spot_img
spot_img

ವೈ,ಬಿ.ಕಡಕೋಳರ ‘ಇಳೆಗೆ ಹೊಸ ಕಳೆ’ ಕವನ ಸಂಕಲನಕ್ಕೆ ಬೇಂದ್ರೆ ನುಡಿಸಿರಿ ಪುಸ್ತಕ ಪ್ರಶಸ್ತಿ

Must Read

spot_img
- Advertisement -

ಸವದತ್ತಿಃ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ ಅವರ ಕವನ ಸಂಕಲನ ‘ಇಳೆಗೆ ಹೊಸ ಕಳೆ’ ಪ್ರಶಸ್ತಿ ದೊರೆತಿದೆ.

ಕನಕ ಅಧ್ಯಯನ ಪೀಠ ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಪೌಂಡೇಶನ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಭವನದಲ್ಲಿ ಸಪ್ಟಂಬರ್ ೮ ರಂದು ಜರಗುವ ಧಾರವಾಡ ನುಡಿ ಸಡಗರ  ಕಾರ್ಯಕ್ರಮದಲ್ಲಿ  ಬೇಂದ್ರೆ ನುಡಿ ಸಿರಿ ಪುಸ್ತಕ ಪ್ರಶಸ್ತಿ ನೀಡಲಾಗುವುದು ಎಂದು ಚೇತನ ಪೌಂಡೇಶನ್ ಹುಬ್ಬಳ್ಳಿ ಇದರ ರೂವಾರಿಗಳಾದ ಚಂದ್ರಶೇಖರ ಮಾಡಲಗೇರಿ ಪ್ರಕಟಣೆಯಲ್ಲಿ ತಿಳಿಸಿರುವರು.

- Advertisement -

ಇಳಗೆ ಹೊಸ ಕಳೆ ಇವರ ಪ್ರಥಮ ಕವನ ಸಂಕಲನ. ಇದುವರೆಗೂ ಸಾಹಿತ್ಯ ಕ್ಷೇತ್ರದಲ್ಲಿ ಕಥೆ, ಮಕ್ಕಳ ಕಥೆ, ಲಲಿತ ಪ್ರಬಂಧ, ಸಂಪಾದನೆ, ಅಂಕಣ ಬರಹ, ಪ್ರವಾಸ ಸಾಹಿತ್ಯ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೨೩ ಕೃತಿಗಳನ್ನು ರಚಿಸಿರುವ ವೈ.ಬಿ.ಕಡಕೋಳ ಶಿಕ್ಷಣ ಕ್ಷೇತ್ರದಲ್ಲಿ ಕೂಡ ರಾಜ್ಯ ಪ್ರಶಸ್ತಿ (೨೦೧೫-೧೬) ಗೌರವಕ್ಕೆ ಪಾತ್ರರಾದವರು. ಇವರ ಕವನ ಹಚ್ಚು ದೀಪವ ಗೆಳತಿ ಕೂಡ ರಾಜ್ಯ ಪ್ರಶಸ್ತಿ ಕಾವ್ಯ ಸಿರಿ(೨೦೧೪) ಪಡೆದಿರುವುದು.

ಇವರ ಪಯಣಿಗ ಪ್ರವಾಸ ಕಥನವು  ಹಾರೂಗೇರಿಯ ಅಜೂರ ಸಾಹಿತ್ಯ ಪ್ರತಿಷ್ಠಾನದ (೨೦೧೫-೧೬) ಜಿಲ್ಲಾ ಪ್ರಶಸ್ತಿ, ಚರಿತ್ರೆಗೊಂದು ಕಿಟಕಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೇದಕನಲ್ಲಿ ಜರುಗಿದ ರಾಜ್ಯ ಮಟ್ಟದ ೧೫ ನೇ ವರ್ಷದ ಚನ್ನಕೇಶ್ವರ ಉತ್ಸವ ೨೦೧೯ ರಲ್ಲಿ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವುದು.      

ಬೇಂದ್ರೆ ನುಡಿ ಸಿರಿ ಕವನ ಸಂಕಲನ ಪ್ರಶಸ್ತಿಗೆ ಭಾಜನರಾದ ವೈ.ಬಿ.ಕಡಕೋಳ ಅವರನ್ನು ತಾಲೂಕಿನ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಂ.ಎಸ್.ಹೊಂಗಲ, ಅಧ್ಯಕ್ಷರಾದ ಕಿರಣ ಕುರಿ, ನೌಕರರ ಸಂಘದ ಅಧ್ಯಕ್ಷರಾದ ಆನಂದ ಮೂಗಬಸವ, ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ಜನಪದ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಜೈಂಟ್ಸ ಗ್ರುಪ್ ಮುನವಳ್ಳಿ ಹಾಗೂ ಸವದತ್ತಿ ರೇಣುಕಾ ಸಹೇಲಿ ಮಹಿಳಾ ಸಂಘಟನೆ, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಹೀಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿರುವರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group