ಘಟಪ್ರಭಾ: ದೀಪಾವಳಿ ಹಬ್ಬದ ನಿಮಿತ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ವಿಶೇಷ ರೈಲು ಪ್ರಾರಂಭಿಸುವುದರ ಬಗ್ಗೆ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ನ-10 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ ಬೆಳಗಾವಿಯವರೆಗೆ (ಒಂದು ಮಾರ್ಗ) ಹಾಗೂ ನ-14 ರಂದು ಬೆಳಗಾವಿಯಿಂದ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದವರೆಗೆ (ಒಂದು ಮಾರ್ಗ) ವಿಶೇಷ ಎಕ್ಸ್‍ಪ್ರೆಸ್ ರೈಲು ಬಿಡಲು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ಆದೇಶಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶನಿವಾರ ನ-04ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ದಿನಾಂಕ 04-11-2023 ರಂದು ಬೆಳಿಗ್ಗೆ ವಿಶೇಷ ರೈಲಿನ ಬುಕಿಂಗ್ 8 ಗಂಟೆಗೆ ಪ್ರಾರಂಭ ಮಾಡಿದ್ದು ಬೆಳಿಗ್ಗೆ 10.30 ಕ್ಕೆ ಸುಮಾರು 550 ಸ್ಲೀಪರ್ ಕ್ಲಾಸ್ ಹಾಗೂ 20 ಎಸಿ ಟಿಕೇಟ್ ಬುಕ್ ಆಗಿದ್ದು ತುಂಬಾ ಖುಷಿ ಸಂಗತಿ ಎಂದರು.
ರೈಲಿನ ಸಮಯ ಈ ಕೆಳಗಿನಂತಿದೆ.
ದಿನಾಂಕ: 10-11-2023ರಂದು ವಿಶೇಷ ರೈಲು (ಒಂದು ಮಾರ್ಗ) ರೈಲು ಸಂಖ್ಯೆ 06585 ರಾತ್ರಿ 08:00 ಗೆ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 08:00 ಗಂಟೆಗೆ ಬೆಳಗಾವಿಗೆ ತಲುಪುವುದು.
ದಿನಾಂಕ:14-11-2023 ರಂದು ವಿಶೇಷ ರೈಲು ಒಂದು ಮಾರ್ಗ ರೈಲು ಸಂಖ್ಯೆ 06586 ಸಂಜೆ 06:50ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 06:00ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ತಲುಪುವುದು. ಪ್ರಯಾಣಿಕರು ಇದರ ಸದುಪಯೋಗವನ್ನ ಪಡೆದುಕೊಳ್ಳಬೇಕು, ನನ್ನ ಮನವಿಗೆ ಸ್ಪಂದಿಸಿ ಶೀಘ್ರ ರೈಲಿನ ವ್ಯವಸ್ಥೆ ಮಾಡಿದ ರೈಲ್ವೆ ಮಹಾಪ್ರಬಂಧಕರಿಗೆ ಧನ್ಯವಾದಗಳನ್ನು ತಿಳಿಸಿದರು.