ಮೈಸೂರು -ನಗರದ ಶ್ರೀರಾಂಪುರದಲ್ಲಿರುವ ಉತ್ತರಾದಿ ಮಠಕ್ಕೆ ಸಂಬಂಧಿಸಿದ ಶ್ರೀವೇಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಸೆ.೩ರಿಂದ ೧೮ರವರೆಗೆ ಪ್ರತಿದಿನ ಸಂಜೆ ೬ರಿಂದ ೭ರವರೆಗೆ ಶ್ರೀ ಉತ್ತರಾದಿ ಮಠದ ಮಠಾಧೀಶರಾದ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞಾನಾಸಾರ ನಾಡಿನ ಪ್ರಸಿದ್ಧ ವಿದ್ವಾಂಸರಾದ ಪಂ.ಶ್ರೀ ಪುರುಷೋತ್ತಮಾಚಾರ್ಯ ಪುರೋಹಿತ್ ಅವರಿಂದ ಸಂಪೂರ್ಣ ಭಾಗವತ ಪ್ರವಚನವನ್ನು ಆಯೋಜಿಸಲಾಗಿದೆ.
ಸೆ.೧೭ರಂದು ಮಂಗಳವಾರ ಬೆಳಿಗ್ಗೆ ಅನಂತಪದ್ಮನಾಭ ವ್ರತವನ್ನು ಏರ್ಪಡಿಸಲಾಗಿದೆ. ಸೆ.೧೮ರಂದು ಬುಧವಾರ ಮಂಗಳ ಮಹೋತ್ಸವದ ಪರ್ವಕಾಲದಲ್ಲಿ ಬೆಳಿಗ್ಗೆ ‘ವಾಸುದೇವ ಮಂತ್ರ ಹೋಮ’ವನ್ನು ಏರ್ಪಡಿಸಲಾಗಿದೆ.
ಭಾಗವತವು ಪರಮಪಾವನ, ಪರಮ ಮಂಗಳವಾದ ಗ್ರಂಥ. ಇದರ ಶ್ರವಣವು ಸಕಲ ಅನಿಷ್ಟಗಳನ್ನು ನಿವೃತ್ತಿ ಮಾಡುವ, ಸಕಲ ಅಭೀಷ್ಟಗಳನ್ನು ನೀಡುವ, ವಿವಾಹ ಯೋಗವನ್ನೂ ನೀಡುವ ಗ್ರಂಥವಾಗಿದೆ. ಭಾಗವತವು ಭಗವಂತನನ್ನು ಮೆಚ್ಚಿಸುವುದರಲ್ಲಿ ಎತ್ತಿದ ಕೈ. ಇಂತಹ ‘ಪ್ರೋಷ್ಠಪದಿ ಸಂಪೂರ್ಣ ಭಾಗವತ ಪ್ರವಚನ’ ಅತ್ಯಂತ ಸುದುರ್ಲಭ. ಅತ್ಯಂತ ಭಕ್ತಿಯ ಈ ಸಾಧನ ಪತ್ರದಲ್ಲಿ ತಾವೆಲ್ಲರೂ ಆಗಮಿಸಿ ಸಜ್ಜನರ ಈ ಸಮಾಗಮದಲ್ಲಿ ಸೇರಿಕೊಂಡು ಆ ಭಗವಂತನ, ದೇವತೆಗಳ, ಗುರುಗಳ ಕೃಪೆಗೆ ಪಾತ್ರರಾಗಿ ಭಕ್ತಿಯ ರಸದೌತಣವನ್ನು ಚೆನ್ನಾಗಿ ಆಸ್ವಾದಿಸಿ ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯಬೇಕೆಂದು ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದ ಪ್ರಧಾನ ವ್ಯವಸ್ಥಾಪಕರಾದ ಪಂ.ಹೇಮಂತಾಚಾರ್ಯ ಗುಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ೮೧೪೭೨೦೫೩೨೬ ಸಂಪರ್ಕಿಸಬಹುದು.