ಅಂತೇಳಿ
ದಿವಸಾ ಏಳುವಂಗ ಎದ್ದು ಸ್ವಲ್ಪ
ಯೋಗಾಸನ ಮಾಡೂನ ಅಂತಾ ಮಾಳಿಗೆ ಮ್ಯಾಲೆ ಹೋದೆ

ಕಣ್ಣ ತೆಗೆದು ಸುಮ್ಮನೆ ಮುಗಿಲ ಕಡೆ
ನೋಡತೀನಿ
ಹೆಣ್ಣುಮಕ್ಕಳ ಹಣಿಮ್ಯಾಲಿನ ಕುಂಕುಮದಂಗ ಸೂರ್ಯ ಕಾಣತಿದ್ದ

ಏನು ಬಣ್ಣ! ಇಡೀ ಪೂರ್ವ ದಿಕ್ಕ ಬಂಗಾರ ಬಣ್ಣಕ್ಕ ತಿರಗಿತ್ತ

ತಂಪಾದ ಗಾಳಿ ಅದಕ
ಜೊತಿಯಾಗಿ ಸುಖ ನೀಡತಿತ್ತ ಸ್ವರ್ಗ ಇಲ್ಲೇ ಐತಿ ಅನಸತಿತ್ತ

ಈ ಚೆಂದऽನ ಪ್ರಕೃತಿ ನಮಗ ಏನೆಲ್ಲಾ ಕೊಟ್ಟೈತಿ ಅದನ ಚಂದಂಗ ಅನುಭವಿಸೋ ಯೋಗಾನೂ ನಮ್ಮಲ್ಲಿಲ್ಲಲ ಅನಸಾಕತ್ತಿತು

ತಿಳಿ ಆಕಾಶ ಜೀವನದ ನಿಜವಾದ ಆನಂದ ಅಂದ್ರ
ಸುಮ್ಮನಿರೋದು ಅಂತಾ ಹೇಳಿಕೊಡತಿತ್ತು

ಆ ಸೂರ್ಯ ನಾ ಜಗತ್ ಬೆಳಗಾಕತ್ತಿ
ಎಷ್ಟು ವರ್ಷ ಆತು ಬೇಜಾರ ಮಾಡಕೊಂಡಿಲ್ಲ
ನೀ ಯಾಕ ಮಾಡಕೋತಿ
ನಿನ್ನಕೆಲಸ ನೀ ಮಾಡಕೋತ ಇರು ಅಂತೇಳತಿತ್ತು

ತಂಪಾದ ಗಾಳಿ ಸುಖ ಅನ್ನೋದು ವಸ್ತುದಾಗಿಲ್ಲ ಅನುಭವಿಸೋದ್ರಾಗ ಐತಿ ತಿಳ್ಕೋ ಅಂತೇಳತಿತ್ತು

ಈ ಕರೋನಾ ಮಹಾ ಮಾರಿ
ಕಾಲದಾಗ ಸ್ವಲ್ಪರ ಆಧ್ಯಾತ್ಮಿಕ ಚಿಂತನೆ ಮಾಡೋಣ

ಆತ್ಮವಿಶ್ವಾಸ ಕಳಕೋಳಾದು ಬ್ಯಾಡ
ನಮ್ಮ ಬೆನ್ನಿಗೆ ಭಗವಂತಾದಾನ
ಅವಗ ಎಲ್ಲಾ ಶರಣಾಗ್ರಿ
ಚಲೋ ಆಗತದ

ಸರ್ವೇ ಜನ ಸುಖಿನೋ ಭವಂತು


ಶಿವಕುಮಾರ ಕೋಡಿಹಾಳ
ಮೂಡಲಗಿ

Latest News

ಜಲಜೀವನ ಮಿಶನ್ ಸಫಲಗೊಳಿಸಲು ಶಾಸಕ ಮನಗೂಳಿ ಕರೆ

ಸಿಂದಗಿ; ಜಲಜೀವನ ಮಿಶನ್ ಯೋಜನೆಯಡಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ಕಲ್ಪಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಕಷ್ಠು ಹಣ ವ್ಯಯ ಮಾಡಿದೆ ಆದರೆ...

More Articles Like This

error: Content is protected !!
Join WhatsApp Group