ಸತ್ಯ ಮಿಥ್ಯದ ನಡುವೆ ಮಾನವನಿಗೆ ಬೇಕು ಸಾಮಾನ್ಯ ಜ್ಞಾನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಸತ್ಯದಲ್ಲಿ ಹೋಗಬೇಕು ಧರ್ಮದಲ್ಲಿ ನಡೆಯಬೇಕು.ಹಿರಿಯರ ಮಾತನ್ನು ಕೇಳಬೇಕು. ಎಲ್ಲರೊಳಗೊಂದಾಗಿರಬೇಕು. ಇವೆಲ್ಲವೂ ನಮ್ಮ ಮಹಾತ್ಮರುಗಳು ತಿಳಿಸಿರುವ ಉಪದೇಶವಾಗಿದೆ. ಮಕ್ಕಳಿಗೆ ಇದನ್ನು ತಿಳಿಸಿ ಬೆಳೆಸುವುದು ಕಷ್ಟವಿಲ್ಲ.ಆದರೆ ತಿಳಿಸೋದಕ್ಕೆ ಇಷ್ಟವಿಲ್ಲವಾದರೆ ಮುಂದಿನ ಜೀವನದಲ್ಲಿ ಕಷ್ಟ ನಷ್ಟ ಇದ್ದೇ ಇರುತ್ತದೆ.

ಆದರೆ ಇವುಗಳನ್ನೆಲ್ಲಾ ಬಿಟ್ಟು ಹೊರಬಂದವರೆ ಇಂದಿನ ಭೌತಿಕ ಜಗತ್ತಿನಲ್ಲಿ ಹಣ, ಅಧಿಕಾರ ಗಳಿಸಿದ್ದಾರೆಂದರೆ ಇವರನ್ನು ನಡೆಸುತ್ತಿರುವ ಶಕ್ತಿ ಯಾವುದು? ಏನೂ ತಿಳಿಯದ ವ್ಯಕ್ತಿಗೆ ದೇಶ ನಡೆಸೋ ಅಧಿಕಾರ ಕೊಡಬಹುದಾದರೆ ಎಲ್ಲಾ ತಿಳಿದ ವ್ಯಕ್ತಿಯ ಕಥೆ ಏನಾಗಬಹುದು? ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ಎಲ್ಲರಿಗೂ ಸರಿಸಮಾನವೆನ್ನುವವರೆ ಸತ್ಯ,ಧರ್ಮದ ವಿರುದ್ದ ನಡೆದು ದೇಶ ಆಳೋದಾದರೆ ಯಾರು ತಾನೆ ಸತ್ಯ,ಧರ್ಮದ ಕಡೆಗೆ ನಡೆಯುತ್ತಾರೆ.

ಹೀಗೆಯೇ ಜನ್ಮಜನ್ಮಗಳು ಕಳೆಯುತ್ತಾ ಆಳು ಅರಸನಾಗಬಹುದು,ಅರಸ ಆಳಾಗಿ ಜನಿಸಬಹುದು. ದೇವಸ್ಥಾನದಲ್ಲಿ ಪೂಜಾರಿಯೇ ದೇವರಾಗಬಹುದು. ಗುರುವನ್ನು ಶಿಷ್ಯನೇ ಆಳಬಹುದು, ಪೋಷಕರ ಶೋಷಣೆ ಮಕ್ಕಳೇ ಮಾಡಬಹುದು…..ಯಾವ ಜನ್ಮದ ಪುಣ್ಯ ಪಾಪಗಳ ಫಲವಾಗಿ ಮಾನವ ಮಹಾತ್ಮನಾಗಬಹುದು, ಅಸುರನಾಗಬಹುದು. ಒಟ್ಟಿನಲ್ಲಿ ಎಲ್ಲಾ ಜೀವ ಭೂಮಿಗೆ ಬಂದಿರೋದು ಸ್ವತಂತ್ರ ಜೀವನ ನಡೆಸಿ ಮೂಲ ಮನೆ ತಲುಪೋದಕ್ಕೆ.

- Advertisement -

ಮನೆಯಿಂದ ಹೊರಬಂದು ದಾರಿತಪ್ಪಿಸಿಕೊಂಡು ಅಡ್ಡದಾರಿ ಹಿಡಿಯುವುದಕ್ಕೆ ಸಹಕಾರ ನೀಡುವುದೆ ಅಧರ್ಮ, ಅಸತ್ಯ. ಹೀಗಾಗಿ ಮೂಲದ ಧರ್ಮದ ಪ್ರಕಾರ ಕರ್ಮ ಅಥವಾ ಕೆಲಸ ಮಾಡಿಕೊಂಡು ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂದಿರೋದು. ಕಾಯಕವೇ ಕೈಲಾಸ ಮಂತ್ರ ಎಲ್ಲಾ ಜೀವಾತ್ಮರಿಗೂ ಅಗತ್ಯ. ಕಾಯಕ ಮಾಡದೆಯೇ ಕೈಲಾಸ ತಲುಪಬಹುದೆ? ಮಾನವ ನಿರ್ಮಿತ ಕೈಲಾಸದಲ್ಲಿ ನಿತ್ಯಾನಂದನಂತವರಿರುವರು.

ಚಿಂತನೆ ಮಾಡೋದರಲ್ಲಿಯೂ ವ್ಯತ್ಯಾಸವಿದೆ.ಒಂದು ಸತ್ಯ ಜ್ಞಾನ ಇನ್ನೊಂದು ಮಿಥ್ಯಜ್ಞಾನ. ಇವೆರಡರ ಮಧ್ಯೆ ನಿಂತ ಮಾನವನಿಗೆ ಬೇಕಿರೋದು ಸಾಮಾನ್ಯ ಜ್ಞಾನ. ನಾನೆಂಬುದಿಲ್ಲ, ನಾನು ಕಾರಣಮಾತ್ರನು  ಹಾಗಾದರೆ ನಾನ್ಯಾರು? ಕೊನೆಯ ಪ್ರಶ್ನೆಗೆ ಉತ್ತರ ಒಳಗಿರುತ್ತದೆ. ಹೊರಗಿನ ನಾನು ಇದನ್ನು ಬಿಟ್ಟು ಹೊರನಡೆದರೆ ಮೂಲದಸತ್ಯ ಧರ್ಮ ಹಿಂದುಳಿಯುತ್ತದೆ.

ಹಿಂದುಳಿದವರಿಗೆ ಜ್ಞಾನದ ನೀಡಿದರೆ ಸಾಕು ಮುಂದೆ ಬರುತ್ತಾರೆ. ಹಣ ಜ್ಞಾನದಿಂದ ಸಂಪಾದಿಸಿದರೆ ಋಣ ಕಳೆಯುತ್ತದೆ. ಋಣ ಕಳೆದ ಮೇಲೆ ಜೀವನ್ಮುಕ್ತಿ. ಮಕ್ಕಳಿಗೆ ಸತ್ಯ ಹೇಳಲು ಬಿಡಿ. ಧರ್ಮದ ಮಾರ್ಗ ತೋರಿಸಿ ನಡಿ ಎಂದಿದ್ದರು ಮಹಾತ್ಮರು. ಭಗವಂತನಿರೋದೆಲ್ಲಿ ಸತ್ಯ ಹಾಗು ಧರ್ಮದಲ್ಲಿ.

ಅದೂ ನಮ್ಮ ನಮ್ಮ ಮೂಲ ಗುರು ಹಿರಿಯರು ನಡೆದು ತೋರಿಸಿದ ದಾರಿಯಲ್ಲಿ. ದಾರಿಯನ್ನೇ ಮುಚ್ಚಿ ಅಸುರರ ಹಿಂದೆ ನಡೆದರೆ ಪರಮಾತ್ಮನ ದಾಸರಾಗಲು ಸಾಧ್ಯವೆ? ಮಾನವನ ಶತ್ರುವೆ ಅತಿಯಾದ ಅಹಂಕಾರ ಸ್ವಾರ್ಥ ಇದನ್ನು ಒಳಗಿಟ್ಟುಕೊಂಡು ಸತ್ಯ ಧರ್ಮ ಅರ್ಥ ಆದರೂ ಬೆಳೆಸೋದು ಕಷ್ಟ.ಸತ್ಯದ ದಾರಿ ಕಷ್ಟವಾದರೂ ಒಗ್ಗಟ್ಟು ಇದ್ದರೆ ಎಲ್ಲಾ ಸಾಧ್ಯ. ಅದ್ವೈತ ದ ಒಳಗೆ ದ್ವೈತ ವಿದ್ದರೂ ಸಮಾನತೆ ವಿಚಾರ ಬಂದಾಗ ಅದ್ವೈತವಾಗುತ್ತದೆ.

ರಾಜಕೀಯ ವಿಚಾರ ಬಂದಾಗ ದ್ವೈತ ವಾಗುತ್ತದೆ. ರಾಜಯೋಗದ ವಿಚಾರ ಬಂದಾಗ ಅದ್ವೈತ ವಾಗುತ್ತದೆ. ದೇಹದ ವಿಚಾರ ಬಂದಾಗ ದ್ವೈತ, ದೇಶದ ವಿಚಾರ ದಲ್ಲಿ ಅದ್ವೈತ ದ ಒಗ್ಗಟ್ಟು ಅತ್ಯಗತ್ಯವಾಗಿತ್ತು.ಹಾಗೆ ಧರ್ಮ, ಸತ್ಯ,ನ್ಯಾಯ ನೀತಿ,ಸಂಸ್ಕೃತಿ. ಅಸಂಖ್ಯಾತವನ್ನು ಒಂದಾಗಿಸೋದು ಬಹಳ ಕಷ್ಟದ ಕೆಲಸ. ಕೊನೆಪಕ್ಷ ನಮ್ಮೊಳಗಿನ ಒಂದೆ ಸತ್ಯ,ಧರ್ಮ ಕರ್ಮಕ್ಕೆ ತಕ್ಕಂತೆ ನಡೆಯೋ ಸ್ವಾತಂತ್ರ್ಯ ನಮಗಿದ್ದರೆ ಎಷ್ಟೋ ಬದಲಾವಣೆ ಸಾಧ್ಯ. ಇದಕ್ಕೆ ಬೇಕು ಆಂತರಿಕ ಶುದ್ದಿ, ಯೋಗ್ಯ ಶಿಕ್ಷಣ, ಯೋಗ ಜೀವನ, ಯೋಗ್ಯ ಗುರು, ವಿಜ್ಞಾನವನ್ನು ವಿಶೇಷಜ್ಞಾನ, ವಿದೇಶಿ ಜ್ಞಾನ, ವಿಪರೀತ ಜ್ಞಾನವೆನ್ನಬಹುದು. ಅತಿ ಆದರೆ ಅಮೃತವೂ ವಿಷವಾಗುತ್ತದೆ.

ಅದ್ವೈತ ತತ್ವ ಜನಸಾಮಾನ್ಯರಿಗೆ ಕಬ್ಬಿಣದ ಕಡಲೆ ಎಂದು ತಿಳಿಸದಿರೋದರ ಬದಲಾಗಿ ಸಾಮಾನ್ಯಜ್ಞಾನದಿಂದ ಎಲ್ಲರೊಳಗಿರುವ ಆ ಪರಾಶಕ್ತಿ ಪರಮಾತ್ಮನ ಕಾಣಲು ಸಾಮಾನ್ಯರ ಮದ್ಯೆ ಜೀವನ ನಡೆಸಿ ಸತ್ಯ ಅರ್ಥ ಮಾಡಿಕೊಳ್ಳಲು ಸಮಾಜದಲ್ಲಿ ಕಷ್ಟ ಕೊನೆಪಕ್ಷ ಸಂಸಾರದಲ್ಲಿ ಒಗ್ಗಟ್ಟು ಇದ್ದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬಹುದು.

ಮನಸ್ಸಿನಲ್ಲಿ ನಾವು ಮಾಡುವ ಪ್ರಾರ್ಥನೆಯಿಂದಲೇ ಎಷ್ಟೋ ಉತ್ತಮ ಬದಲಾವಣೆ ಸಾಧ್ಯ. ಮನಸ್ಸಿದ್ದರೆ ಮಾರ್ಗ.ಸಮಾನಮನಸ್ಕರು, ಸತ್ಸಂಗ ಗಳಿಂದ ಸಾಧ್ಯ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!