Belgaum News: ‘ಮಹಾ’ ಶಿವಸೇನೆ ಸರ್ಕಾರದ ನಡವಳಿಕೆ ಬಗ್ಗೆ ಸಂಸದರು, ಸಿಎಂರೊಂದಿಗೆ ಹಂಚಿಕೊಳ್ಳುತ್ತೇನೆ, ಈರಣ್ಣಾ ಕಡಾಡಿ ಭರವಸೆ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಬೆಳಗಾವಿ: ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದೊಂದಿಗೆ ಕಾಲು ಕೆದರಿ ಜಗಳ ತೆಗೆಯುತ್ತಿರುವ ಶಿವಸೇನೆಯ ನಾಯಕರ ವರ್ತನೆಯ ಬಗ್ಗೆ ಕರ್ನಾಟಕದ ಸಂಸದರ ಗಮನ  ಸೆಳೆಯುವದಾಗಿ ಹಾಗೂ ರಾಜ್ಯಸಭೆಯಲ್ಲಿ ಕರ್ನಾಟಕದ ಪರವಾಗಿ ಧ್ವನಿ ಎತ್ತುವದಾಗಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ಭರವಸೆ ನೀಡಿದ್ದಾರೆ.

ಇಲ್ಲಿನ ತಮ್ಮ ಕಚೇರಿಯಲ್ಲಿ ಇಂದು ನಡೆದ ಕನ್ನಡ ಹೋರಾಟಗಾರರ ಸಭೆಯಲ್ಲಿ  ತಿಳಿಸಿದ್ದಾರೆ.  ಫೆ. 13 ರಂದು ಶಿವಸೇನೆ ಸಂಸದ ರಾಹುಲ್ ಶೆವಾಳೆ ಅವರು ಲೋಕಸಭೆಯಲ್ಲಿ ಗಡಿವಿವಾದ ಪ್ರಸ್ತಾಪಿಸಿದರಲ್ಲದೇ ಸರ್ವೋನ್ನತ ನ್ಯಾಯಾಲಯದಲ್ಲಿರುವ ಗಡಿವಿವಾದ ಪ್ರಕರಣವು ಇತ್ಯರ್ಥವಾಗುವವರೆಗೆ ಬೆಳಗಾವಿಯನ್ನು ಕೇಂದ್ರ ಶಾಸಿತ ಪ್ರದೇಶವನ್ನಾಗಿ ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯದ ಯಾವುದೇ ಸಂಸದರು ಕರ್ನಾಟಕದ ಪರವಾಗಿ ಧ್ವನಿ ಎತ್ತಲಿಲ್ಲ. ಇದನ್ನು ಆಕ್ಷೇಪಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ರಾಜ್ಯದ ಎಲ್ಲ ಸಂಸದರಿಗೆ ಪತ್ರವೊಂದನ್ನು ಬರೆದಿತ್ತು. ಈ ಹಿನ್ನೆಲೆಯಲ್ಲಿ ಕಡಾಡಿ ಅವರು ಆಸಕ್ತಿ ವಹಿಸಿ, ಇಂದು ತಮ್ಮ ಕಚೇರಿಯಲ್ಲಿ ಕನ್ನಡ ಪರ ಹೋರಾಟಗಾರರ ಸಭೆ ಕರೆದಿದ್ದರು. ಗಡಿವಿವಾದ ನೋಡಿಕೊಳ್ಳಲು ಮಹಾರಾಷ್ಟ್ರವು ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದೆ.

- Advertisement -

ಕರ್ನಾಟಕವು ಕಾನೂನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು. ಗಡಿ ಭಾಗದ ಕನ್ನಡಿಗರ ಸಮಸ್ಯೆಗಳನ್ನು ಸಿಎಂಗಳ ಗಮನಕ್ಕೆ ತರಲು ಗಡಿಭಾಗದ ಕನ್ನಡಿಗರ ನಿಯೋಗವೊಂದನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯಬೇಕೆಂದು ಆಗ್ರಹಿಸಿದರು.

ಈ ಸಭೆಯಲ್ಲಿ ವ್ಯಕ್ತವಾದ ಭಾವನೆಗಳನ್ನು ದಿಲ್ಲಿಯಲ್ಲಿ ನಡೆಯುವ ಸಂಸದರ ಸಭೆಯಲ್ಲಿ ವಿವರಿಸುವದಾಗಿ ಭರವಸೆ ನೀಡಿದ ಕಡಾಡಿ ಅವರು ಮುಖ್ಯಮಂತ್ರಿಗಳ ಭೆಟ್ಟಿಗೆ ನಿಯೋಗವನ್ನು ಕರೆದೊಯ್ಯುವದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕನ್ನಡ ಹೋರಾಟಗಾರರಾದ ಮೆಹಬೂಬ ಮಕಾನದಾರ, ರಮೇಶ ಸೊಂಟಕ್ಕಿ, ಕಸ್ತೂರಿ ಭಾವಿ, ಮಹಾಂತೇಶ ರಣಗಟ್ಟಿಮಠ, ಬಾಬು ಸಂಗೋಡಿ, ಅಕ್ಷಯ ಪರಮಾಜ  ಇದ್ದರು.

 

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!