spot_img
spot_img

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು- ಬೆಳಗಾವಿ ವಿಶೇಷ ರೈಲು: ಸಂಸದ ಈರಣ್ಣ ಕಡಾಡಿ

Must Read

ಮೂಡಲಗಿ:- ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ದಿ.21 ಮತ್ತು ದಿ.22ರಂದು ಬೆಳಗಾವಿಗೆ ಹಾಗೂ ದಿ.26ರಂದು ಬೆಳಗಾವಿಯಿಂದ ಯಶವಂತಪುರಕ್ಕೆ ವಿಶೇಷ ರೈಲುಗಳನ್ನು ಬಿಡಲಾಗಿದ್ದು ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿರುವ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಬುಧವಾರ ಅ. 19 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು  ಸಾವಿರಾರು ಸಂಖ್ಯೆಯಲ್ಲಿ ದೀಪಾವಳಿ ಹಬ್ಬಕ್ಕೆ  ಪ್ರಯಾಣಿಕರು ತಮ್ಮ ಊರುಗಳಿಗೆ ಬರುತ್ತಿದ್ದು ಖಾಸಗಿ ಬಸ್ಸುಗಳು ಇದೇ ಸಂದರ್ಭದಲ್ಲಿ ಟಿಕೇಟ್ ದರ ಹೆಚ್ಚು ಮಾಡಿದ್ದಾರೆ ಆದ್ದರಿಂದ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳನ್ನು ಬಿಡಲು ಪ್ರಯಾಣಿಕರು ಮನವಿ ಮಾಡಿದ್ದರಿಂದ ಈ ಬಗ್ಗೆ ಇಂದು  ಹುಬ್ಬಳಿಯ ನೈರುತ್ಯ ವಲಯದ ರೈಲ್ವೆ ಮಹಾಪ್ರಬಂಧಕರೊಂದಿಗೆ ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದರಿಂದ ಬೆಳಗಾವಿಯಿಂದ ಯಶವಂತಪುರ ಮತ್ತು ಯಶವಂತಪುರ-ಬೆಳಗಾವಿ ನಡುವೆ ಎರಡು ದಿನದ ಸೂಪರ್ ಫಾಸ್ಟ್ ವಿಶೇಷ ಎಕ್ಸ್ ಪ್ರೆಸ್ ರೈಲು ಬಿಡಲು ಆದೇಶಿಸಿದ್ದಾರೆ

ಯಶವಂತಪುರ-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಯಶವಂತಪುರದಿಂದ 21.10.2022 (ಶುಕ್ರವಾರ) ಮತ್ತು 22.10.2022 (ಶನಿವಾರ) ರಾತ್ರಿ 11:30 ಕ್ಕೆ ಹೊರಟು ಮರುದಿನ ಬೆಳಿಗ್ಗೆ 09:25 ಕ್ಕೆ ಬೆಳಗಾವಿಗೆ ತಲುಪುವುದು ಮತ್ತು ಬೆಳಗಾವಿಯಿಂದ 22.10.2022 (ಶನಿವಾರ) ಬೆಳಿಗ್ಗೆ 11:10 ಕ್ಕೆ ಹೊರಟು ಅದೇ ದಿನ ರಾತ್ರಿ 10:00 ಗಂಟೆಗೆ ಯಶವಂತಪುರಕ್ಕೆ ತಲುಪುವುದು.

ಇದಲ್ಲದೇ ದಿನಾಂಕ 26..10.2022 ರಂದು ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‍ಪ್ರೆಸ್ ಬೆಳಗಾವಿಯಿಂದ ರಾತ್ರಿ 10:00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 08:50ಕ್ಕೆ ಯಶವಂತಪುರಕ್ಕೆ ತಲುಪುತ್ತದೆ ಎಂದು ಹೇಳಿದ್ದಾರೆ.

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!