spot_img
spot_img

ಬೆಳಗಾವಿ-ಮಣುಗೂರ ಎಕ್ಸ್ ಪ್ರೆಸ್ ರೈಲು ಜ.17ರಿಂದ ಪ್ರಾರಂಭ; ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ: ಈರಣ್ಣ ಕಡಾಡಿ

Must Read

ಮೂಡಲಗಿ: ಬೆಳಗಾವಿ-ಮಣುಗೂರ ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು (07335/07336) ಸಂಚಾರ ಜ.17 ಮಂಗಳವಾರ ಬೆಳಗಾವಿಯಿಂದ ಪ್ರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.

ಗುರುವಾರ ಜ.12 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ರಾಜ್ಯಸಭೆಯ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿಯಿಂದ ಹೈದರಾಬಾದ್ ಮುಂಬೈನಂತಹ ಪ್ರಮುಖ ನಗರಗಳಿಗೆ ಸಂಪರ್ಕಿಸಲು ರೈಲು ಸೇವೆಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಲಾಗಿತ್ತು.

ನನ್ನ ಮನವಿಗೆ ಸಕಾರಾತ್ಮವಾಗಿ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರೆ ಹಾಗೂ ರೈಲ್ವೆ ಇಲಾಖೆಗೆ ಅಭಿನಂದನೆಗಳನ್ನು ತಿಳಿಸಿದರು.

ಬೆಳಗಾವಿ-ಮಣುಗೂರ ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಜ. 17 ರಿಂದ ಮಾ. 30 ರವರೆಗೆ ಬೆಳಗಾವಿಯಿಂದ ಮಧ್ಯಾಹ್ನ 1.10ಕ್ಕೆ ಹೊರಡುವ ಈ ರೈಲು ಮರುದಿನ ಮಧ್ಯಾಹ್ನ 12.50ಕ್ಕೆ ಮಣುಗೂರ ತಲುಪುವುದು. ಜ.18 ರಿಂದ ಮಣುಗೂರನಿಂದ ಮಧ್ಯಾಹ್ನ 3.40ಕ್ಕೆ ಹೊರಡುವ ರೈಲು ಮರುದಿನ ಮಧ್ಯಾಹ್ನ 3.55ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ಖಾನಾಪೂರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ದರೋಜಿ, ಬಳ್ಳಾರಿ, ಗುಂತಕಲ್ ಮಂತ್ರಾಲಯ ರೋಡ, ರಾಯಚೂರ, ಯಾದಗಿರಿ, ಚಿತ್ತಾಪುರ, ಲಿಂಗಂಪಲ್ಲಿ, ಸಿಕಂದರಾಬಾದ, ವಾರಂಗಲ್ಲ, ಭದ್ರಾಚಲಂ ರೋಡ ಮಾರ್ಗವಾಗಿ ಸಂಚರಿಸಲಿದೆ.

ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದ್ದು ಇನ್ನಷ್ಟು ವ್ಯಾಪಾರ ವಹಿವಾಟು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಸದ ಈರಣ್ಣ ಕಡಾಡಿ ವಿನಂತಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!